ಸಂಪಾಜೆ: ಕಾಡಾನೆ ದಾಳಿಗೆ 40 ಅಡಿಕೆ ಮರ, 2 ತೆಂಗಿನಮರ ನಾಶ; ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ
Team Udayavani, Feb 27, 2021, 4:32 PM IST
ಅರಂತೋಡು: ಸಂಪಾಜೆ ಗ್ರಾಮದ ಗೂನಡ್ಕ ಕೆ.ಪಿ ಜಗದೀಶ ಅವರ ತೋಟಕ್ಕೆ ಕಾಡಾನೆಗಳು ನುಗ್ಗಿದ್ದು, ಕೃಷಿಯನ್ನು ನಾಶಪಡಿಸಿವೆ.
ಕೆ.ಪಿ.ಜಗದೀಶ್ ಅವರಿಗೆ ಸೇರಿದ 40 ಅಡಿಕೆ ಮರ ,2 ತೆಂಗಿನ ಮರಗಳನ್ನು ಕಾಡಾನೆಗಳು ನಾಶಪಡಿಸಿವೆ. ಇದರಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಕಳೆದ ನಲ್ವತು ವರ್ಷಗಳಿಂದ ಇವರ ತೋಟಕ್ಕೆ ಕಾಡಾನೆಗಳು ಸತತವಾಗಿ ದಾಳಿ ಮಾಡುತ್ತಿವೆ. ಇದರಿಂದ ಜಗದೀಶ್ ಅವರು ರಬ್ಬರ್, ಬಾಳೆ, ಕೊಕ್ಕೊ ಸೇರಿದಂತೆ ಇತರ ಬೆಳೆಗಳನ್ನು ಕಳೆದುಕೊಂಡಿದ್ದು ಲಕ್ಷಗಟ್ಟಲೆ ನಷ್ಟಕ್ಕೆ ಒಳಗಾಗಿದ್ದರೆ.
ಇದನ್ನೂ ಓದಿ:ಹಿಂದೂ ಧರ್ಮ- ಹಿಂದುತ್ವ ಬೇರೆ ಬೇರೆ, ಅಡಿಯಾಳಾಗಿ ಬದುಕಬೇಕೆಂಬುದು ಹಿಂದುತ್ವ: ಯತೀಂದ್ರ
ಕಳೆದ ವರ್ಷ ಅವರ ತೋಟಕ್ಕೆ ದಾಳಿ ಮಾಡಿದ ಸಂದರ್ಭ ವಿದ್ಯುತ್ ಕಂಬ ಮುರಿದು ಬಿದ್ದು ವಿದ್ಯುತ್ ಶಾಕ್ ಹೊಡೆದ ಪರಿಣಾಮ ಜಾನುವಾರುಗಳು ಸಾವನ್ನಪ್ಪಿದ್ದವು.
ಸಂಪಾಜೆ ಗ್ರಾಮದ ಬಯ್ಲೆ ಕುಯಿಂತೋಡು, ಕೈಪಡ್ಕ, ನೆಲ್ಲಿಕುಮೇರಿ, ಸಂಜಾಜೆ, ಸಂಪಾಜೆ ಬಯಲು, ತೋಡಿಕಾನ ಗ್ರಾಮದ ಬಾಳಕಜೆ, ಪಟ್ಟಿ, ಪೆತ್ತಾಜೆ, ಶೆಟ್ಟಿಯಡ್ಕ, ಅರಂತೋಡು ಗ್ರಾಮದ ಜೋಡಿಪಣೆ, ಚುಕ್ರಡ್ಕ, ಹಾಗೂ ಮಂಡೆಕೋಲು, ಆಲೆಟ್ಟಿ, ಅಜ್ಜಾವರ, ಪುಳಿಕುಕ್ಕು, ಹರಿಹರ, ಕೊಲ್ಲಮೊಗ್ರ, ಬಾಳುಗೋಡು ಈ ಭಾಗಗಳ ಕ್ರಷಿ ತೋಟಗಳಿಗೆ ಆಗಾಗ ಕಾಡಾನೆಗಳ ದಾಳಿ ನಡೆಯುತ್ತಿದ್ದು ರೈತರು ನಷ್ಟ ಅನುಭಸುತ್ತಿದ್ದಾರೆ.
ಇದನ್ನೂ ಓದಿ: ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್
ತಾಲೂಕಿನ ಅನೇಕ ಕಡೆ ಆನೆಗಳು ಬರುವ ಹಾದಿಗೆ ಅಡ್ಡಲಾಗಿ ಆನೆಕಂದಕಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈ ಕಂದಕಗಳನ್ನು ದಾಟಿ ಬರುವ ಆನೆಗಳು ಕ್ರಷಿ ತೋಟಗಳಿಗೆ ನುಗ್ಗಿ ಕೃಷಿ ಬೆಳೆಗಳನ್ನು ನಾಶ ಪಡಿಸುತ್ತಿದೆ. ಇದಿರಂದಾಗಿ ಶಾಶ್ವತ ಪರಿಹಾರಕ್ಕಾಗಿ ಕೃಷಿಕರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಕರ್ತವ್ಯದ ಜೊತೆಗೆ ಸಮಾಜ ಸೇವೆ: ಜಿನ್ನು ಅಜ್ಜಿಗೆ ನೆರವಾದ ಬಂಟ್ವಾಳದ ಆರಕ್ಷಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸವಣೂರು ಗೇಟ್ ಬಳಿ ರೈಲುಹಳಿಯಲ್ಲಿ ಯುವಕನ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆ!
ಬೆಳ್ತಂಗಡಿಯಲ್ಲಿ ಮತ್ತೆ ಗಾಳಿ, ಮಳೆ : ವಿವಿಧೆಡೆಗಳಲ್ಲಿ ಅಂಗಡಿ, ಮನೆ, ಅಡಿಕೆ ತೋಟಗಳಿಗೆ ಹಾನಿ
ಮುಸ್ಲಿಂ ಯುವಕನಿಂದ ಕಾಳಿ ಮಾತೆಯ ಆರಾಧನೆ : ಸಾಮರಸ್ಯ ಸಾರುತ್ತಿದ್ದಾನೆ ರಮ್ಲಾನ್
ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಪುತ್ತೂರು: ಮಹಾಲಿಂಗೇಶ್ವರ ಮತ್ತು ವೆಂಕಟರಮಣ ದೇವರ ಮುಖಾಮುಖಿ.!
ಜಾತ್ರೆಯಲ್ಲಿ ಕಳೆದುಹೋದ ಚಿನ್ನಾಭರಣ ಹಿಂದಿರುಗಿಸಿದ ಪೊಳಲಿ ದೇವಸ್ಥಾನದ ಸಿಬ್ಬಂದಿ
MUST WATCH
ಹೊಸ ಸೇರ್ಪಡೆ
ಸೋಂಕು ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಇನ್ನಷ್ಟು ನಗರಗಳಿಗೆ ವಿಸ್ತರಣೆ: ಗೃಹ ಸಚಿವ ಬೊಮ್ಮಾಯಿ
10 ದಿನಗಳಲ್ಲಿ ಮತ್ತಷ್ಟು ಹೆಚ್ಚಳ; ಭಾರತದಲ್ಲಿ 24 ಗಂಟೆಯಲ್ಲಿ 2 ಲಕ್ಷ ಕೋವಿಡ್ ಪ್ರಕರಣ ಪತ್ತೆ
ಬುಕಿಯಿಂದ ಬಿಟ್ ಕಾಯಿನ್, ಪತ್ನಿಗಾಗಿ ಐಫೋನ್ ಪಡೆದಿದ್ದ ಹೀತ್ ಸ್ಟ್ರೀಕ್ ಗೆ 8 ವರ್ಷ ನಿಷೇಧ!
ಹಿಂದಿಯ ‘ಅನ್ನಿಯನ್’ ಗೆ ರಣವೀರ್ ಸಿಂಗ್ ಹೀರೋ: ಶಂಕರ್ ಆಕ್ಷನ್ ಕಟ್
‘ಎಂಜಾಯ್ ಎಂಜಾಮಿ ಕುಕ್ಕೂ ಕುಕ್ಕೂ..’ : ವೈರಲ್ ಹಾಡಿನ ಹಿಂದಿರುವುದು ದುಡಿದು ದಣಿದವರ ಬದುಕು