ಕೋಟ : ನೇಣು ಬಿಗಿದುಕೊಂಡು ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ
Team Udayavani, Jun 29, 2022, 12:07 AM IST
ಕೋಟ : ಸಾಲಿಗ್ರಾಮ ಪಾರಂಪಳ್ಳಿ ಮದ್ರಸಾ ಬಳಿಯ ನಿವಾಸಿ ಸಯ್ಯದ್ ಬ್ಯಾರಿ ಅವರ ಪುತ್ರಿ ಮಿಸ್ರಿಯಾ (19) ಜೂ. 27ರಂದು ಸಂಜೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕುಂದಾಪುರ ಕೋಡಿಯ ಖಾಸಗಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಆಕೆ ಜೂ. 27ರಂದು ಕಾಲೇಜಿಗೆಂದು ಹೋದವಳು ಸಂಜೆ ಮನೆಗೆ ಬಂದಾಗ ತಲೆನೋವು ಇದೆ ಎಂದು ಹೇಳಿ ಕೋಣೆಗೆ ಹೋಗಿ ಮಲಗಿದ್ದಳು. ಅನಂತರ ಆಕೆಯ ಸಹೋದರಿ ಕೋಣೆಯ ಬಾಗಿಲು ತೆರೆದು ನೋಡಿದಾಗ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತತ್‌ಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆ ತಲುಪುವಾಗಲೇ ಆಕೆ ಮೃತಪಟ್ಟಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಯಾವುದೋ ಕಾರಣಕ್ಕೆ ಜೀವನದಲ್ಲಿ ಜುಗುಪ್ಸೆ ಹೊಂದಿ ಈ ರೀತಿ ಮಾಡಿ ಕೊಂಡಿದ್ದಾಳೆ ಎನ್ನಲಾಗಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.