ಕನ್ನುಕೆರೆ: ಪಾದಚಾರಿಗೆ ಕಾರು ಢಿಕ್ಕಿ; ಗಂಭೀರ ಗಾಯ
Team Udayavani, Feb 21, 2021, 3:53 PM IST
ಕನ್ನುಕೆರೆ( ತೆಕ್ಕಟ್ಟೆ): ಇಲ್ಲಿನ ರಾಷ್ಟ್ರೀಯ ಹೆದ್ದಾರಿ-66 ಗ್ರೇಸ್ ಆಡಿಟೋರಿಯಂನ ಎದುರು ಅತೀವೇಗದಿಂದ ಬಂದ ಕಾರು ಪಾದಚಾರಿ ಗೆ ಢಿಕ್ಕಿ ಹೊಡೆದ ಘಟನೆ ನಡೆದಿದೆ.
ಮದುವೆ ಸಮಾರಂಭ ಮುಗಿಸಿ ಹಿಂದಿರುಗುವ ಸಂದರ್ಭದಲ್ಲಿ ಮಧ್ಯಾಹ್ನ 2:20ರ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಪಾದಾಚಾರಿ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯರು ತತ್ ಕ್ಷಣವೇ ಕೋಟೇಶ್ವರ ಖಾಸಗಿ ಆಸ್ಪತ್ರೆ ಗೆ ದಾಖಲಿಸಿದರಾದರೂ ಕೂಡಾ ಗಂಭೀರ ಗಾಯಗಳಾಗಿರುವ ಪರಿಣಾಮ ಮಣಿಪಾಲ ಆಸ್ಪತ್ರೆ ಗೆ ಸಾಗಿಸಲಾಗಿದೆ.
ಗಾಯಾಳು ಸುಮಾರು 55 ವರ್ಷ ಮೇಲ್ಪಟ್ಟವರು ಎಂದು ಹೇಳಲಾಗಿದೆ.
ಇದನ್ನೂ ಓದಿ: ದೇಣಿಗೆ ನೀಡುವುದಿಲ್ಲವಾದರೆ ಸಿದ್ದು, HDK ಬಾಯಿ ಮುಚ್ಚಿಕೊಂಡು ತೆಪ್ಪಗಿರಲಿ: ಪ್ರಹ್ಲಾದ್ ಜೋಶಿ