ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

 ಕಾಂಗ್ರೆಸ್‌ ಬಹಿರಂಗ ಪ್ರಚಾರ ಸಭೆ

Team Udayavani, Apr 18, 2024, 1:41 AM IST

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಕೋಟೇಶ್ವರ: ಜನರ ಸಮಸ್ಯೆ ಪರಿಹಾರ ಮಾಡುವುದು ಜನಪ್ರತಿನಿಧಿ ಗಳ ಕರ್ತವ್ಯ. ಅದನ್ನು ಸೇವೆಯೆಂದು ಪರಿಗಣಿಸುವುದು ಸೂಕ್ತವಲ್ಲ. ಈ ಹಿಂದೆ ಎರಡು ವರ್ಷ ಕಾಲಾವ ಧಿಯಲ್ಲಿ ಲೋಕಸಭಾ ಸದಸ್ಯನಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಿದ್ದೀರಿ. ಈ ಬಾರಿ ಉಡುಪಿ-ಚಿಕ್ಕಮಗಳೂರು ಜಿಲ್ಲೆಯ ಪ್ರತಿಯೊಬ್ಬರ ಸಮಸ್ಯೆಗೆ ಸ್ಪಂದಿಸಲು ಸಿದ್ಧನಾಗಿ, ಬದ್ಧನಾಗಿ ಅವಕಾಶಕ್ಕಾಗಿ ತಮ್ಮಲ್ಲಿ ಪ್ರಾರ್ಥನೆ ಮಾಡುತ್ತಿದೇನೆ ಎಂದು ಚಿಕ್ಕಮಗಳೂರು – ಉಡುಪಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಹೇಳಿದರು.

2 ಕೋಟಿ ಉದ್ಯೋಗ ನೀಡುವ ಭರವಸೆ ಏನಾಯಿತು?
ಕೋಟೇಶ್ವರದ ಬಸ್‌ ನಿಲ್ದಾಣದ ಬಳಿ ಬುಧವಾರ ಸಂಜೆ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಬಹಿರಂಗ ಪ್ರಚಾರ ಸಭೆಯಲ್ಲಿ ಜಯಪ್ರಕಾಶ ಹೆಗ್ಡೆ ಮಾತನಾಡಿ, ಕೇಂದ್ರ ಸರಕಾರ ನೀಡಿದ ವಿವಿಧ ಆಶ್ವಾಸನೆಗಳಲ್ಲಿ ಎಲ್ಲರ ಖಾತೆಗೆ 15 ಲಕ್ಷ ರೂ. ಜಮಾ ಆಯಿತೇ, ವರ್ಷಕ್ಕೆ 2 ಕೋಟಿ ಜನರಿಗೆ ಉದ್ಯೋಗ ನೀಡುವ ಭರವಸೆ ಏನಾಯಿತು ಎಂದರು.

ರಾಜ್ಯ ಕಾಂಗ್ರೆಸ್‌ನ ಯುವನಿಧಿ  ಹಂತ- ಹಂತವಾಗಿ ಜನರಿಗೆ ತಲು ಪುತ್ತಿದೆ. ಬಡಜನರ ಪಾಲಿಗೆ ಸಂಜೀವಿನಿ ಯಾಗಿರುವ ಗ್ಯಾರಂಟಿ ಯೋಜನೆ ಸಸೂತ್ರವಾಗಿ ಯಶಸ್ವಿಯಾಗಿ ಅನು ಷ್ಠಾನಗೊಂಡಿದೆ. ಲೋಕಸಭಾ ಸದಸ್ಯ ನಾಗಿದ್ದಾಗಿ ಕೋಟೇಶ್ವರದ ಫ್ಲೈ ಓವರ್‌ ನಿರ್ಮಾಣ ಕಾರ್ಯಕ್ಕೆ ಎದುರಾದ ತೊಡಕು ನಿವಾರಿಸಲಾಗಿತ್ತು. ಕರಾ ವಳಿಯ ಮೀನುಗಾರರ ಬೇಡಿಕೆ ಈಡೇರಿಸಲಾಗಿತ್ತು. ಜನಸಾಮಾನ್ಯರ ಎಲ್ಲ ಬೇಡಿಕೆ 2 ವರ್ಷದ ಅವ ಧಿಯಲ್ಲಿ ಈಡೇರಿಸುವ ಪ್ರಯತ್ನ ಮಾಡಿರುವ ವಿಶ್ವಾಸ ಹೊಂದಿದ್ದೇನೆ ಎಂದರು.

ಕೆಪಿಸಿಸಿ ವಕ್ತಾರ ನಿಕೇತ್‌ರಾಜ್‌ ಮೌರ್ಯ ಮಾತನಾಡಿ, ಎಲ್ಲ ವರ್ಗದ ಜನರ ಕಣ್ಮಣಿಯಾಗಿರುವ ಜಯಪ್ರಕಾಶ ಹೆಗ್ಡೆ ಸಂಸದರಾಗಿದ್ದಾಗ ಅಭಿವೃದ್ಧಿ ಕಾರ್ಯಗಳ ಹರಿಕಾರರಾಗಿದ್ದರು. 18 ವರ್ಷಗಳ ಅ ಧಿಕಾರದ ಅವ ಧಿಯಲ್ಲಿ ಉಡುಪಿ ಚಿಕ್ಕಮಗಳೂರು ಜಿಲ್ಲೆಯ ಜನರ ಸಮಸ್ಯೆಗೆ ಸ್ಪಂದಿಸಿರುತ್ತಾರೆ ಎಂದು ತಿಳಿಸಿದರು.

25ಕ್ಕೂ ಹೆಚ್ಚು ಸ್ಥಾನ
ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 25ಕ್ಕೂ ಹೆಚ್ಚು ಸ್ಥಾನವನ್ನು ಗಳಿಸುವುದು ಎಂದು ಭವಿಷ್ಯ ನುಡಿದರು.

ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಬಿಜೆಪಿಯಿಂದ ತನಗಾದ ಅನ್ಯಾಯದ ಬಗ್ಗೆ ಸಭೆಯಲ್ಲಿ ವಿವರಿಸಿದರಲ್ಲದೇ ಪೊಳ್ಳು ಭರವಸೆ ಮೂಲಕ ಮತದಾರರನ್ನು ವಂಚಿಸುವ ಅವರ ಗಿಮಿಕ್‌ಗೆ ಯಾರೂ ಬಲಿಯಾಗಬಾರ ದೆಂದರು. ಕಾಂಗ್ರೆಸ್‌ ಮುಖಂಡ ವಿಕಾಸ್‌ ಹೆಗ್ಡೆ, ದಿನೇಶ ಹೆಗ್ಡೆ ಮೊಳಹಳ್ಳಿ ಮಾತನಾಡಿದರು.

ಮಾಜಿ ಶಾಸಕ ಗೋಪಾಲ ಪೂಜಾರಿ, ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫ‌ೂರ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಯುವಕಾಂಗ್ರೆಸ್‌ ಅಧ್ಯಕ್ಷ ನಿಶ್ಚಿತಾರ್ಥ ಶೆಟ್ಟಿ, ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೆಪಿಸಿಸಿ ಸದಸ್ಯ ನವೀನ್‌ ಚಂದ್ರ ಶೆಟ್ಟಿ, ಡಿಸಿಸಿ ಪದಾಧಿ ಕಾರಿಗಳಾದ ಸತೀಶ ಕಿಣಿ ಬೆಳ್ವೆ, ಸದಾನಂದ ಶೆಟ್ಟಿ ಕೆದೂರು, ಸುರೇಂದ್ರ ಶೆಟ್ಟಿ ಅಂಕದಕಟ್ಟೆ, ಪ್ರಸನ್ನ ಕುಮಾರ್‌ ಶೆಟ್ಟಿ ಕೆರಾಡಿ, ಅಶೋಕ ಪೂಜಾರಿ ಬೀಜಾಡಿ, ದೇವಾನಂದ ಶೆಟ್ಟಿ, ಮುಸ್ತಾಕ್‌ ಅಹಮ್ಮದ್‌, ಹೆರಿಯಣ್ಣ, ಪ್ರಕಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ವಿನೋದ ಕ್ರಾಸ್ತಾ ವಂದಿಸಿದರು.

10 ವರ್ಷಗಳಲ್ಲಿ ಕುಂದಾಪುರದಲ್ಲಿ ಬಿಜೆಪಿ ಏನು ಮಾಡಿದೆ: ಸುಧೀರ ಕುಮಾರ್‌ ಮರೋಳಿ ಪ್ರಶ್ನೆ

ಕೆಪಿಸಿಸಿ ವಕ್ತಾರ ಸುಧೀರ ಕುಮಾರ್‌ ಮರೋಳಿ ಮಾತನಾಡಿ, ಮಹಿಳೆಯರುಹಾಗೂ ಯುವಕರ ಪಾಲಿಗೆ ಆಶಾಕಿರಣ ವಾಗಿರುವ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಎಲ್ಲೂ ಭರವಸೆಯನ್ನು ಹುಸಿ ಮಾಡಿಲ್ಲ. 10 ವರ್ಷಗಳಲ್ಲಿ ಕುಂದಾಪುರದಲ್ಲಿ ಬಿಜೆಪಿ ಏನು ಮಾಡಿದೆ? ಯಾವ ಯೋಜನೆಯನ್ನೂ ಅನುಷ್ಠಾನಗೊಳಿಸಿದೆ ಎಂಬುದನ್ನು ಜನರೇ ಆಡಿಕೊಳ್ಳುತ್ತಿದ್ದಾರೆ. ಜಯ ಪ್ರಕಾಶ ಹೆಗ್ಡೆ ದಕ್ಷತೆ, ಕಾರ್ಯತತ್ಪರತೆ ರಾಷ್ಟ್ರಕ್ಕೆ ಮಾದರಿಯಾಗಿದೆ. ಅವರನ್ನು ಗೆಲ್ಲಿಸುವ ಜವಾಬ್ದಾರಿ ಪ್ರತಿಯೊಬ್ಬ ಮತದಾರರಿಗಿದೆ ಎಂದರು.

ಟಾಪ್ ನ್ಯೂಸ್

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

ಉಗ್ರರಿದ್ದಲ್ಲೇ ನುಗ್ಗಿ ವಿನಾಶ: ಪ್ರಧಾನಿ ಮೋದಿ

ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

11-udupi

Udupi: ಬಸ್‌ ಢಿಕ್ಕಿ: ಮಹಿಳೆಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.