World Cup: ಅಫ್ಘಾನ್ ಬೆಂಬಲಕ್ಕೆ ಮಿಸ್ಟರಿ ಬ್ಯೂಟಿ!
Team Udayavani, Oct 18, 2023, 12:06 AM IST
ಹೊಸದಿಲ್ಲಿ: “ಮಿಸ್ಟರಿ ಬ್ಯೂಟಿ’ಯೊಬ್ಬರು ಅಫ್ಘಾನಿಸ್ಥಾನದ ಕ್ರಿಕೆಟ್ ಬೆಂಬಲಕ್ಕೆ ನಿಂತಿದ್ದಾರೆ. ಚಾಂಪಿ ಯನ್ ಇಂಗ್ಲೆಂಡ್ ವಿರುದ್ಧ ಅಘಾ^ನ್ ಐತಿಹಾಸಿಕ ಗೆಲುವು ದಾಖಲಿಸಿದ ಬಳಿಕ ಈ ಸುಂದರಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗುತ್ತಿದ್ದಾರೆ.
ಮೂಲತಃ ಅಫ್ಘಾನಿಸ್ಥಾನದವರಾದ ಇವರು ಪ್ರಸ್ತುತ ದುಬಾೖಯಲ್ಲಿ ನೆಲೆಸಿದ್ದಾರೆ. ಗ್ಲೋಬಲ್ ಮೆನೇಜ್ಮೆಂಟ್ ಮತ್ತು ಲೀಡರ್ಶಿಪ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರೂಪದರ್ಶಿಯೂ ಆಗಿರುವ ಇವರ ಹೆಸರು ವಾಜ್ಮಾ ಅಯೂಬಿ. ಅಫ್ಘಾನ ಕ್ರಿಕೆಟ್ ತಂಡದ ಪಕ್ಕಾ ಅಭಿಮಾನಿ. ಸದ್ಯ ವಿಶ್ವಕಪ್ನಲ್ಲಿ ಅಫ್ಘಾನಿಸ್ಥಾನ ತಂಡವನ್ನು ಹುರಿದುಂಬಿಸಲು ಭಾರತಕ್ಕೆ ಆಗಮಿಸಿದ್ದಾರೆ.
“ಅಫ್ಘಾನಿಸ್ಥಾನ ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 69 ರನ್ನುಗಳಿಂದ ಮಣಿಸಿದೆ. ಅಫ್ಘಾನ್ ತಂಡದ ಸದಸ್ಯರೆಲ್ಲರಿಗೂ ಅಭಿನಂದನೆ
ಗಳು. ಅದೆಷ್ಟೋ ಕಾಯುವಿಕೆಯ ಬಳಿಕ ನಾವು ವಿಶ್ವಕಪ್ನಲ್ಲಿ ಮೊದಲ ಜಯ ಸಾಧಿಸಿದ್ದೇವೆ. ಭಾರತದ ಸಹೋದರ, ಸಹೋದರಿಯರಿಗೆ ಬಿಗ್ ಥ್ಯಾಂಕ್ಸ್’ ಎಂದು ಅಯೂಬಿ ಪೋಸ್ಟ್ ಮಾಡಿದ್ದಾರೆ.
ಅಫ್ಘಾನಿಸ್ಥಾನ ಹೊರತುಪಡಿಸಿದರೆ ನನ್ನ ನೆಚ್ಚಿನ ತಂಡ ಟೀಮ್ ಇಂಡಿಯಾ, ಭಾರತ ನನ್ನ ಎರಡನೇ ಮನೆ ಎಂದು ಒಮ್ಮೆ ಅಯೂಬಿ ಹೇಳಿದ್ದರು. ವಿರಾಟ್ ಕೊಹ್ಲಿ ಅವರ 18ನೇ ನಂಬರ್ ಜೆರ್ಸಿ ಧರಿಸಿ ಮಿಂಚಿದ ಫೊಟೊ ವೈರಲ್ ಆಗಿತ್ತು.
ಇದು ಅಯೂಬಿ ಅವರ ಮೊದಲ ಭಾರತ ಭೇಟಿಯೇನಲ್ಲ. ಐಪಿಎಲ್ ಪಂದ್ಯಾವಳಿಯ ವೇಳೆಯೂ ಅವರು ಆಗಮಿಸಿದ್ದರು. 2023ರ ಕೆಕೆಆರ್-ಲಕ್ನೋ ತಂಡಗಳ ನಡುವಿನ ಪಂದ್ಯವನ್ನು ಸ್ಟೇಡಿಯಂನದಲ್ಲಿದ್ದು ವೀಕ್ಷಿಸಿದ್ದರು. ಭಾರತದ ಸಿನೆಮಾರಂಗದಲ್ಲಿ ಗುರುತಿಸಿ ಕೊಳ್ಳುವುದು ಇವರ ಕನಸು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ