World Cup: ಕಿವೀಸ್‌ ಬ್ಯಾಟಿಂಗ್‌ ವರ್ಸಸ್‌ ಅಫ್ಘಾನ್‌ ಸ್ಪಿನ್‌

ಚೆನ್ನೈಯಲ್ಲಿ ಬಿರುಸಿನ ಸ್ಪರ್ಧೆಯ ನಿರೀಕ್ಷೆ- ಇಂಗ್ಲೆಂಡನ್ನು ಕೆಡವಿದ ಉತ್ಸಾಹದಲ್ಲಿ ಅಫ್ಘಾನಿಸ್ಥಾನ

Team Udayavani, Oct 18, 2023, 12:08 AM IST

newzealand afghan

ಚೆನ್ನೈ: ಒಂದೆಡೆ ಅಜೇಯ ಓಟ ಕಾಯ್ದುಕೊಂಡು ಬಂದಿರುವ ನ್ಯೂಜಿಲ್ಯಾಂಡ್‌, ಇನ್ನೊಂದೆಡೆ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ಗೆ ಆಘಾ ತವಿಕ್ಕಿ ಕೂಟದ ಮೊದಲ ಏರುಪೇರು ಫ‌ಲಿತಾಂಶ ದಾಖಲಿಸಿದ ಅಫ್ಘಾನಿಸ್ಥಾನ… ಈ ತಂಡಗಳೆರಡು ಬುಧವಾರ ಚೆನ್ನೈ ಯಲ್ಲಿ ಮುಖಾಮುಖೀ ಆಗಲಿವೆ. ಸಹಜ ವಾಗಿಯೇ ಈ ಕ್ರಿಕೆಟ್‌ ಕದನ ನಿರೀಕ್ಷೆಗಿಂತಲೂ ಹೆಚ್ಚಿನ ಕುತೂಹಲ ಕೆರಳಿಸಿದೆ.
ಅನುಮಾನವೇ ಇಲ್ಲ, ಅಫ್ಘಾನಿ ಸ್ಥಾನ ಈ ಕೂಟದ ಅತ್ಯಂತ ಅಪಾಯಕಾರಿ ಪಡೆ. ಅದು ವಿಶ್ವಕಪ್‌ಗೆ ನೇರ ಅರ್ಹ ತೆಯೊಂದಿಗೆ ಬಂದ ತಂಡ. ಹೀಗಾಗಿ ಇದಕ್ಕೆ ತಕ್ಕ ಪ್ರದರ್ಶನ ನೀಡಲೇಬೇಕಿತ್ತು. ಇಂಥ ದೊಂದು ಸುವರ್ಣಾವಕಾಶ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧವೇ ಪ್ರಾಪ್ತವಾದ್ದರಿಂದ ಅಫ್ಘಾನ್‌ ತಂಡದ ಮೌಲ್ಯ ದೊಡ್ಡ ಮಟ್ಟದಲ್ಲೇ ವೃದ್ಧಿಯಾಗಿದೆ. ಹೀಗಾಗಿ ಎಲ್ಲ ಎದು ರಾಳಿಗಳು ಹಶ್ಮತುಲ್ಲ ಶಾಹಿದಿ ಪಡೆ ವಿರುದ್ಧ ತೀವ್ರ ಎಚ್ಚರಿಕೆಯಿಂದ ಇರ ಬೇಕಾದುದು ಅತ್ಯಗತ್ಯ. ಇದು ನ್ಯೂಜಿ ಲ್ಯಾಂಡ್‌ಗೂ ಅನ್ವಯಿಸುವ ಮಾತು.

ಮತ್ತೆ ಲ್ಯಾಥಂ ನಾಯಕತ್ವ
ನ್ಯೂಜಿಲ್ಯಾಂಡ್‌ ಪುನಃ ನಾಯಕ ಕೇನ್‌ ವಿಲಿಯಮ್ಸನ್‌ ಗೈರಲ್ಲಿ ಆಡಲಿ ಳಿಯಬೇಕಿದೆ. ಮೊದಲೆರಡು ಪಂದ್ಯ ಗಳಿಂದ ಹೊರಗುಳಿದಿದ್ದ ವಿಲಿಯ ಮ್ಸನ್‌, ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಮರಳಿದರೂ ಕೈಗೆ ಏಟು ಅನು ಭವಿಸಿ ಮತ್ತೆ ತಂಡದಿಂದ ಬೇರ್ಪ ಟ್ಟಿದ್ದಾರೆ. ಟಾಮ್‌ ಲ್ಯಾಥಂ ಮರಳಿ ಕಿವೀಸ್‌ ಚುಕ್ಕಾಣಿ ಹಿಡಿಯಲಿದ್ದಾರೆ. ಇವರ ಸಾರಥ್ಯದಲ್ಲೇ ಇಂಗ್ಲೆಂಡ್‌ ಮತ್ತು ನೆದರ್ಲೆಂಡ್ಸ್‌ ವಿರುದ್ಧ ನ್ಯೂಜಿಲ್ಯಾಂಡ್‌ ಗೆದ್ದು ಬಂದಿದ್ದನ್ನು ಮರೆಯುವಂತಿಲ್ಲ. ಆದರೆ “ಇಂಗ್ಲೆಂಡ್‌ ಬೀಟರ್’ ಎಂಬ ಹಣೆಪಟ್ಟಿ ಇರುವುದರಿಂದ ಅಫ್ಘಾನಿಸ್ಥಾನವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಅದೀಗ ಮೊದಲಿನ “ಸಾಮಾನ್ಯ ತಂಡ’ವಲ್ಲ.

ಇದು ವಿಶ್ವಕಪ್‌ನಲ್ಲಿ ಇತ್ತಂಡಗಳ ನಡುವಿನ 3ನೇ ಮುಖಾಮುಖೀ. ಹಿಂದಿನ ಎರಡೂ ಪಂದ್ಯಗಳಲ್ಲಿ ನ್ಯೂಜಿಲ್ಯಾಂಡ್‌ ಜಯ ಸಾಧಿಸಿದೆ.

ಇಂಗ್ಲೆಂಡನ್ನು ಮಣಿಸಿದ ಸ್ಫೂರ್ತಿ
ಬಾಂಗ್ಲಾದೇಶ ಮತ್ತು ಭಾರತದ ವಿರುದ್ಧ ಸೋಲನುಭವಿಸಿ ಬಂದಿದ್ದ ಅಫ್ಘಾನಿಸ್ಥಾನ, ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿತು. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ಮೇಲುಗೈ ಸಾಧಿಸಿ ಕ್ರಿಕೆಟ್‌ ಜಗತ್ತಿನಲ್ಲೊಂದು ಸಂಚಲನ ಮೂಡಿಸಿತು. ಇದರಿಂದ ತಂಡದ ಸಾಮರ್ಥ್ಯ ಪೂರ್ತಿಯಾಗಿ ಅನಾವರಣಗೊಂಡಿದೆ. ಇದೇ ಲಯದಲ್ಲಿ ಮುಂದುವರಿದು ವಿಶ್ವದ ಕೆಲವಾದರೂ ಬಲಿಷ್ಠ ತಂಡಗಳನ್ನು ತಲೆಕೆಳಗಾಗಿಸುವುದು ಶಾಹಿದಿ ಪಡೆಯ ಯೋಜನೆ. ಅದು ವಿಶ್ವಕಪ್‌ನಲ್ಲಿ ಕಳೆದುಕೊಳ್ಳುವಂಥದ್ದೇನಿಲ್ಲ. ಇಂಗ್ಲೆಂಡನ್ನು ಮಣಿಸುವ ಮೂಲಕ ಅದು ಕೆಲವು ಪಂದ್ಯಗಳಿಗಾಗುವಷ್ಟು ಸ್ಫೂರ್ತಿ ಪಡೆದಿದೆ.

ಆರಂಭಕಾರ ರೆಹಮಾನುಲ್ಲ ಗುರ್ಬಜ್‌ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಈಗಾಗಲೇ 2 ಅರ್ಧ ಶತಕ ಬಾರಿಸಿದ್ದಾರೆ. ನಾಯಕ ಶಾಹಿದಿ, ಅಜ್ಮತುಲ್ಲ ಒಮರ್‌ಜಾಯ್‌, ಇಕ್ರಮ್‌ ಅಲಿಖೀಲ್‌ ಕೂಡ ಉತ್ತಮ ಬ್ಯಾಟಿಂಗ್‌ ಲಯದಲ್ಲಿದ್ದಾರೆ. ಆದರೆ ಇವರೆಲ್ಲ ಟ್ರೆಂಟ್‌ ಬೌಲ್ಡ್‌, ಮ್ಯಾಟ್‌ ಹೆನ್ರಿ ಅವರ ಪೇಸ್‌ ದಾಳಿ; ರವೀಂದ್ರ-ಸ್ಯಾಂಟ್ನರ್‌ ಜೋಡಿಯ ಸ್ಪಿನ್‌ ದಾಳಿಯನ್ನು ಹೇಗೆ ನಿಭಾಯಿಸಬಲ್ಲರು ಎಂಬುದು ಮುಖ್ಯ.

ಅಫ್ಘಾನ್‌ ಬೌಲಿಂಗ್‌ ವಿಭಾಗ ಘಾತಕವಾಗಿದೆ. ಸ್ಪಿನ್ನರ್‌ ತ್ರಿವಳಿಗಳಾದ ಮುಜೀಬ್‌ ಉರ್‌ ರೆಹಮಾನ್‌, ರಶೀದ್‌ ಖಾನ್‌, ಮೊಹಮ್ಮದ್‌ ನಬಿ ಬೌಲಿಂಗ್‌ ಬೆನ್ನೆಲುಬಾಗಿದ್ದಾರೆ. ಅಕ ಸ್ಮಾತ್‌ ಕಿವೀಸ್‌ ಬ್ಯಾಟರ್ ಸ್ಪಿನ್ನರ್‌ಗಳನ್ನು ನಿಭಾಯಿಸುವಲ್ಲಿ ಎಡವಿದರೋ, ಆಗ ಗಂಡಾಂತರ ಕಾದಿದೆ ಎಂದೇ ಅರ್ಥ! ಇಂಗ್ಲೆಂಡ್‌ ಕೂಡ ಇವರ ಸ್ಪಿನ್‌ ದಾಳಿಯನ್ನು ಎದುರಿಸಲಾಗದೆ ಸೋತದ್ದನ್ನು ಮರೆಯುವಂತಿಲ್ಲ. ಈ ಮೂವರು ಸೇರಿ 8 ವಿಕೆಟ್‌ ಉಡಾಯಿಸಿದ್ದರು.

ಸಶಕ್ತ ಕಿವೀಸ್‌ ಪಡೆ
ರನ್ನರ್ ಅಪ್‌ ನ್ಯೂಜಿಲ್ಯಾಂಡ್‌ ಕೂಡ ಉದ್ಘಾಟನ ಪಂದ್ಯದಲ್ಲಿ ಚಾಂಪಿಯನ್‌ ತಂಡವನ್ನು ಸದೆಬಡಿದು ಬಂದ ತಂಡ. ಬಳಿಕ ನೆದರ್ಲೆಂಡ್ಸ್‌ ಮತ್ತು ಬಾಂಗ್ಲಾದೇಶಕ್ಕೂ ನೀರು ಕುಡಿಸಿದೆ. ವಿಲಿಯಮ್ಸನ್‌ ಗೈರಲ್ಲೂ ಅದು ಸಮಸ್ಯೆಯನ್ನೇನೂ ಅನುಭವಿಸಿಲ್ಲ. ಡೇವನ್‌ ಕಾನ್ವೇ, ರಚಿನ್‌ ರವೀಂದ್ರ, ಡ್ಯಾರಿಲ್‌ ಮಿಚೆಲ್‌, ಗ್ಲೆನ್‌ ಫಿಲಿಪ್ಸ್‌ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ದೊಡ್ಡ ಮೊತ್ತ ಪೇರಿಸುವುದಕ್ಕೂ, ದೊಡ್ಡ ಮೊತ್ತ ಬೆನ್ನಟ್ಟುವುದಕ್ಕೂ ಸೈ ಎನಿಸಿದ್ದಾರೆ.

ಹಾಗೆಯೇ ಬೌಲಿಂಗ್‌ ವಿಭಾಗ. ಅನುಭವಿ ಟಿಮ್‌ ಸೌಥಿ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಉಳಿದಂತೆ ಬೌಲ್ಟ್, ಹೆನ್ರಿ, ಫ‌ರ್ಗ್ಯುಸನ್‌ ಹಾಗೂ ಸಾಲು ಸಾಲು ಆಲ್‌ರೌಂಡರ್‌ಗಳೆಲ್ಲ ನ್ಯೂಜಿಲ್ಯಾಂಡ್‌ ಬೌಲಿಂಗ್‌ ಶಕ್ತಿಯಾಗಿದ್ದಾರೆ.

ಚೆನ್ನೈ ಟ್ರ್ಯಾಕ್‌ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿದೆ. ನ್ಯೂಜಿಲ್ಯಾಂಡ್‌ ಇಲ್ಲಿ ಈಗಾಗಲೇ ಬಾಂಗ್ಲಾವನ್ನು ಎದುರಿ ಸಿದ್ದು, 8 ವಿಕೆಟ್‌ಗಳಿಂದ ಗೆದ್ದಿದೆ.

ಟಾಪ್ ನ್ಯೂಸ್

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.