ರೋಗಿಗಳಿಗೆ ತಿಳಿಯದಂತೆ ಅರೆನಗ್ನಗೊಳಿಸಿ ವಿಡಿಯೋ ಚಿತ್ರೀಕರಿಸಿದ ನಕಲಿ ವೈದ್ಯನ ಬಂಧನ

ಸ್ತ್ರೀಯರ ಬಟ್ಟೆ ಬಿಚ್ಚಿಸಿ ಚಿತ್ರೀಕರಿಸಿದ ನಕಲಿ ವೈದ್ಯ; ಆಕ್ಯೂಪಂಕ್ಚರ್ ಚಿಕಿತ್ಸೆ ನೆಪದಲ್ಲಿ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ; ಕೇಸ್‌ ದಾಖಲಾಗುತ್ತಿದ್ದಂತೆ ಪರಾರಿ ಆಗಿದ್ದ ನಕಲಿ ಡಾಕ್ಟರ್‌ ಬಂಧನ

Team Udayavani, Nov 17, 2022, 12:40 PM IST

9

ಬೆಂಗಳೂರು: ಆಕ್ಯೂಪಂಕ್ಚರ್‌ ಚಿಕಿತ್ಸೆ ನೆಪದಲ್ಲಿ ಮಹಿಳೆಯರ ಬಟ್ಟೆ ಬಿಚ್ಚಿಸಿ ಅಂಗಾಂಗ ಮುಟ್ಟುವುದಲ್ಲದೆ, ಅರೆನಗ್ನ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ ನಕಲಿ ವೈದ್ಯನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮತ್ತಿಕೆರೆಯ ವೆಂಕಟರಮಣ್‌ (57) ಬಂಧಿತ ಆರೋಪಿ.

ಈತ ಮತ್ತಿಕೆರೆಯ ತನ್ನ ಮನೆಯ ಬಳಿ ಆಕ್ಯೂಪಂಕ್ಚರ್‌ ಕ್ಲಿನಿಕ್‌ ತೆರೆದು ತನ್ನ ಕ್ಲಿನಿಕ್‌ಗೆ ಬರುವ ಯುವತಿಯರು ಮತ್ತು ಮಹಿಳೆಯರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಬಟ್ಟೆಗಳನ್ನು ಬಿಚ್ಚಿಸಿ, ಅಂಗಾಂಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ.

ಅಲ್ಲದೆ, ಅದನ್ನು ರೋಗಿಗಳಿಗೆ ತಿಳಿಯದಂತೆ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದ. ಇತ್ತೀಚೆಗೆ ಯುವತಿಯೊಬ್ಬಳು ಚಿಕಿತ್ಸೆಗೆ ಹೋದಾಗ, ತನ್ನ ವಿಕೃತಿ ಮೆರೆದಿದ್ದ. ಅದನ್ನು ಗಮನಿಸಿದ ಯುವತಿ ಪೋಷಕರಿಗೆ ಮಾಹಿತಿ ನೀಡಿದ್ದಳು. ಬಳಿಕ ಈತನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮತ್ತೂಂದು ಪ್ರಕರಣದಲ್ಲಿ ಕ್ಲಿನಿಕ್‌ಗೆ ಬಂದಿದ್ದ ಅಪ್ರಾಪ್ತೆಗೂ ಅರೆನಗ್ನಗೊಳಿಸಿ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಂಡಿದ್ದ. ಅದನ್ನು ಗಮನಿಸಿದ ಸಂತ್ರಸ್ತೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ನೊಂದ ಪೋಷಕರು ಬಸವನ ಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದರು.

ಇನ್ನೊಂದು ಪ್ರಕರಣದಲ್ಲಿ ಮಹಿಳೆಯೊಬ್ಬರು ಕಾಲು ನೋವಿನ ಚಿಕಿತ್ಸೆಗೆ ಹೋದಾಗ ಬಟ್ಟೆ ತೆಗೆಸಿ ಚಿಕಿತ್ಸೆ ಕೊಡಲು ಆರಂಭಿಸಿದ್ದಾನೆ. ಅದನ್ನು ಪ್ರಶ್ನಿಸಿದ ಮಹಿಳೆಗೆ ತಮ್ಮ ಮನೆಯವರಿಗೆ ತಿಳಿಸಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ. ಅದೇ ಮಹಿಳೆ ಮತ್ತೂಮ್ಮೆ ಹೋದಾಗಲೂ ಆರೋಪಿ ಅದೇ ರೀತಿ ನಡೆದುಕೊಂಡಿದ್ದಾನೆ. ಆಗ ಆತನ ಮೊಬೈಲ್‌ ಕಸಿದುಕೊಂಡು ನೋಡಿದಾಗ ಹತ್ತಾರು ವಿಡಿಯೋಗಳು ಬೆಳಕಿಗೆ ಬಂದಿವೆ. ಬಳಿಕ ಮಹಿಳೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದ. ಮತ್ತೂಂದೆಡೆ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಆಗುತ್ತಿದ್ದಂತೆ ಕಾರ್ಯಾಚರಣೆ ಆರಂಭಿಸಿದ ಮಹಿಳಾ ಸಂರಕ್ಷಣಾ ದಳದ ಎಸಿಪಿ ಮಾರ್ಗದರ್ಶನದಲ್ಲಿ ಪಿಐ ಗೋವಿಂದರಾಜು, ಹಜರೇಶ್‌ ಕಿಲ್ಲೇದಾರ್‌ ಮತ್ತು ದುರ್ಗ ಮತ್ತು ತಂಡ ಆರೋಪಿಯನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿದೆ. ಈತನ ವಿರುದ್ಧ ಯಶವಂತಪುರ, ಬಸವನಗುಡಿ ಮತ್ತು ಸಿಇಎನ್‌ ಠಾಣೆಯಲ್ಲಿ ಆರೋಪಿಯ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಪೋಕ್ಸೋ ಪ್ರಕರಣ ಕೂಡ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.

ಪಿಯುಸಿ ಮಾತ್ರ ಓದಿದ್ದರೂ ತರಬೇತಿ ಪಡೆದು ಕ್ಲಿನಿಕ್‌ ತೆರೆದಿದ್ದ

ಆಂಧ್ರಪ್ರದೇಶ ಗುತ್ತಿತಾಡಪತ್ರಿ ಮೂಲದ ವೆಂಕಟರಮಣ್‌ ಅಲಿಯಾಸ್‌ ವೆಂಕಟ್‌, ಜಾಲಹಳ್ಳಿಯ ಬಿಇಎಲ್‌ ಶಾಲಾ ಮತ್ತು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದಾನೆ. ನಂತರ ಮಾರತ್‌ಹಳ್ಳಿಯ ಪಿಟಿಲೆಟ್‌ ಇಂಡಸ್ಟ್ರೀಟ್‌ ಕಂಪನಿಯಲ್ಲಿ 10 ವರ್ಷ ಕಾಲ ಕಮರ್ಷಿಯಲ್‌ ಮ್ಯಾನೇಜರ್‌ ಆಗಿದ್ದ.

ಈ ಮಧ್ಯೆ ವೈದ್ಯರೊಬ್ಬರ ಸಹಾಯದಿಂದ ಮೆಜೆಸ್ಟಿಕ್‌ನಲ್ಲಿನ ಆರ್ಯುರ್ವೇದ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ವೆಂಕಟರಮಣ ಭಾಗವಹಿಸಿದ್ದ. ಆಗ ವ್ಯಕ್ತಿಯೊಬ್ಬರು ಪರಿಚಯವಾಗಿ ಜಯನಗರ 4ನೇ ಹಂತದಲ್ಲಿ ಆಕ್ಯೂಪೈ ಇಎಂ ಇನ್ಸಿಟ್ಯೂಟ್‌ ಬಗ್ಗೆ ಮಾಹಿತಿ ಪಡೆದು, ಅಲ್ಲಿ 2 ವರ್ಷ ತರಬೇತಿ ಪಡೆದಿದ್ದ. ಈ ಆಧಾರದ ಮೇಲೆ ಮನೆಯ ಬಳಿ 2018ರಲ್ಲಿ ಮನೆಯ ಸಮೀಪದಲ್ಲಿ ಆಕ್ಯೂಪಂಕ್ಚರ್‌ ಕ್ಲಿನಿಕ್‌ ತೆರೆದು ಚಿಕಿತ್ಸೆ ನೀಡಲು ಆರಂಭಿಸಿದ್ದಾನೆ ಎಂದು ಪೊಲೀಸರು ಹೇಳಿದರು.

ಮೊಬೈಲ್‌ನಲ್ಲಿದ್ದವು ನೂರಾರು ವಿಡಿಯೋಗಳು

ಆರೋಪಿ ಮೊಬೈಲ್‌ ಜಪ್ತಿ ಮಾಡಿದ ಪೊಲೀಸರಿಗೆ ಶಾಕ್‌ ಕಾದಿತ್ತು. ಏಕೆಂದರೆ ಆರೋಪಿ ಮೊಬೈಲ್‌ನಲ್ಲಿ ಮಾತ್ರವಲ್ಲದೆ, ಒಂದು ಟಿಬಿ ಹಾರ್ಡ್‌ಡಿಸ್ಕ್ ತುಂಬುವಷ್ಟು ವಿಡಿಯೋಗಳನ್ನು ಇಟ್ಟುಕೊಂಡಿದ್ದಾನೆ ಎಂದು ಹೇಳಲಾಗಿದೆ. ಸುಮಾರು 3-4 ವರ್ಷಗಳಿಂದ ಆರೋಪಿ ಕೃತ್ಯ ಎಸಗುತ್ತಿರುವುದರಿಂದ ಆರೋಪಿ ಎಲ್ಲ ವಿಡಿಯೋಗಳನ್ನು ಶೇಖರಿಸಿ ಕೊಂಡಿದ್ದಾನೆ. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಯ ಪತ್ನಿ, ಮಗಳು ಈತನನ್ನು ಬಿಟ್ಟು ಬೇರೆಡೆ ವಾಸವಾಗಿದ್ದಾರೆ. ಹೀಗಾಗಿ ತನ್ನ ವೈಯಕ್ತಿಕ ಬಾಧೆಗಳ ಈಡೇರಿಕೆಗೆ ಈ ರೀತಿ ಮಾಡಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ಈತನಿಂದ ವಂಚನೆಗೊಳಗಾದ ಸಂತ್ರಸ್ತರು ದೂರು ನೀಡಬಹುದು ಎಂದು ಪೊಲೀಸರು ಮಾಹಿತಿ ನೀಡಿದರು.

 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.