ಈಕೆಯ ಪಾಲಿಗೆ ಆನೆಯೇ ಮಗನಿದ್ದಂತೆ

ಪಾಲಕ್ಕಾಡ್‌ನ‌ಲ್ಲೊಂದು ವಿಶೇಷ ಅನುಬಂಧ

Team Udayavani, Jul 19, 2020, 7:40 PM IST

ಈಕೆಯ ಪಾಲಿಗೆ ಆನೆಯೇ ಮಗನಿದ್ದಂತೆ

ಕೆಲವು ದಿನಗಳ ಹಿಂದೆ ಕೇರಳದಲ್ಲಿ ಗರ್ಭಿಣಿ ಆನೆಯನ್ನು ಕೊಂದ ಪ್ರಕರಣ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಇದರ ವಿರುದ್ಧ ವ್ಯಾಪಕ ಖಂಡನೆಯೂ ವ್ಯಕ್ತವಾಯಿತು. ಇಂತಹ ಮನಸ್ಸು ಕಹಿಯಾಗುವ ಘಟನೆಯ ಜತೆಗೆ ಆನೆಯನ್ನು ಮನೆಯ ಸದಸ್ಯನಂತೆ ನೋಡುವ ಕುಟುಂಬವೊಂದು ಕೇರಳದಲ್ಲೇ ಇದೆ. ಪಾಲಕ್ಕಾಡ್‌ ಜಿಲ್ಲೆಯ ಕಲ್ಪಾತ್ತಿಯ ಜಯಶ್ರೀಗೆ ಆನೆಯೇ ಮಗನಿದ್ದಂತೆ.

ಕೇಶವ ಬಾಬು ಎಂಬ ಹೆಸರಿನ ಆನೆ ಸಾಕುತ್ತಿರುವ ಜಯಶ್ರೀ ಬಾಲ್ಯದಿಂದಲೇ ಆನೆ ನೋಡಿಕೊಂಡೇ ಬೆಳೆದವರು. ಮಹಿಳಾ ಮಾವುತರಾಗಿಯೂ ಅವರು ಚಿರಪರಿಚಿತೆ. ದೇವಸ್ಥಾನಗಳ ಉತ್ಸವಗಳಿಗೆ ಬಾಬುವನ್ನು ಕರೆದುಕೊಂಡು ಹೋಗುವ ಜಯಶ್ರೀ ಅದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ.

ಹಿನ್ನೆಲೆ ಏನು?
ಚಾಂತಪುರ ಗ್ರಾಮದ ನಾರಾಯಣ ಅಯ್ಯರ್‌ ಮತ್ತು ಅವರ ಮಗ “ಆನ ಅಯ್ಯರ್‌’ ಎಂದೇ ಕರೆಯಲ್ಪಡುತ್ತಿದ್ದ ಅಪ್ಪು ಅಯ್ಯರ್‌ 5 ಆನೆಗಳನ್ನು ಸಾಕಿದ್ದರು. ಅಪ್ಪು ಆನೆಗಳನ್ನು ಚಿತ್ರಗಳ ಶೂಟಿಂಗ್‌ಗಾಗಿ ಚೆನ್ನೈಗೂ ಕರೆದೊಯ್ಯುತ್ತಿದ್ದರು. ಇವರ ಮಗಳೇ ಜಯಶ್ರೀ. ಚಿಕ್ಕಂದಿನಿಂದಲೇ ತಂದೆಯೊಂದಿಗೆ ಉತ್ಸವಗಳಿಗೆ ತೆರಳುತ್ತಿದ್ದ ಜಯಶ್ರೀಗೆ ಸಹಜವಾಗಿ ಆನೆಯ ಮೇಲೆ ವಾತ್ಸಲ್ಯ ಬೆಳೆಯಿತು. ಅನಂತರ ತಂದೆಯ ಮರಣಾನಂತರ ತಾನೇ ಬಾಬುವನ್ನು ಸಾಕತೊಡಗಿದರು. ಆನೆ ಚಾಕರಿಗೆ ಇಬ್ಬರು ಸಹಾಯಕರಿದ್ದರೂ ಜಯಶ್ರೀಗೆ ತಾನೇ ಆನೆಗೆ ಕೈ ತುತ್ತು ತಿನ್ನಿಸಿದರಷ್ಟೇ ಸಮಾಧಾನ. ಬಾಬುವನ್ನಗಲಿ ಇರಲು ಸಾಧ್ಯವೇ ಇಲ್ಲ, ಬಾಬು ನಮ್ಮ ಮನೆ ಮಗನಿದ್ದಂತೆ ಎಂದು ಭಾವುಕರಾಗಿ ನುಡಿಯುತ್ತಾರೆ ಜಯಶ್ರೀ. ನಾವು ಪ್ರೀತಿಸಿದರೆ ಆನೆಗಳೂ ನಮ್ಮನ್ನು ಅಷ್ಟೇ ಪ್ರೀತಿಸುತ್ತವೆ. ಆನೆ ಬಹಳ ಬುದ್ಧಿವಂತ ಪ್ರಾಣಿ ಎನ್ನುತ್ತಾರೆ ಜಯಶ್ರೀ.

ಆನೆ ಬಂದ ಕಥೆ
ಬಹಳ ವರ್ಷಗಳ ಹಿಂದೆ. ದೇವಸ್ಥಾನದ ಉತ್ಸವಕ್ಕಾಗಿ ಅಪ್ಪು ಅಯ್ಯರ್‌ ಹೊರಟಿದ್ದರು. ಮರಳಿ ಬರುವಾಗ ಏನು ತರಬೇಕೆಂದು ಮಕ್ಕಳಲ್ಲಿ ಕೇಳಿದರು. ಜಯಶ್ರೀ ಮತ್ತು ಆಕೆಯ ಸಹೋದರಿಯರಾದ ಸಾವಿತ್ರಿ, ಲಕ್ಷ್ಮೀ ಒಕ್ಕೊರಲಿಂದ “ಆನೆ’ ಎಂದರು. ಮುಂದಿನ ನಾಲ್ಕು ದಿನ ಈ ಮೂವರು ಮಕ್ಕಳಿಗೆ ಕಾತರದ ದಿನಗಳಾಗಿದ್ದವು. ಅಪ್ಪ ಯಾವ ರೀತಿಯ ಗೊಂಬೆ ತರಬಹುದು ಎನ್ನುವುದು ಕಲ್ಪನೆಯಲ್ಲೇ ದಿನ ದೂಡಿದರು. ಕೊನೆಗೂ ಕಾಯುತ್ತಿದ್ದ ದಿನ ಬಂದೇ ಬಿಟ್ಟಿತು. ಅಪ್ಪು ಅಯ್ಯರ್‌ ನಿಜ ಆನೆಯೊಂದಿಗೆ ಮನೆಗೆ ಮರಳಿದ್ದರು. ಆ ಆನೆಗೆ ಕೇಶವ ಬಾಬು ಎಂದು ನಾಮಕರಣ ಮಾಡಲಾಯಿತು. ಅಂದಿನಿಂದ ಜಯಶ್ರೀ ಆನೆ ಜತೆಗೆ ಬೆಳೆಯತೊಡಗಿದಳು. ಆ ಆನೆ ನಿಧನ ಹೊಂದಿದ ಅನಂತರ ಮತ್ತೆ ಕರೆದುಕೊಂಕೊಂಡು ಬಂದ(ಈಗಿರುವ)ಆನೆಗೂ ಕೇಶವ ಬಾಬು ಎಂದೇ ಹೆಸರಿಟಿದ್ದೇವೆ ಎನ್ನುತ್ತಾರೆ ಜಯಶ್ರೀ.

ಮನೆಯ ಸದಸ್ಯ
ಬಾಬು ಎಂದರೆ ಜಯಶ್ರೀಗೆ ಮಗನಷ್ಟೇ ಅಕ್ಕರೆ. ನಾವು ಸೇವಿಸುವ ಆಹಾರವನ್ನೇ ಅವನಿಗೂ ನೀಡುತ್ತೇವೆ ಎನ್ನುತ್ತಾರೆ. ಆನೆಯನ್ನು ಉತ್ಸವಗಳ ಮೆರವಣಿಗೆಗೆ ಜಯಶ್ರೀ ಕರೆದೊಯ್ಯುವುದು ಬಿಟ್ಟರೆ ಬೇರೆ ವಾಣಿಜ್ಯ ಉದ್ದೇಶಗಳಿಗೆ ಬಳಸುವುದೇ ಇಲ್ಲ. “ಸಾಕಷ್ಟು ವಿಶ್ರಾಂತಿ ನೀಡಿದ ಬಳಿಕವೇ ಉತ್ಸವಗಳಿಗೆ ಕರೆದೊಯ್ಯುತ್ತೇವೆ. ದೂರದ ಊರಿಗೆ ಕಳುಹಿಸುವುದಿಲ್ಲ’ ಎಂದು ಜಯಶ್ರೀ ವಿವರಿಸುತ್ತಾರೆ. ದಿನಕ್ಕೆ ಎರಡು ಹೊತ್ತು ಆನೆಗೆ ಆಹಾರ ಒದಗಿಸಲಾಗುತ್ತದೆ. ರಾತ್ರಿ 10 ಗಂಟೆಗೆ ಬಾಬುಗೆ ಗುಡ್‌ನೈಟ್‌ ಹೇಳಿಯೇ ಜಯಶ್ರೀ ವಿಶ್ರಮಿಸುವುದು ವಾಡಿಕೆ.

– ರಮೇಶ್‌ ಬಿ., ಕಾಸರಗೋಡು

ಟಾಪ್ ನ್ಯೂಸ್

munenkoppa

ನನಗೆ ರಾಜಕೀಯ ಬದ್ಧತೆಯಿದೆ, ಬೇರೆ ಪಕ್ಷಕ್ಕೆ ಹೋಗಲ್ಲ: ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ

jagadish shettar

ಆಯಾ ಜಿಲ್ಲೆಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡುವುದು ಉತ್ತಮ: ಶೆಟ್ಟರ್

ಹಕ್ಕು ಮತ್ತು ಕರ್ತವ್ಯಗಳು ಜೊತೆಯಾಗಿ ಹೋಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹಕ್ಕು ಮತ್ತು ಕರ್ತವ್ಯಗಳು ಜೊತೆಯಾಗಿ ಹೋಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

3yakshagana

ಯಕ್ಷಗಾನ ಹಿರಿಯ ಕಲಾವಿದ ಬೇತ ಕುಂಞ ಕುಲಾಲ್ ನಿಧನ

2gold

ಮಂಗಳೂರು ವಿಮಾನ ನಿಲ್ದಾಣದಲ್ಲಿ 29,14,160 ಮೌಲ್ಯದ ಚಿನ್ನ ವಶ

thavarchand gahlot

ಸಮಾಜದ ದುರ್ಬಲ ವರ್ಗಗಳ ಏಳಿಗೆಗೆ ನನ್ನ ಸರ್ಕಾರ ಬದ್ಧ: ರಾಜ್ಯಪಾಲರ ಗಣರಾಜ್ಯೋತ್ಸವ ಸಂದೇಶ

1fire2

ಚಾರ್ಮಾಡಿ ಅರಣ್ಯದಲ್ಲಿ ಅಗ್ನಿ ಆಕಸ್ಮಿಕ: ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ನಾ ಕಂಡ ಜೋಗತಿ

ಜೋಗತಿಗೆ ಗುರು, ಮಾರ್ಗದರ್ಶಕಿ, ದಿಕ್ಕು-ದೆಸೆಯಾಗಿ ಸಿಕ್ಕವರೆ ಕಾಳವ್ವ : ನಾ ಕಂಡ ಜೋಗತಿ

fgdtryy

ಸುತ್ತಿಗೆ ತಲೆ ಹುಳು ಬಗ್ಗೆ ನಿಮಗೆ ತಿಳಿದಿದೆಯೆ ?

hyuty6t

ಸಂಗೀತವೆಂಬ ದೀಪದಲ್ಲಿ ಬೆಳಗುತ್ತಿರುವ ‘ಉಜ್ವಲ’

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

MUST WATCH

udayavani youtube

73ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

udayavani youtube

ಮದುವೆ ದಿನದಂದು ಕಾಫಿದೊರೆ ಸಿದ್ದಾರ್ಥ ಹೆಗ್ಗಡೆ ಅವರಿಗೆ ನುಡಿ ನಮನ ಸಲ್ಲಿಸಿದ ಮದುಮಗ

udayavani youtube

ಅಭಿಮಾನದಿಂದ ಹಾಕಿದ ಕೇಸರಿ ರುಮಾಲು ಕಿತ್ತೆಸೆದ ಸಿದ್ದರಾಮಯ್ಯ ! ದಂಗಾದ ಅಭಿಮಾನಿ

udayavani youtube

ಮುತ್ತಿನ ಪ್ರಕರಣ : ಶಿಲ್ಪಾ ಶೆಟ್ಟಿಯನ್ನು ’ಸಂತ್ರಸ್ತೆ’ ಎಂದ ಮುಂಬೈ ಕೋರ್ಟ್

udayavani youtube

ವಾಹನ ಸವಾರರ ಗೋಳು ಕೇಳುವವರು ಯಾರು

ಹೊಸ ಸೇರ್ಪಡೆ

munenkoppa

ನನಗೆ ರಾಜಕೀಯ ಬದ್ಧತೆಯಿದೆ, ಬೇರೆ ಪಕ್ಷಕ್ಕೆ ಹೋಗಲ್ಲ: ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ

ಮತದಾನದ ಹಕ್ಕು ಪ್ರಜಾಪ್ರಭುತ್ವದ ಅಡಿಪಾಯ: ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ

ಮತದಾನದ ಹಕ್ಕು ಪ್ರಜಾಪ್ರಭುತ್ವದ ಅಡಿಪಾಯ: ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ

5democracy

ಮತದಾರರ ಕೈಯಲ್ಲಿದೆ ಸುಭದ್ರ ಪ್ರಜಾಪ್ರಭುತ್ವ

jagadish shettar

ಆಯಾ ಜಿಲ್ಲೆಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡುವುದು ಉತ್ತಮ: ಶೆಟ್ಟರ್

4——–

ಕಲಬುರಗಿ-ಬೆಂಗಳೂರು ರೈಲು ಶೀಘ್ರ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.