ನಾಲ್ವರು ದರೋಡೆಕೋರರ ಬಂಧಿಸಿದ ಪೊಲೀಸರು
Team Udayavani, Jan 18, 2022, 12:36 PM IST
ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಪಟ್ಟಣ ಕ್ರಾಸ್‌ನಿಂದ ಸ್ಟೇಷನ್ ಗಾಣಗಾಪುರದ ರಸ್ತೆ ಮತ್ತು ಆಳಂದ-ಕಲಬುರಗಿ ರಸ್ತೆಯ ಕೇಂದ್ರೀಯ ವಿಶ್ವವಿದ್ಯಾಲಯದ ಸಮೀಪ ವಾಹನ ಸವಾರರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ನಾಲ್ವರು ದರೋಡೆಕೋರರನ್ನು ಆಳಂದ ಪೊಲೀಸರು ಬಂಧಿಸಿದ್ದಾರೆ.
ತಂಬಾಕವಾ ಗ್ರಾಮದ ಜಗದೀಶ ಜಮಾದಾರ, ಕಮಕನೂರು ಗ್ರಾಮದ ಸೈಬಣ್ಣ (ಗೈಬಣ್ಣ) ತಳವಾರ, ಕಲಬುರಗಿಯ ಸಮತಾ ಕಾಲೋನಿಯ ಗಣೇಶ ಅಲಿಯಾಸ್ ಗಣುಸ್ವಾಮಿ ಹಿರೇಮಠ ಹಾಗೂ ಖಜೂರಿ ಗ್ರಾಮದ ಸಚಿನ್ ಬಂಗರಗಿ ಎಂಬುವವರೇ ಬಂಧಿತ ಆರೋಪಿಗಳು.
ಎರಡೂ ರಸ್ತೆಗಳಲ್ಲಿ ವಾಹನ ಸವಾರರ ದರೋಡೆ ಸಂಬಂಧ ನಿಂಬರ್ಗಾ ಮತ್ತು ನರೋಣಾ ಪೊಲೀಸ್ ಠಾಣೆಯ ಪ್ರತ್ಯೇಕ ಕೇಸ್ ದಾಖಲಾಗಿತ್ತು. ಈ ಸಂಬಂಧ ಎಸ್‌ಪಿ ಇಶಾ ಪಂತ್ ಹಾಗೂ ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರವೀಂದ್ರ ಶಿರೂರ ನೇತೃತ್ವದಲ್ಲಿ ಸಿಪಿಐ ಮಂಜುನಾಥ ಮತ್ತು ಪಿಎಸ್‌ಐಗಳಾದ ವಾತ್ಸಲ್ಯ ಹಾಗೂ ಮಹೆಬೂಬ್ ಹಾಗೂ ಸಿಬ್ಬಂದಿ ಪತ್ತೆ ಕಾರ್ಯ ನಡೆಸಿ, ನಾಲ್ವರು ಬಂಧಿಸಿದ್ದಾರೆ.
ಬಂಧಿತರಿಂದ 10 ಗ್ರಾಂ ಚಿನ್ನಾಭರಣ, 2 ಸಾವಿರ ರೂ. ನಗದು, ಮೂರು ಬೈಕ್‌ಗಳು ಹಾಗೂ ಮೊಬೈಲ್ ಸೇರಿ 2 ಲಕ್ಷ ರೂ.ಗಳ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜೂ.5ರಂದು ಕೈಗೊಳ್ಳಬೇಕಿದ್ದ ಅಯೋಧ್ಯೆ ಪ್ರವಾಸ ಮುಂದೂಡಿದ ರಾಜ್ ಠಾಕ್ರೆ
2024ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠೆ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
ಸ್ಕೂಟಿಗೆ ಕಾರು ಢಿಕ್ಕಿ: ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ತೀವ್ರ ಗಾಯ
ಆರೂವರೆ ವರ್ಷಗಳ ನಂತರ ಜೈಲಿನಿಂದ ಹೊರಬಂದ ಇಂದ್ರಾಣಿ ಮುಖರ್ಜಿ
ಭಟ್ಕಳ : ತಾಲೂಕಿನಾದ್ಯಂತ ಭಾರಿ ಮಳೆ, ಹಲವು ಮನೆಗಳಿಗೆ ಹಾನಿ