Udayavni Special

ಕೊರೊನಾ, ಹಳದಿ ನೊಣಕ್ಕೆ ನಲುಗಿದ ಅಲ್ಫೋನ್ಸೋ: ಧೈರ್ಯ ಕಳೆದುಕೊಂಡ ದಲ್ಲಾಳಿಗಳು


Team Udayavani, Jan 17, 2021, 1:55 PM IST

ಕೊರೊನಾ, ಹಳದಿ ನೊಣಕ್ಕೆ ನಲುಗಿದ ಅಲ್ಫೋನ್ಸೋ: ಧೈರ್ಯ ಕಳೆದುಕೊಂಡ ದಲ್ಲಾಳಿಗಳು

ಧಾರವಾಡ: ಸೀಮೆಗೆಲ್ಲ ಹರಡಿದ ಮಾವಿನ ಹೂ ಬಾಣದ ಕಂಪು, ಎಲೆಗಳು ಕಾಣದಷ್ಟು ಚಿಗಿರೊಡೆದ ಮಾವಿನ ಹೂವು ಮತ್ತು ಹೀಚು, ಸಂಕ್ರಾಂತಿ ಸಂಭ್ರಮಕ್ಕೆ ಭೂತಾಯಿ ಸೊಬಗು ಹೆಚ್ಚಿಸಿ ನಿಂತ ಮಾವಿನ ತೋಟಗಳು, 1.5 ಲಕ್ಷ ಟನ್‌ ಮಾವು ಉತ್ಪಾದನೆ
ನಿರೀಕ್ಷೆ. ಆದರೆ ಕೊರೊನಾ ಮಹಾಮಾರಿ ಮಾಡಿದ ಆಘಾತ ಮತ್ತು ಹಳದಿ ನೋಣದ ಕಾಟಕ್ಕೆ ಹೆದರಿದ ಮಾವು ದಲ್ಲಾಳಿಗಳು.

ಹೌದು, ರಾಜ್ಯದಲ್ಲಿಯೇ ಅತೀ ಹೆಚ್ಚು ಅಲ್ಫೋನ್ಸೋ ಮಾವು ಬೆಳೆಯುವ ಜಿಲ್ಲೆ ಎಂದೇ ಖ್ಯಾತಿ ಪಡೆದಿರುವ ಧಾರವಾಡ ಜಿಲ್ಲೆಯಲ್ಲಿ ಈ ವರ್ಷ ಮಾವು ಬೆಳೆ ಹುಲುಸಾಗಿ ಹೂವು ಹೀಚು ಬಿಡುತ್ತಿದ್ದು, ಬೆಳೆಗಾರರು ಸಂತಸದಲ್ಲಿದ್ದಾರೆ. ಸಂಕ್ರಾಂತಿ ಸಮಯಕ್ಕಾಗಲೇ ಎಲ್ಲಾ ತೋಟಗಳು ಹೂ ಬಿಟ್ಟಿದ್ದು, ಈ ವರ್ಷ ಪ್ರೋಲಾಂಗ್‌ ಪ್ರೊಸೆಸ್‌ ಅಂದರೆ ಸುದೀರ್ಘ‌ ಸುಗ್ಗಿಯ ಕಾಟ
ಮಾವಿನ ತೋಪುಗಳಿಗೆ ಇಲ್ಲವಾಗಿದೆ. ಹಿಂದಾಗಿ ಹೂ ಬಿಡುವ ತೋಟಗಳು ಸಹ ಈ ವರ್ಷ ಈಗಲೇ ಹೂ ಹಿಡಿದಿದ್ದು, ಮಾರ್ಚ್‌ ಮತ್ತು ಎಪ್ರಿಲ್‌ ತಿಂಗಳಲ್ಲಿಯೇ ಉತ್ತಮ ಫಸಲಿನೊಂದಿಗೆ ರೈತರ ಕೈಗೆ ಲಭಿಸುವ ವಿಶ್ವಾಸ ಮೂಡಿದೆ.

ಆದರೆ ಕಳೆದ ವರ್ಷ ಮಾವಿನ ಹಣ್ಣುಗಳನ್ನು ಕೊಳೆಯುವಂತೆ ಮಾಡಿದ ಹಳದಿ ನೊಣ ಮತ್ತು ಕೊರೊನಾ ಮಹಾಮಾರಿ ಲಾಕ್‌ಡೌನ್‌ನಿಂದಾಗಿ ಮಾವು ದಲ್ಲಾಳಿಗಳು ಸಂಪೂರ್ಣ ಸುಸ್ತಾಗಿ ಹೋಗಿದ್ದು, ಈ ವರ್ಷ ಮುಂಗಡವಾಗಿ ಹಣ ಬಿಚ್ಚಿ ಧೈರ್ಯದಿಂದ ಮಾವಿನ ತೋಪುಗಳನ್ನು ಗುತ್ತಿಗೆಗೆ ಕೊಳ್ಳಲು ಮಾತ್ರ ಹಿಂದೇಟು ಹಾಕುತ್ತಿದ್ದಾರೆ.

ಇದನ್ನೂ ಓದಿ:ಕಾಡಿನಿಂದ ಹಿಡಿದ ಮೊಲವನ್ನು ಮತ್ತೆ ಕಾಡಿಗೆ ಬಿಟ್ಟು ಸಂಕ್ರಾಂತಿ ಹಬ್ಬ ಆಚರಿಸಿದ ಗ್ರಾಮಸ್ಥರು

ಧೈರ್ಯ ಮಾಡದ ಗುತ್ತಿಗೆದಾರರು: ಈ ಭಾಗದ ಮಾವಿನ ತೋಪುಗಳನ್ನು ಗೋವಾ, ಮುಂಬೈ, ಅಹ್ಮದಾಬಾದ್‌ ಗಳಿಂದ ಬಂದ ಮಾವು ವ್ಯಾಪಾರಿ ಗುತ್ತಿಗೆದಾರರು ಪ್ರತಿವರ್ಷ ಕೊಳ್ಳುತ್ತಾರೆ. ಸಂಕ್ರಾಂತಿ ಸಮಯಕ್ಕೆ ಗಿಡಗಳು ಹಿಡಿದ ಹೂವು ಮತ್ತು ಹೀಚಿನ ಮೇಲೆ ತೋಟಕ್ಕೆ ಬೆಲೆಕಟ್ಟುವ ವ್ಯಾಪಾರಿಗಳು ಅರ್ಧದಷ್ಟು ಮಾತ್ರ ಹಣ ಕೊಟ್ಟು, ಇನ್ನುಳಿದದ್ದನ್ನು ಮಾವಿನ ಫಸಲನ್ನು ಕೀಳುವಾಗ ಬೆಳೆಗಾರರಿಗೆ ಕೊಡುತ್ತಾರೆ. ಆದರೆ ಕೊರೊನಾ ಮಹಾಮಾರಿ ಮಾಡಿದ ಆಘಾತದಿಂದಾಗಿ ಈ ವರ್ಷ ಹೆಚ್ಚು ತೋಟಗಳಿಗೆ ಮುಂಗಡ ಹಣ ಕೊಡುವ ದಲ್ಲಾಳಿಗೇ ಬರುತ್ತಿಲ್ಲ. ಬಂದರೂ, ಮುಂದೆ ಮಾರುಕಟ್ಟೆ ನೋಡಿಕೊಂಡು ಎಲ್ಲರೂ ಸರಿ ಇದ್ದರೆ ಮಾತ್ರವೇ ಹೆಚ್ಚಿನ ಹಣ ನೀಡುತ್ತೇವೆ ಎನ್ನುವ ಷರತ್ತುಗಳನ್ನು ಹಾಕಿ ತೋಟಗಳಿಗೆ ಮುಂಗಡ ಹಣ ಕೊಡುತ್ತಿದ್ದಾರೆ. ಪ್ರತಿವರ್ಷ ಇಷ್ಟೊತ್ತಿಗಾಗಲೇ ಶೇ.70 ರಷ್ಟು ತೋಟಗಳನ್ನು ದಲ್ಲಾಳಿಗಳು ಬುಕ್‌ ಮಾಡಿ ಬಿಡುತ್ತಿದ್ದರು. ಆದರೆ ಈ ವರ್ಷ ಮಾವಿಗೆ ಹಣ ಹಾಕಲು ದಲ್ಲಾಳಿಗಳು ಹಿಂದೇಟು ಹಾಕುತ್ತಿದ್ದಾರೆ.

ಕಳೆದ ವರ್ಷಗಳಿಗೆ ಹೊಲಿಸಿದರೆ ಈ ವರ್ಷ ಚೆನ್ನಾಗಿ ಬೆಳೆ ಬರುವ ನಿರೀಕ್ಷೆ ಈಗಲೂ ಇದೆ. ಆದರೆ ಜಿಗಿರೋಗ ಮತ್ತು ಇಬ್ಬನಿ ಕಾಟ ಹೆಚ್ಚಾಗಿರುವುದು ರೈತರಲ್ಲೂ ಆತಂಕ ಮೂಡಿಸಿದೆ.ಮೂಡಣ ಗಾಳಿ ಚೆನ್ನಾಗಿ ಬೀಸಿದರೆ, ಯಾವುದೇ ದೊಡ್ಡ ಗಾಳಿ ಮಳೆ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಕಾಣಿಸಿಕೊಳ್ಳದೆ ಹೋದರೆ ಸಾಕು ಎನ್ನುತ್ತಿದ್ದಾರೆ ತೋಟಗಾರಿಕೆ ಇಲಾಖೆ ಮಾವು ತಜ್ಞರು.

ಹೊರ ರಾಜ್ಯ, ದೇಶಕ್ಕೂ ಸೈ: ಉತ್ತರ ಕರ್ನಾಟಕ ಸೇರಿದಂತೆ, ಗೋವಾ, ಮಹಾರಾಷ್ಟ್ರ, ಗುಜರಾತ್‌, ಆಂಧ್ರಪ್ರದೇಶಗಳಲ್ಲಿ ಸಾಕಷ್ಟು ಬೇಡಿಕೆ ಹೊಂದಿರುವ ಅಲ್ಫೋನ್ಸೋ ಮಾವಿನ ಹಣ್ಣಿನ ಖಣಜಗಳೇ ಧಾರವಾಡ ಮತ್ತು ಬೆಳಗಾವಿ ಜಿಲ್ಲೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಒಂದು ಜಿಲ್ಲೆ ಒಂದು ಉತ್ಪನ್ನದಡಿ ಧಾರವಾಡ ಜಿಲ್ಲೆಯ ಅಲ್ಫೋನ್ಸೋ ಮಾವು ಸ್ಥಾನ
ಪಡೆದುಕೊಂಡಿದೆ. ಸರ್ಕಾರ ಇದರ ಮೌಲ್ಯವರ್ಧನೆಗೆ ಶ್ರಮಿಸುತ್ತಿದೆಯಾದರೂ ಇನ್ನೂ ಅಚ್ಚುಕಟ್ಟು ವ್ಯವಸ್ಥೆ ಜಾರಿಯಾಗಿಲ್ಲ. ಮಾವು ಬೆಳೆಗಾರರು ಅಲ್ಫೋನ್ಸೋ ಮಾವು ರಫ್ತಿಗೆ ಬೇಕಾಗುವ ತಂತ್ರಜ್ಞಾನ, ಪ್ಯಾಕಿಂಗ್‌, ಸಂಸ್ಕರಣೆಗೆ ಆದ್ಯತೆ ಸಿಗಬೇಕು ಎನ್ನುತ್ತಲೇ ಇದ್ದಾರೆ. ಆದರೆ ಅದಕ್ಕೆ ಪೂರಕವಾದ ವಾತಾವರಣ ಸದ್ಯಕ್ಕೆ ಜಿಲ್ಲೆಯಲ್ಲಿ ಕಾಣಿಸುತ್ತಲೇ ಇಲ್ಲ.

ಟಾಪ್ ನ್ಯೂಸ್

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

Untitled-1

ದುಬೈನಲ್ಲಿ 24 ಕೋಟಿ ರೂ. ಲಾಟರಿ ಗೆದ್ದ ಶಿವಮೊಗ್ಗದ ಅದೃಷ್ಟವಂತ!

ಮಗಳ ತಲೆ ಕಡಿದು, ಕೈಯಲ್ಲಿ ಹಿಡಿದು ತಣ್ಣಗೆ ನಡೆದ ಅಪ್ಪ

ಮಗಳ ತಲೆ ಕಡಿದು, ಕೈಯಲ್ಲಿ ಹಿಡಿದು ತಣ್ಣಗೆ ನಡೆದ ಅಪ್ಪ

ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಹುಂಡಿ ಹಣ ಕದ್ದಿದ್ದ ಆರೋಪಿಗಳ ಬಂಧನ

ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಹುಂಡಿ ಹಣ ಕದ್ದಿದ್ದ ಆರೋಪಿಗಳ ಬಂಧನ

My sugar Factory

ಬಜೆಟ್‌ನಲ್ಲಿ ಮೈಷುಗರ್‌ಗೆ ಸಿಗುತ್ತಾ ಮುಕ್ತಿ !

ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್ ನಾಳೆ ಅಧಿಕಾರ ಸ್ವೀಕಾರ

Siddaramaiah

ಸಚಿವರಾದವರು ಇಂತಹ ಕೆಲಸ ಮಾಡುತ್ತಾರಾ?: ಸಿದ್ದರಾಮಯ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಸುಲಲಿತ ಜೀವನ ಸೂಚ್ಯಂಕ ಹೊಂದಿದ ದೇಶದ ನಗರಗಳ ಯಾದಿ : ಮಂಗಳೂರಿಗೆ 20ನೇ ಸ್ಥಾನ

ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್ ನಾಳೆ ಅಧಿಕಾರ ಸ್ವೀಕಾರ

Congress protest in chikkaballapura

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತಲಾ 10 ಕೆ.ಜಿ.ಅಕ್ಕಿ

narayan

ಮೆಘಾ ಫುಡ್ ಪಾರ್ಕ್ ಕಾಮಗಾರಿ ವಿಳಂಬ: ಸಚಿವ ಡಾ. ನಾರಾಯಣಗೌಡ ಗರಂ

ಒಂದು ದೇಶ ಒಂದು ಚುನಾವಣೆ ಚರ್ಚೆಗೆ ಕಾಂಗ್ರೆಸ್ ವಿರೋಧ: ಪರಿಷತ್ ಬಾವಿಗಿಳಿದು ಪ್ರತಿಭಟನೆ

ಒಂದು ದೇಶ ಒಂದು ಚುನಾವಣೆ ಚರ್ಚೆಗೆ ಕಾಂಗ್ರೆಸ್ ವಿರೋಧ: ಪರಿಷತ್ ಬಾವಿಗಿಳಿದು ಪ್ರತಿಭಟನೆ

MUST WATCH

udayavani youtube

ಸುಲಲಿತ ಜೀವನ ಸೂಚ್ಯಂಕ: ದೇಶದಲ್ಲಿ 20ನೇ ಸ್ಥಾನ ಪಡೆದ ಮಂಗಳೂರು

udayavani youtube

ಕೂದಲಿನ ಸಮಸ್ಯೆಗೂ ಪಿಸಿಓಡಿ ಗೂ ಏನು ಸಂಬಂಧ?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 04-March-2021 News Bulletin | Udayavani

udayavani youtube

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

udayavani youtube

ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! |Udayavani

ಹೊಸ ಸೇರ್ಪಡೆ

ನಳ್ಳಿ  ತಿರುಗಿಸಿದರೆ ಬರೋದು ಬರಿ ಗಾಳಿ!

ನಳ್ಳಿ ತಿರುಗಿಸಿದರೆ ಬರೋದು ಬರಿ ಗಾಳಿ!

ಲಸಿಕೆ  ಸ್ವೀಕರಿಸಲು ಸರ್ವರ್‌ ಅಡ್ಡಿ!

ಲಸಿಕೆ  ಸ್ವೀಕರಿಸಲು ಸರ್ವರ್‌ ಅಡ್ಡಿ!

ಹೀಗೊಂದು ವೀಗನ್‌ ಶೈಲಿಯ ಮದುವೆ!

ಹೀಗೊಂದು ವೀಗನ್‌ ಶೈಲಿಯ ಮದುವೆ!

ಜಾಗತಿಕ ವಿವಿ ರ್‍ಯಾಂಕಿಂಗ್‌ಗೆ ಮಾಹೆ

ಜಾಗತಿಕ ವಿವಿ ರ್‍ಯಾಂಕಿಂಗ್‌ಗೆ ಮಾಹೆ

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.