ಶೇ.80 ಮಹಿಳೆಯರಿಗಿದೆ ಕೃಷಿ ಕ್ಷೇತ್ರದೊಂದಿಗೆ ಸಂಬಂಧ


Team Udayavani, Oct 20, 2021, 6:10 PM IST

2

ಶಿವಮೊಗ್ಗ: ಕೃಷಿ ಮತ್ತು ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಹೆಚ್ಚಿಸಿ ಆಹಾರ ಭದ್ರತೆ ಸುಧಾರಿಸಲು ಮತ್ತು ಗ್ರಾಮೀಣ ಬಡತನ ನಿರ್ಮೂಲನೆಗಾಗಿ ಸ್ಥಳೀಯ ಮಹಿಳೆಯರು ಸೇರಿದಂತೆ ಗ್ರಾಮೀಣ ಮಹಿಳೆಯರ ನಿರ್ಣಾಯಕ ಪಾತ್ರ ಮತ್ತು ಕೊಡುಗೆ ಗುರುತಿಸಲು ಭಾರತ ಸರ್ಕಾರ ಅಕ್ಟೋಬರ್‌ 15 ರಂದು ಮಹಿಳಾ ಕಿಸಾನ್‌ ದಿವಸ್‌ ಘೋಷಿಸಿದೆ ಎಂದು ಶಿವಮೊಗ್ಗ ಕೆವಿಕೆ ಗೃಹ ವಿಜ್ಞಾನಿ ಡಾ| ಜ್ಯೋತಿ ಎಂ. ರಾಥೋಡ್‌ ತಿಳಿಸಿದರು.

ಐಸಿಎಆರ್‌-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವತಿಯಿಂದ ಶಿಕಾರಿಪುರ ತಾಲೂಕಿನ ಹಿರೇಕೊರಲಹಳ್ಳಿ ಗ್ರಾಮದಲ್ಲಿ ಮಹಿಳಾ ಕಿಸಾನ್‌ ದಿವಸ್‌ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಶೇ.80 ರಷ್ಟು ಮಹಿಳೆಯರು ಕೃಷಿ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಗುರುತಿಸಲೆಂದೇ ಈ ದಿನ ಘೋಷಿಸಲಾಗಿದೆ.

ಇದಕ್ಕೆ “ಸಶಕ್ತ ಮಹಿಳಾ, ಸಶಕ್ತ ಭಾರತ’ ಎಂಬ ಅಡಿಬರಹ ನೀಡಲು ನಿರ್ಧರಿಸಲಾಗಿದೆ ಎಂದರು. ಗ್ರಾಮೀಣ ಕುಟುಂಬಗಳು ಮತ್ತು ಸಮುದಾಯಗಳನ್ನು ಉಳಿಸಿಕೊಳ್ಳುವಲ್ಲಿ, ಗ್ರಾಮೀಣ ಜೀವನೋಪಾ ಯವನ್ನು ಸುಧಾರಿಸುವಲ್ಲಿ ಮತ್ತು ಒಟ್ಟಾರೆ ಕೃಷಿ ಹಾಗೂ ಕುಟುಂಬದ ಯೋಗಕ್ಷೇಮದಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಹೀಗಾಗಿ ಕೃಷಿ ಜೀವವೈವಿಧ್ಯ ಸಂರಕ್ಷಣೆ ಮತ್ತು ಕೃಷಿ ಉತ್ಪಾದನೆ, ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶ, ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ವಾತಾವರಣದ ಸ್ಥಿತಿ ಸ್ಥಾಪಕತ್ವ, ಕುಟುಂಬದ ಆದಾಯ, ಆರೋಗ್ಯ ಮತ್ತು ಶಿಕ್ಷಣ ಸುಧಾರಿತ ಜೀವನದ ಗುಣಮಟ್ಟ ಸುಧಾರಣೆಗೆ ಸರಕಾರದಿಂದ ಕೊಡುಗೆ ನೀಡುತ್ತಿದ್ದು ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಕೆ.ವಿ.ಕೆಯ ವಿಜ್ಞಾನಿ (ಪಶು ವಿಜ್ಞಾನ) ಡಾ| ಎಂ. ಅಶೋಕ್‌ ಮಾತನಾಡಿ, ಗ್ರಾಮೀಣಾಭಿವೃದ್ಧಿ ಸಚಿವಾಲಯವು ಜಾರಿಗೆ ತಂದಿರುವ ಮಹಿಳಾ ಕಿಸಾನ್‌ ಸಶಕ್ತಿಕರಣ್‌ ಪರಿಯೋಜನಾ (ಎಂಕೆಎಸ್‌ಪಿ)ಯ ಪ್ರಾಥಮಿಕ ಉದ್ದೇಶ ಮಹಿಳೆಯರು ಕೃಷಿಯಲ್ಲಿ ಭಾಗವಹಿಸುವಿಕೆ ಮತ್ತು ಉತ್ಪಾದಕತೆ ಹೆಚ್ಚಿಸುವುದಾಗಿದೆ. ವ್ಯವಸ್ಥಿತ ಹೂಡಿಕೆಗಳನ್ನು ಮಾಡುವ ಮೂಲಕ ಮಹಿಳೆಯರನ್ನು ಕೃಷಿಯಲ್ಲಿ ಸಬಲೀಕರಣಗೊಳಿಸುವುದು ಈ ಯೋಜನೆಯ ಮೂಲ ಉದ್ದೇಶ ಎಂದರು. ಕಾರ್ಯಕ್ರಮದಲ್ಲಿ ರಘು ಎ.ಎನ್‌. ಹಿರಿಯ ಸಂಶೋಧಕರು (ಆರ್ಯ ಯೋಜನೆ) ಕೆ.ವಿ.ಕೆ ಶಿವಮೊಗ್ಗ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

madhagaja

ಅದ್ಧೂರಿ ರಿಲೀಸ್‌ಗೆ ‘ಮದಗಜ’ ರೆಡಿ: ಮುರಳಿ ಅಭಿಮಾನಿಗಳಿಂದ ತಯಾರಿ ಜೋರು

vote

ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ: ವೇಳಾಪಟ್ಟಿ ಪ್ರಕಟ

ವಿಪಕ್ಷಗಳ ತೀವ್ರ ಕೋಲಾಹಲದ ನಡುವೆಯೇ ಲೋಕಸಭೆಯಲ್ಲಿ ಕೃಷಿ ಕಾಯ್ದೆ ರದ್ದು ಮಸೂದೆ ಅಂಗೀಕಾರ

ವಿಪಕ್ಷಗಳ ತೀವ್ರ ಕೋಲಾಹಲದ ನಡುವೆಯೇ ಲೋಕಸಭೆಯಲ್ಲಿ ಕೃಷಿ ಕಾಯ್ದೆ ರದ್ದು ಮಸೂದೆ ಅಂಗೀಕಾರ

10kashinath

ಅಂತರಾಷ್ಟ್ರೀಯ ಕ್ರೀಡಾಪಟು ಕಾಶಿನಾಥ ನಾಯ್ಕ ಅವರಿಗೆ ಅಪಮಾನ

bommai

ಬೆಳೆ ಹಾನಿಗೆ ಹೆಚ್ವಿನ ಅನುದಾನ ಒದಗಿಸಲು ಕೇಂದ್ರಕ್ಕೆ ಪತ್ರ: ಸಿಎಂ ಬಸವರಾಜ ಬೊಮ್ಮಾಯಿ

1-fdfdf

ಅನಿಲ್ ಲಾಡ್ ರನ್ನು ಬಂಧಿಸಬೇಕು,ಕಾಂಗ್ರೆಸ್ ಕ್ರಮ ಕೈಗೊಳ್ಳಲಿ: ಛಲವಾದಿ ನಾರಾಯಣ ಸ್ವಾಮಿ

ಪ್ರಧಾನಿ ಮೋದಿಗೆ ಈಗ ‘ಜನಸೇವೆ’ಯ ಬಗ್ಗೆ ಅರಿವಾಗಿದೆ: ಸಿದ್ದರಾಮಯ್ಯ ವ್ಯಂಗ್ಯ

ಪ್ರಧಾನಿ ಮೋದಿಗೆ ‘ಜನಸೇವೆ’ಯ ಬಗ್ಗೆ ಈಗ ಅರಿವಾಗಿದೆ: ಸಿದ್ದರಾಮಯ್ಯ ವ್ಯಂಗ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಪವಿಭಾಗೀಯ ಮಟ್ಟದ ಕಚೇರಿ ರದ್ದು ಚರ್ಚೆ ಅಗತ್ಯ: ಬಿಎಸ್‌ವೈ

ಉಪವಿಭಾಗೀಯ ಮಟ್ಟದ ಕಚೇರಿ ರದ್ದು ಚರ್ಚೆ ಅಗತ್ಯ: ಬಿಎಸ್‌ವೈ

“ಬಿಜೆಪಿ ಸರ್ಕಾರದಿಂದ ಜನ ವಿರೋಧಿ ನೀತಿ’

“ಬಿಜೆಪಿ ಸರ್ಕಾರದಿಂದ ಜನ ವಿರೋಧಿ ನೀತಿ’

25clean

ಶೌಚಾಲಯ ಸ್ವಚ್ಛಗೊಳಿಸಿದ ಬಿಇಒ ತಳವಾರ

1ddsd

ತೀರ್ಥಹಳ್ಳಿ: ಸರ್ಕಾರಿ ರಜೆಯಲ್ಲಿ ಹಂಚು ಸಾಗಾಟ; ಅಧಿಕಾರಿಗಳು ಗಮನಿಸಲಿ!

ಅಧಿಕಾರಶಾಹಿಯಿಂದ ವ್ಯಕ್ತಿ ಸ್ವಾತಂತ್ರ್ಯ ನಾಶ

ಅಧಿಕಾರಶಾಹಿಯಿಂದ ವ್ಯಕ್ತಿ ಸ್ವಾತಂತ್ರ್ಯ ನಾಶ

MUST WATCH

udayavani youtube

Suratkal : ಮತ್ತೆ ATM ಕೇಂದ್ರ ಪುಡಿ ಪುಡಿ! 2ತಿಂಗಳ ಅಂತರದಲ್ಲಿ ನಡೆದ 2ನೇ ಘಟನೆ

udayavani youtube

ದಾಂಡೇಲಿ : ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು, ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿ

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

udayavani youtube

ಬೂದು ಬಾಳೆ ಸೇವನೆಯಿಂದ ಆರೋಗ್ಯವಾಗಿರುವುದು ನಿಮ್ಮ ನಾಳೆ

udayavani youtube

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

ಹೊಸ ಸೇರ್ಪಡೆ

madhagaja

ಅದ್ಧೂರಿ ರಿಲೀಸ್‌ಗೆ ‘ಮದಗಜ’ ರೆಡಿ: ಮುರಳಿ ಅಭಿಮಾನಿಗಳಿಂದ ತಯಾರಿ ಜೋರು

vote

ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ: ವೇಳಾಪಟ್ಟಿ ಪ್ರಕಟ

ವಿಪಕ್ಷಗಳ ತೀವ್ರ ಕೋಲಾಹಲದ ನಡುವೆಯೇ ಲೋಕಸಭೆಯಲ್ಲಿ ಕೃಷಿ ಕಾಯ್ದೆ ರದ್ದು ಮಸೂದೆ ಅಂಗೀಕಾರ

ವಿಪಕ್ಷಗಳ ತೀವ್ರ ಕೋಲಾಹಲದ ನಡುವೆಯೇ ಲೋಕಸಭೆಯಲ್ಲಿ ಕೃಷಿ ಕಾಯ್ದೆ ರದ್ದು ಮಸೂದೆ ಅಂಗೀಕಾರ

The Documentary Film Festival

ಪ್ರಕೃತಿ ಅಂತಾರಾಷ್ಟ್ರೀಯ ಸಾಕ್ಷ್ಯ ಚಿತ್ರೋತ್ಸವಕ್ಕೆ ತೆರೆ

10kashinath

ಅಂತರಾಷ್ಟ್ರೀಯ ಕ್ರೀಡಾಪಟು ಕಾಶಿನಾಥ ನಾಯ್ಕ ಅವರಿಗೆ ಅಪಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.