ಕೆಮ್ಮಾರ: ಇಲಿಪಾಷಾಣ ತಿಂದು ಎರಡೂವರೆ ವರ್ಷದ ಹೆಣ್ಣು ಮಗು ಸಾವು
Team Udayavani, Jun 20, 2021, 3:59 PM IST
ಕೆಮ್ಮಾರ: ಇಲಿ ಪಾಷಾಣ ತಿಂದು ಎರಡೂವರೆ ವರ್ಷದ ಹೆಣ್ಣು ಮಗುವೊಂದು ಮೃತಪಟ್ಟ ದಾರುಣ ಘಟನೆ ಬಜತ್ತೂರು ಗ್ರಾಮದ ಕೆಮ್ಮಾರದಲ್ಲಿ ನಡೆದಿದೆ.
ಕೆಮ್ಮಾರ ನಿವಾಸಿ, ನಿವೃತ್ತ ಸೈನಿಕ ಸೈಜು ಎಂಬವರ ಪುತ್ರಿ, ಎರಡೂವರೇ ವರ್ಷದ ಶ್ರೇಯಾ ಮೃತಪಟ್ಟ ಮಗು.
ಮಗುವಿನ ತಂದೆ, ತಾಯಿ ನಾಯಿ ಗೂಡಿನ ಮೇಲಿದ್ದ ಸಾಮಾಗ್ರಿಗಳನ್ನು ಕ್ಲೀನ್ ಮಾಡುತ್ತಿದ್ದ ವೇಳೆಯಲ್ಲಿ ಅದರಲ್ಲಿ ಹಿಂದೆ ತಂದಿದ್ದ ಇಲಿ ಪಾಷಾಣದ ಟ್ಯೂಬ್ ಸಹ ಇತ್ತು. ಮನೆಯವರು ಕೆಲಸ ಮಾಡುತ್ತಿದ್ದಂತೆ ಮಗು ಆಟವಾಡುತ್ತ ಬಂದು ಇಲಿ ಪಾಷಾಣ ತಿಂದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮಂಗಳೂರು : ನಿಯಮ ಮೀರಿ 4 ಜೋಡಿಗಳ ಮದುವೆ; ಅಧಿಕಾರಿಗಳ ದಾಳಿ
ಮಧ್ಯಾಹ್ನದ ವೇಳೆ ಮಗುವಿಗೆ ವಾಂತಿ ಆರಂಭಗೊಂಡಿದ್ದು ತಕ್ಷಣ ಉಪ್ಪಿನಂಗಡಿಯ ಆಸ್ಪತ್ರೆಗೆ ಕರೆತಂದು ಬಳಿಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗು ತೀವ್ರ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ರವಿವಾರ ( ಜೂನ್ 20) ರಂದು ಬೆಳಿಗ್ಗೆ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ತಪಾಸಣೆ ವೇಳೆ ಮಗು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೃತ ಶ್ರೇಯಾ ತಂದೆ ಸೈಜು, ತಾಯಿ ದೀಪ್ತಿ,ಸಹೋದರ ಸಿಯೋನ್‌ರನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ದಾವಣಗೆರೆ: ಅಪ್ರಾಪ್ತೆಯ ವಿವಾಹಕ್ಕೆ ತಯಾರಿ… ಅಧಿಕಾರಿಗಳಿಂದ ವಿವಾಹಕ್ಕೆ ತಡೆ
ಕ್ಷೇತ್ರದ ಮತದಾರರು ನನ್ನ ಜೊತೆ ಇದ್ದಾರೆ, ಹೆದರುವ ಪ್ರಶ್ನೆಯೇ ಇಲ್ಲ: ಶಾಸಕ ಮುನವಳ್ಳಿ
ಚಿಕ್ಕೋಡಿ: ಸಂಬಂಧಿಯನ್ನೇ ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಚಾರ್ಮಾಡಿ ಘಾಟ್: ದುಷ್ಕರ್ಮಿಗಳ ಗುಂಡೇಟಿಗೆ ಕಡವೆ ಬಲಿ
ಮರೆಯಾದ ಯಕ್ಷಗಾನ ರಂಗದ ಪರಿಪೂರ್ಣ ಪೋಷಕ ಪಾತ್ರಧಾರಿ ಜಂಬೂರು ರಾಮಚಂದ್ರ ಶಾನುಭೋಗ್