ಗ್ಯಾಂಗ್‌ಸ್ಟರ್‌ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಶಾನ್ವಿ ಶ್ರೀವಾಸ್ತವ್


Team Udayavani, Jan 27, 2021, 2:37 PM IST

ಗ್ಯಾಂಗ್‌ಸ್ಟರ್‌ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ

ಕನ್ನಡದಲ್ಲಿ ಇಲ್ಲಿಯವರೆಗೆ ಟ್ರೆಡಿಷನಲ್‌ ಮತ್ತು ಮಾಡ್ರನ್‌ ಲುಕ್‌ಗಳಲ್ಲಿ, ಲವ್ಲಿ ಗರ್ಲ್ ಆಗಿ, ಹಲವು ಲೈವ್ಲಿ ಪಾತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ ನಟಿ ಶಾನ್ವಿ ಶ್ರೀವಾಸ್ತವ್‌ ಈಗ ಗ್ಯಾಂಗ್‌ಸ್ಟರ್‌ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರುವ ಯೋಜನೆಯಲ್ಲಿದ್ದಾರೆ. ಹೌದು, ಟ್ರೆಡಿಷನಲ್‌ ಮತ್ತು ಮಾಡ್ರನ್‌ ಎರಡೂ ಥರದ ಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದ ಶಾನ್ವಿ, ಇದೇ ಮೊದಲ ಬಾರಿಗೆ ಸಂಪೂರ್ಣ ವಿಭಿನ್ನವಾಗಿರುವ, ರಗಡ್‌ ಆಗಿರುವಂಥ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ಅಂದಹಾಗೆ, ಸದ್ಯ ಶಾನ್ವಿ ಶ್ರೀವಾಸ್ತವ್‌ ಅಭಿನಯದ “ಕಸ್ತೂರಿ ಮಹಲ್‌’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಆ ಚಿತ್ರ ಇನ್ನೇನು ತೆರೆಗೆ ಬರಲು ಸಿದ್ಧವಾಗುತ್ತಿದೆ. ಇದರ ಹಿಂದೆಯೇ ಶಾನ್ವಿ “ಬ್ಯಾಂಗ್‌’ ಎನ್ನುವ ಹೊಸಚಿತ್ರವನ್ನು ಒಪ್ಪಿಕೊಂಡಿದ್ದಾರೆ.
“ಬ್ಯಾಂಗ್‌’ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್‌ ಅವರದ್ದು ಗ್ಯಾಂಗ್‌ ಸ್ಟರ್‌ ಪಾತ್ರವಂತೆ.

ಇನ್ನು “ಬ್ಯಾಂಗ್‌’ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿದ ಶಾನ್ವಿ, “ಇಲ್ಲಿಯವರೆಗೆ ನಾನು ಮಾಡಿದ್ದ ಬಹುತೇಕ ಸಿನಿಮಾಗಳಲ್ಲಿ ಲವ್ಲಿ ಗರ್ಲ್ ಥರದ, ಹಾರರ್‌ ಶೇಡ್‌ ಇದ್ದ ಪಾತ್ರಗಳೇ ಹೆಚ್ಚಾಗಿದ್ದವು. ಆದ್ರೆ ಈ ಸಿನಿಮಾದಲ್ಲಿ ಮೊದಲ ಬಾರಿಗೆ ರಫ್ ಆಗಿರುವಂಥ, ಒಂಥರಾ ರಗಡ್‌ ಕ್ಯಾರೆಕ್ಟರ್‌ ಸಿಕ್ಕಿದೆ. ನನ್ನ ಕ್ಯಾರೆಕ್ಟರ್‌ನಲ್ಲಿ ತುಂಬ ಸಸ್ಪೆನ್ಸ್‌ ಇದೆ. ಥ್ರಿಲ್ಲಿಂಗ್‌ ಆಗಿರುವಂಥ ಕಂಟೆಂಟ್‌ ಇದೆ. ಸಿನಿಮಾದ ಸಬ್ಜೆಕ್ಟ್ ಮತ್ತು ನನ್ನ ಕ್ಯಾರೆಕ್ಟರ್‌ ಎರಡೂ ಹೊಸಥರ ಇದ್ದಿದ್ದರಿಂದ “ಬ್ಯಾಂಗ್‌’ ಸಿನಿಮಾ ಒಪ್ಪಿಕೊಂಡೆ. ಇಲ್ಲಿಯವರೆಗೆ ಎಲ್ಲೂ ನೋಡಿರದಂಥ ಶಾನ್ವಿ ನಿಮಗೆ ಈ ಸಿನಿಮಾದಲ್ಲಿ ಕಾಣುತ್ತಾಳೆ’ ಎನ್ನುತ್ತಾರೆ.

ಇದನ್ನೂ ಓದಿ:ತಮಿಳು ಬೆಡಗಿ ಯಾಶಿಕಾ ಆನಂದ್ ವಿಶೇಷ ಫೋಟೋ ಗ್ಯಾಲರಿ

ಇನ್ನು “ಬ್ಯಾಂಗ್‌’ ಚಿತ್ರದ ಪಾತ್ರಕ್ಕಾಗಿ ಶಾನ್ವಿ ಒಂದಷ್ಟು ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರಂತೆ. “ಇದರಲ್ಲಿ ನಾನು ಕೈಯಲ್ಲಿ ಗನ್‌ ಹಿಡಿದುಕೊಳ್ತೀನಿ, ನನಗಾಗಿ ಒಂದಷ್ಟು ಆ್ಯಕ್ಷನ್‌ ಸೀನ್‌ ಕೂಡ ಇದೆ. ಸ್ವಲ್ಪ ಸೀರಿಯಸ್‌ ಲುಕ್‌ ಇದೆ. ಹಾಗಾಗಿ ನನ್ನ ಕ್ಯಾರೆಕ್ಟರ್‌ಗೆ ಒಂದಷ್ಟು ಹೋಮ್‌ ವರ್ಕ್‌ ಬೇಕಾಗುತ್ತದೆ. ಅದಕ್ಕಾಗಿ ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಇಂಥದ್ದೊಂದು ಕ್ಯಾರೆಕ್ಟರ್‌ ಮಾಡ್ರಿರೋದಕ್ಕೆ ನಾನೂ ಕೂಡ ಎಕ್ಸೆ„ಟ್‌ ಆಗಿದ್ದೇನೆ. ಇದೇ ಫೆಬ್ರವರಿಯಿಂದ ನನ್ನ ಭಾಗದ ಶೂಟಿಂಗ್‌ ಶುರುವಾಗಲಿದೆ. ಈ ವರ್ಷದ ಮಧ್ಯ ಭಾಗದಲ್ಲಿ ಈ ಸಿನಿಮಾ ಸ್ಕ್ರೀನ್‌ಗೆ ಬರಬಹುದು’ ಎನ್ನುವುದು ಶಾನ್ವಿ ಮಾತು.

ಎರಡು ದಿನಗಳಲ್ಲಿ ನಡೆಯುವ ಸಸ್ಪೆನ್ಸ್‌ – ಥ್ರಿಲ್ಲರ್‌ ಘಟನೆಯ ಕಥಾಹಂದರ ಹೊಂದಿರುವ “ಬ್ಯಾಂಗ್‌’ ಚಿತ್ರ ಕೇವಲ ಏಳು – ಎಂಟು ಪಾತ್ರಗಳ ಸುತ್ತ ನಡೆಯಲಿದೆಯಂತೆ. ಸದ್ಯ ಚಿತ್ರದ ಮುಖ್ಯ ಪಾತ್ರಕ್ಕೆ ಶಾನ್ವಿ ಶ್ರೀವಾಸ್ತವ್‌ ಹೆಸರು ಅಂತಿಮವಾಗಿದ್ದು, ಚಿತ್ರದ ಉಳಿದ ಕಲಾವಿದರ ಹೆಸರು ಇನ್ನಷ್ಟೇ ಬಹಿರಂಗವಾಗಬೇಕಿದೆ. “ಯು.ಕೆ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಪೂಜಾ
ವಸಂತಕುಮಾರ್‌ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ, ಜೊತೆಗೆ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವವಿರುವ ಗಣೇಶ್‌ ಪರಶುರಾಮ್‌ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ನಾಲ್ಕು ಹಾಡುಗಳಿಗೆ ರಿತ್ವಿಕ್‌ ಮುರಳಿಧರ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ
ಉದಯಲೀಲ ಛಾಯಾಗ್ರಹಣ, ವಿಜೇತ್‌ ಚಂದ್ರ ಸಂಕಲನವಿದೆ. ಈಗಾಗಲೇ ಸದ್ದಿಲ್ಲದೆ ಬೆಂಗಳೂರು ಸುತ್ತಮುತ್ತ ಎರಡು ಹಂತದ ಚಿತ್ರೀಕರಣ ಮುಗಿಸಿರುವ “ಬ್ಯಾಂಗ್‌’ ಚಿತ್ರತಂಡ, ಫೆಬ್ರವರಿಯಲ್ಲಿ ಮಂಗಳೂರು ಸುತ್ತಮುತ್ತ ಮೂರನೇ ಹಂತದ ಚಿತ್ರೀಕರಣಕ್ಕೆ ಯೋಜನೆ ಹಾಕಿಕೊಂಡಿದೆ. ಒಟ್ಟಾರೆ ಶಾನ್ವಿ ಅವರ ಗ್ಯಾಂಗ್‌ಸ್ಟರ್‌ ಗೆಟಪ್‌ ನೋಡಬೇಕಾದರೆ ಇನ್ನೂ ಕೆಲ ತಿಂಗಳು ಕಾಯಬೇಕು.

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.