Rajyothsava: ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ


Team Udayavani, Nov 1, 2023, 12:40 AM IST

karnataka tourism 1

“ಬ್ರಿಟಿಷರ ಅಧಿಕಾರಕ್ಕೆ ಒಳಗಾದ ಎಲ್ಲ ಕನ್ನಡ ಊರು, ತಾಲೂಕು ಜಿಲ್ಲೆಗಳನ್ನು ಒಗ್ಗೂಡಿಸಿ ಒಂದು ರಾಜಕೀಯ ವಿಭಾಗವನ್ನು ಮಾಡಿ ಅದಕ್ಕೆ “ಕರ್ನಾಟಕ ಪ್ರಾಂತ’ ಎಂದು ಕರೆಯುವ ಬಗ್ಗೆ ಸರಕಾರಕ್ಕೆ ಭಿನ್ನಹ ಮಾಡಬೇಕು.’ ಇಂತಹದೊಂದು ಮಹ ತ್ವದ ನಿರ್ಣಯವನ್ನು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ 1917ರ ಅಕ್ಟೋಬರ್‌ 7ರಂದು ಕೈಗೊಂಡಿದ್ದರ ಪರಿಣಾಮವೇ ಇಂದಿನ “ಕರ್ನಾಟಕ’ ಉದಯಕ್ಕೆ ಬಹುಮುಖ್ಯ ಚಾಲನೆ ಸಿಕ್ಕಿದ್ದು.

ಚರಿತ್ರೆಯಲ್ಲಿ ಕನ್ನಡ ಮಾತನಾಡುವ ಜನರೆಲ್ಲ ಒಂದೇ ಆಡಳಿತದಲ್ಲಿ ಇದ್ದಿದ್ದು ಸ್ವಲ್ಪ ಸಮಯ ಮಾತ್ರ.

ಚಾಲುಕ್ಯರ ಇಮ್ಮಡಿ ಪುಲಿಕೇಶಿ, ವಿಜಯ ನಗರದ ಶ್ರೀ ಕೃಷ್ಣದೇವರಾಯ, ಕೆಲವುಕಾಲ ಹೈದರಾಲಿ ಆಡಳಿತ ಕಾಲದಲ್ಲಿ ಕನ್ನಡ ಪ್ರದೇ ಶಗಳೆಲ್ಲ ಒಂದೇ ಆಳ್ವಿಕೆಯಲ್ಲಿ ಇದ್ದಿದ್ದು ಬಿಟ್ಟರೆ, ಕನ್ನಡ ಜನರೆಲ್ಲ ಏಕ ಆಡಳಿತದಲ್ಲಿ ಬದುಕಿದ್ದು ಹೆಚ್ಚು ಸಮಯವಿರಲಿಲ್ಲ.

ಮೈಸೂರು ಯುದ್ಧದಲ್ಲಿ(18ನೇ ಶತಮಾನ) ಟಿಪ್ಪು ಸುಲ್ತಾನ ಬ್ರಿಟಿಷರಿಗೆ ಸೋತು ಹೋದಾಗ ನಮ್ಮ ಶ್ರೀರಂಗಪಟ್ಟಣ ಕನ್ನಡಿಗರ ಕೈತಪ್ಪಿ ಮೈಸೂರು ರಾಜ್ಯವನ್ನು ಆಂಗ್ಲ ಅಧಿಕಾರಿಗಳು ಹರಿದು ಹಂಚಿದರು. ಮುಂಬಯಿ, ಹೈದರಾ ಬಾದ್‌ ಸಂಸ್ಥಾನಗಳಿಗೆ ಕನ್ನಡದ ಭೂಭಾಗಗಳು ಸೇರಿ ಹೋದ ಮೇಲೆ ಉಳಿದ ಸ್ವಲ್ಪ ಭಾಗವನ್ನು ಮಾತ್ರ ಮೈಸೂರಿನ ಯದುಕುಲದ ಅರಸರಿಗೆ ಬ್ರಿಟಿಷ್‌ ಕಂಪೆನಿ ಕೊಟ್ಟಿತು.

ಈ ಕನ್ನಡ ಪ್ರಾಂತ ವಿಭಜನೆ ಜತೆಯಲ್ಲಿ ಜಮ ಖಂಡಿ, ರಾಮದುರ್ಗ, ಸಂಡೂರು, ಸವಣೂರು ಇಂತಹ ಹಲವು ಸಂಸ್ಥಾನಗಳಿದ್ದವು. ಸರದಾರರ ಸಂಸ್ಥಾನಗಳೂ ಇದ್ದವು. ಒಟ್ಟಾರೆ ಕನ್ನಡ ಮಾತ ನಾಡುವ ಪ್ರದೇಶವೆಲ್ಲ ಛಿದ್ರ ಛಿದ್ರವಾಯಿತು. ಭಾರತವನ್ನೇ ಗುತ್ತಿಗೆಗೆ ಹಿಡಿದಿದ್ದ ಈಸ್ಟ್‌ ಇಂಡಿಯಾ ಕಂಪೆನಿಯಿಂದ ಇಂಗ್ಲೆಂಡಿನ ರಾಣಿ ಭಾರತವನ್ನು ನೇರವಾಗಿ ತನ್ನ ತೆಕ್ಕೆಗೆ ತೆಗೆದು ಕೊಂಡಾಗ ಕನ್ನಡ ನಾಡು ಒಟ್ಟು ಹನ್ನೊಂದು ಆಡಳಿತ ವ್ಯವಸ್ಥೆಗಳಲ್ಲಿ ಹಂಚಿಹೋಗಿತ್ತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬರುವವರೆಗೂ ಇದೇ ಪರಿಸ್ಥಿತಿ ಇತ್ತು. ಮದ್ರಾಸ್‌, ಮುಂಬಯಿ ವಿಭಾಗಗಳು ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಕೊಡಗು ಕೂಡ ಪ್ರತ್ಯೇಕವಾಗಿದ್ದು ಬ್ರಿಟಿಷರ ವಶದಲ್ಲೇ ಇತ್ತು.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ(1857) ಮೊದಲು ಹಾಗೂ ಅನಂತರ ಕನ್ನಡ ನಾಡಿ ನೊಳಗೆ ಅನೇಕ ಸ್ವಾತಂತ್ರ್ಯ ಆಂದೋಲನಗಳು ನಡೆದರೂ 1924ರ ಬೆಳಗಾವಿ ಕಾಂಗ್ರೆಸ್‌ ಅಧಿವೇ ಶನದ ಬಳಿಕ ಈ ನೆಲದಲ್ಲಿ ರಾಷ್ಟ್ರೀಯ ಹೋರಾಟ ಗಟ್ಟಿ ಪಡೆದುಕೊಂಡು ಸ್ವಾತಂತ್ರ ಹೋರಾಟದ ಜತೆ ಜತೆಯಲ್ಲೇ ಕರ್ನಾಟಕ ಏಕೀಕರಣದ ಹೋರಾಟವು ಸಾಗಿ ಬಂದಿದ್ದರೂ ಕರ್ನಾಟಕ ಪ್ರದೇಶಗಳೆಲ್ಲವೂ ಒಂದೇ ಆಡಳಿತದ ಅಡಿಯಲ್ಲಿ ಇರಬೇಕೆಂಬ ಕೂಗಿಗೆ ಮನ್ನಣೆ ಸಿಕ್ಕಿದ್ದು 1956ರಲ್ಲಿ.

ಕನ್ನಡದ ಕವಿ, ಸಾಹಿತಿಗಳೇ ಏಕೀಕೃತ ಕರ್ನಾ ಟಕದ ಕೂಗಿಗೆ ಮೊದಲು ದನಿಗೂಡಿಸಿದರು. ಇವರಿಗೆ ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್‌ನಂತಹ ಸಂಸ್ಥೆಗಳು ಗಟ್ಟಿ ನೆಲೆ ಒದಗಿಸಿದ್ದವು. ಭಾರತಕ್ಕೆ ಸ್ವತಂತ್ರ ಬಂದ ಮೇಲೂ ಕರ್ನಾಟಕ   ಏಕೀಕರಣಕ್ಕೆ ಕೆಲವು ವರ್ಷ ಮಾನ್ಯತೆ ಸಿಗುವುದು ತಡವಾಯಿತು.

ಸಾಹಿತ್ಯ ಲೋಕದ ಜತೆಗೆ ರಾಜಕೀಯ ಧುರೀ ಣರು, ಸಾರ್ವಜನಿಕರು, ವಿವಿಧ ಕ್ಷೇತ್ರಗಳ ಮುಖಂಡರು ಏಕೀಕರಣ ಚಳವಳಿಗೆ ಸೇರಿ ದಾಗ(1952ರ ಅನಂತರ) ಕರ್ನಾಟಕ ಏಕೀ ಕರಣ ಆಂದೋಲನವು ಜನತೆಯ ಚಳವಳಿಯ ಸ್ವರೂಪ ಸಿಕ್ಕಿ ಕರ್ನಾಟಕದ ಕೂಗು ಬಲ ವಾಯಿತು. ಕೊನೆಗೂ ಕೇಂದ್ರ ಸರಕಾರ ಭಾಷಾವಾರು ಪ್ರಾಂತ ರಚನೆಗೆ ಒಪ್ಪಿತು. ಆಗ ಸ್ಥಾಪನೆಗೊಂಡ ಫ‌ಜಲ್‌ ಆಲಿ ಅವರ ನೇತೃತ್ವದ ಆಯೋಗದ ವರದಿಯನ್ನು ಕೊಟ್ಟ ಬಳಿಕ ಕನ್ನಡ ಮಾತನಾಡುವ ಜನರು ಅಧಿಕವಾಗಿರುವ ಭಾಗ ಗಳೆಲ್ಲ ಸೇರಿ ವಿಶಾಲ ಮೈಸೂರು ರಾಜ್ಯ 1956ರ ನವೆಂಬರ್‌ನಲ್ಲಿ ಆಸ್ತಿತ್ವಕ್ಕೆ ಬಂತು. ಹಲವು ದಶಕ ಗಳ ಹೋರಾಟದ ಫ‌ಲವಾಗಿ ಕನ್ನಡಿಗರ ಕನಸು, ನನಸಾದರೂ ಆ ಪ್ರದೇಶಕ್ಕೆ “ಮೈಸೂರು’ ಎಂಬ ಹೆಸರು ಮುಂದುವರಿಯಿತು.

ಮೈಸೂರು ರಾಜ್ಯದ   ಹೆಸರಿನಲ್ಲಿ ಹೊಸ ಕನ್ನಡ ರಾಜ್ಯ 1956ರಲ್ಲಿ  ಸ್ಥಾಪನೆಗೊಂಡರೂ ಒಗ್ಗೂಡಿದ ಕನ್ನಡಿಗರ ರಾಜ್ಯಕ್ಕೆ “ಕರ್ನಾಟಕ’ ಎಂಬ ಹೆಸರು ನಾಮಕರಣ ಮಾಡಲು ಮತ್ತೆ 17 ವರ್ಷಗಳೇ ಹಿಡಿದವು. 1973ರ   ನವೆಂಬರ್‌ 1ರಂದು, ನಮ್ಮ ರಾಜ್ಯಕ್ಕೆ ಕರ್ನಾಟಕವೆಂದು ಪುನರ್‌ನಾಮಕರ ಣಗೊಂಡರೂ ಅನೇಕ ಅಚ್ಚ ಕನ್ನಡ ಪ್ರದೇಶಗಳು ಕರ್ನಾಟಕದ ಕೈಬಿಟ್ಟು ಹೋದವು.

ಕರ್ನಾಟಕ ಏಕೀಕರಣ, ನಾಮಕರಣ ಐದು ದಶಕಗಳ ಅನಂತರವೂ ಅನೇಕ ಸಮಸ್ಯೆಗಳು ಇನ್ನೂ ಹಾಗೆಯೇ ಉಳಿದುಕೊಂಡು ಕರ್ನಾಟಕ ವನ್ನು ಕಾಡುತ್ತಲೇ ಇವೆ.

ಆಡಳಿತಾತ್ಮಕವಾಗಿ ಪ್ರತ್ಯೇಕ ಕರ್ನಾಟಕ ರಾಜ್ಯ ಉದಯವಾಗಿದ್ದರೂ ಹಲವಾರು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದರೂ ಕನ್ನಡಿಗರು ಇನ್ನೂ ನೆಮ್ಮದಿಯಿಂದ ಜೀವಿಸುವ ಕಾಲ ಕೂಡಿ ಬರಬೇಕಾದ ಅಗತ್ಯವಿದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ.

“ಹೆಸರಾಯಿತು ಕರ್ನಾಟಕ. ಉಸಿರಾಗಲಿ ಕನ್ನಡ’ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಕರ್ನಾಟಕ ನಾಮಕರಣದ ಸುವರ್ಣ ವರ್ಷಾ ಚರಣೆಯನ್ನು  ನಾವೆಲ್ಲ ಆಚರಿಸುತ್ತಿದ್ದೇವೆ. ಆದರೆ ಕರ್ನಾಟಕದ ಏಳಿಗೆಗೆ ಇನ್ನೂ ಪೂರ್ಣ ಪ್ರಮಾ ಣದಲ್ಲಿ  ಸಾಧ್ಯವಾಗಿಲ್ಲ. ಒಂದಾಗಿರುವ ಕನ್ನಡದ ಮನಸ್ಸುಗಳೆಲ್ಲವೂ  ಒಗ್ಗೂಡಿ ನಮ್ಮೊಳಗಿನ ಹಾಗೂ ಹೊರಗಿನ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬೇಕಾದ ತುರ್ತಿನ ಕಾಲ ಇದು.

ಎಸ್‌.ಜಗನ್ನಾಥ ಪ್ರಕಾಶ್‌, ಬೆಂಗಳೂರು

ಟಾಪ್ ನ್ಯೂಸ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.