ಗರ್ಭಾವಸ್ಥೆ , ಹೆರಿಗೆ ಮತ್ತು ಶಿಶು ಆರೈಕೆಯ ಬಗ್ಗೆ ಕೆಲವು ಮಾಹಿತಿಗಳು


Team Udayavani, Apr 26, 2020, 5:30 AM IST

ಗರ್ಭಾವಸ್ಥೆ , ಹೆರಿಗೆ ಮತ್ತು ಶಿಶು ಆರೈಕೆಯ ಬಗ್ಗೆ ಕೆಲವು ಮಾಹಿತಿಗಳು

ಈ ಲೇಖನವು ಅಮೆರಿಕನ್‌ ಕಾಲೇಜ್‌ ಆಫ್‌ ಒಬ್‌ಸ್ಟೆಟ್ರಿಷಿಯನ್ಸ್‌ ಆ್ಯಂಡ್‌ ಗೈನಕಾಲಜಿಸ್ಟ್ಸ್ (ಎಸಿಒಜಿ), ರಾಯಲ್‌ ಕಾಲೇಜ್‌ ಆಫ್‌ ಒಬ್‌ಸ್ಟೆಟ್ರಿಷಿಯನ್ಸ್‌ ಆ್ಯಂಡ್‌ ಗೈನಕಾಲಜಿಸ್ಟ್ಸ್ (ಆರ್‌ಸಿಒಜಿ), ವಿಶ್ವ ಆರೋಗ್ಯ ಸಂಸ್ಥೆ, ರೋಗ ನಿಯಂತ್ರಣ ಕೇಂದ್ರಗಳ ಮಾರ್ಗಸೂಚಿಗಳು ಮತ್ತು ಅಂತಾರಾಷ್ಟ್ರೀಯ ಜರ್ನಲ್‌ಗ‌ಳಲ್ಲಿ 2020ರ ಎಪ್ರಿಲ್‌ 20ರ ವರೆಗೆ ಪ್ರಕಟವಾದ ವಿವಿಧ ಸಂಶೋಧನ ಲೇಖನಗಳನ್ನು ಆಧರಿಸಿದೆ. ಈ ವಿಷಯದ ಬಗ್ಗೆ ಹೊಸ ಮಾಹಿತಿಗಳು ಪ್ರತಿದಿನವೂ ಹೊರಬರುತ್ತಿವೆ ಮತ್ತು ನಿರ್ವಹಣ ಕಾರ್ಯತಂತ್ರಗಳು ಅದಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ ಎಂದು ಓದುಗರು ಗಮನಿಸಬೇಕಾಗಿ ವಿನಂತಿ. ಆದಾಗ್ಯೂ ನಿರ್ವಹಣೆಯ ಮೂಲತತ್ವಗಳು ಹೆಚ್ಚು ಬದಲಾಗುವುದಿಲ್ಲ. ಈ ಲೇಖನವು ಕೋವಿಡ್‌ ಸಾಂಕ್ರಾಮಿಕದ ಈ ಸಮಯದಲ್ಲಿ, ಕೋವಿಡ್‌-19 ಅಲ್ಲದ ಗರ್ಭಿಣಿಯರ ಮತ್ತು ಕೋವಿಡ್‌-19 ಸೋಂಕುಪೀಡಿತ ಗರ್ಭಿಣಿಯರ ಪ್ರಸವಪೂರ್ವ, ಪ್ರಸವ ಸಮಯದ, ಪ್ರಸವಾನಂತರದ ನಿರ್ವಹಣೆಯ, ಶಿಶುವಿನ ಆರೈಕೆಯ, ಸ್ತನ್ಯಪಾನ ಮತ್ತು ಗರ್ಭನಿರೋಧಕ ಸಾಧನಗಳ ಮಾಹಿತಿಗಳನ್ನು ತಿಳಿಸುತ್ತದೆ.

ಸೋಂಕು ತಡೆಗಟ್ಟುವಿಕೆ

ಸೋಂಕು ತಡೆಗಟ್ಟುವ ವಿಧಾನಗಳು ಗರ್ಭಿಣಿಯಲ್ಲದ ಸಾಮಾನ್ಯ ಮಹಿಳೆಯರಲ್ಲಿ ಇರುವಂತೆಯೇ ಆಗಿವೆ. ಮಕ್ಕಳೊಂದಿಗೆ ಗರ್ಭಿಣಿ ಮಹಿಳೆಯರು ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಗರ್ಭಿಣಿ ಸ್ತ್ರೀ, ಡಾಕ್ಟರ್‌, ನರ್ಸ್‌ ಅಥವಾ ಆರೋಗ್ಯ ಇಲಾಖೆಯ ಕಾರ್ಯಕರ್ತಳಾಗಿದ್ದರೆ, ಮೂರನೇ ತ್ರೆ„ಮಾಸಿಕ ಅವಧಿಯಲ್ಲಿ, ವಿಶೇಷವಾಗಿ 36 ವಾರಗಳ ಅನಂತರ ರೋಗಿಗಳೊಂದಿಗೆ ಮುಖಾಮುಖೀ ಸಂಪರ್ಕವನ್ನು ನಿಲ್ಲಿಸಬೇಕು.

ಕೋವಿಡ್‌ – 19 ವರ್ಗೀಕರಣ
ಸೌಮ್ಯ ಲಕ್ಷಣ: ಯಾವುದೇ ಲಕ್ಷಣಗಳಿಲ್ಲದಿರುವುದು ಅಥವಾ ಸೌಮ್ಯ ಲಕ್ಷಣಗಳು (ಜ್ವರ, ಆಯಾಸ, ಕೆಮ್ಮು ಮತ್ತು / ಅಥವಾ ಕೋವಿಡ್‌ -19ರ ಕಡಿಮೆ ಸಾಮಾನ್ಯ ಲಕ್ಷಣಗಳು)

ತೀವ್ರತರ ಲಕ್ಷಣ: ವೇಗದ ಉಸಿರಾಟ (ಉಸಿರಾಟದ ಪ್ರಮಾಣ ನಿಮಿಷಕ್ಕೆ 30ಕ್ಕಿಂತ ಹೆಚ್ಚು ಉಸಿರಾಟಗಳು), ಆಮ್ಲಜನಕದ ಕೊರತೆ (ಆಮ್ಲಜನಕದ ಶುದ್ಧತ್ವ ಶೇ.93ಕ್ಕಿಂತ ಕಡಿಮೆ ಅಥವಾ ಆಮ್ಲಜನಕದ ಭಾಗಶಃ ಒತ್ತಡ / ಪ್ರೇರಿತ ಆಮ್ಲಜನಕದ ಭಾಗ [PaO2 / FiO2<300 mmHg ಕ್ಕಿಂತ ಕಡಿಮೆ), ಅಥವಾ ಶ್ವಾಸಕೋಶದ ಶೇ.50ಕ್ಕಿಂತ ಹೆಚ್ಚು ಒಳಗೊಳ್ಳುವಿಕೆ (24ರಿಂದ 48 ಗಂಟೆಗಳಲ್ಲಿ).
ಗಂಭೀರವಾದ ಲಕ್ಷಣ: ಉಸಿರಾಟದ ವೈಫಲ್ಯ, ಆಘಾತ ಅಥವಾ ಬಹು-ಅಂಗಗಳ ಅಪಸಾಮಾನ್ಯ ಕ್ರಿಯೆ ಗರ್ಭಾವಸ್ಥೆಯಲ್ಲಿ ಕೋವಿಡ್‌ – 19
ತಗಲುವ ಸಾಧ್ಯತೆ ಹೆಚ್ಚುತ್ತದೆಯೇ?

ಗರ್ಭಾವಸ್ಥೆ ಮತ್ತು ಹೆರಿಗೆಯಲ್ಲಿ ಕೋವಿಡ್‌ – 19 ರೋಗ ಉಂಟುಮಾಡುವ SARS-CoV-2 ತಗಲುವ ಸಾಧ್ಯತೆ ಹೆಚ್ಚಾಗುವುದಿಲ್ಲ. ಅಷ್ಟೇ ಅಲ್ಲದೆ, ಸಮಾನ ಪ್ರಾಯದ ಗರ್ಭಿಣಿಯಲ್ಲದ ಮಹಿಳೆಯರಿಗೆ ಹೋಲಿಸಿದರೆ ಇದು ಗರ್ಭಾವಸ್ಥೆಯಲ್ಲಿ ವಿಶೇಷವಾಗಿ ತೀವ್ರವಾಗುವುದಿಲ್ಲ ಮತ್ತು ಚಿಕಿತ್ಸಾ ಕ್ರಮವನ್ನು ಬದಲಿಸುವುದಿಲ್ಲ. ಹೆಚ್ಚಿನ ಸೋಂಕುಪೀಡಿತ ಗರ್ಭಿಣಿ ಮಹಿಳೆಯರು ತುರ್ತು ಹೆರಿಗೆಗೆ ಒಳಗಾಗದೆ ಚೇತರಿಸಿಕೊಳ್ಳುತ್ತಾರೆ. ಆದಾಗ್ಯೂ, ಮಧುಮೇಹ, ತೀವ್ರ ಬೊಜ್ಜು, ತೀವ್ರವಾದ ಅಸ್ತಮಾದಂತಹ ವಿಷಮ ಪರಿಸ್ಥಿತಿ ಹೊಂದಿರುವ ಗರ್ಭಿಣಿ ಮಹಿಳೆಯರಿಗೆ ಈ ಸೋಂಕು ತಗಲಿದರೆ, ಗಂಭೀರ ರೋಗ ಬರುವ ಅಪಾಯ ಹೆಚ್ಚಾಗುತ್ತದೆ.

ನ್ಯೂಯಾರ್ಕ್‌ ನಗರದ ಲಭ್ಯ ದತ್ತಾಂಶ ಮಾಹಿತಿಯ ಪ್ರಕಾರ 43 ಗರ್ಭಿಣಿ ರೋಗಿಗಳ ಪೈಕಿ 37 (86%) ರೋಗಿಗಳು ಸೌಮ್ಯ, ನಾಲ್ವರು (9.3%) ತೀವ್ರ ಮತ್ತು ಇಬ್ಬರು (4.7%) ಗಂಭೀರ ರೋಗವನ್ನು ಹೊಂದಿದ್ದರು. ಗರ್ಭಿಣಿ ಸ್ತ್ರೀಯರಲ್ಲಿ ಕೋವಿಡ್‌ -19ರಿಂದ ಬೆಳವಣಿಗೆಯಾಗುವ ನ್ಯುಮೋನಿಯಾಗೆ, ಸಾಮಾನ್ಯ ಮಹಿಳೆಗೆ ಬೇಕಾದಂತಹ ತೀವ್ರ ನಿಗಾ ಘಟಕದಷ್ಟೇ ಆವಶ್ಯಕತೆ ಇರುತ್ತದೆ. ಆದರೆ ಇಂಥವರಲ್ಲಿ ಅವಧಿಪೂರ್ವ ಮತ್ತು ಶಸ್ತ್ರಚಿಕಿತ್ಸಾ ಹೆರಿಗೆಯ ಅಪಾಯ ಹೆಚ್ಚು.

ಕೋವಿಡ್‌ – 19 ಗರ್ಭಾವಸ್ಥೆಯ ಮೇಲೆ ಹೆಚ್ಚಿನ ಸಮಸ್ಯೆಗಳನ್ನು ತಂದೊಡ್ಡುವುದೇ?
ಹೌದು, ಕೋವಿಡ್‌ – 19ರಲ್ಲಾಗುವ ಹೈಪರ್‌ಥರ್ಮಿಯಾ (ಅತಿಯಾದ ತಾಪ) ಮತ್ತು ನ್ಯುಮೋನಿಯಾದಂತಹ ಕೆಲವು ತೊಂದರೆಗಳು ತಾಯಿಗೆ ಮಾತ್ರವಲ್ಲದೆ ಮಗುವಿಗೂ ಸಮಸ್ಯೆಗಳನ್ನು ಉಂಟು ಮಾಡುತ್ತವೆ ಮತ್ತು ನಿರ್ವಹಣೆಯ ಮೇಲೆ ಪ್ರಭಾವ ಬೀರುತ್ತದೆ.

ಹೈಪರ್‌ಥರ್ಮಿಯಾ (ಅತಿಯಾದ ತಾಪ): ಶಿಶುವಿನ ಅಂಗಾಂಗಗಳು ರಚನೆಯಾಗುವ ಮೊದಲ ತ್ರೆ„ಮಾಸಿಕ ಸಮಯದಲ್ಲಿ ಅತಿಯಾದ ತಾಪವು ಅಂಗ ಊನತೆ, ಕೆಲವು ಜನ್ಮಜಾತ ವೈಪರೀತ್ಯಗಳು, ವಿಶೇಷವಾಗಿ ನರಕೊಳವೆಯ ದೋಷಗಳು ಅಥವಾ ಗರ್ಭಪಾತವನ್ನು ಉಂಟುಮಾಡಬಹುದು. ಆದರೆ ಪ್ಯಾರಸಿಟಮಾಲ್‌ ಮಾತ್ರೆಯನ್ನು ತೆಗೆದುಕೊಳ್ಳುವ ಮೂಲಕ ಇದನ್ನು ಕಡಿಮೆ ಮಾಡಬಹುದು. ಈ ಮಾತ್ರೆ ಗರ್ಭಾವಸ್ಥೆಯ ಮೊದಲ ತ್ರೆ„ಮಾಸಿಕದಲ್ಲಿಯೂ ಸುರಕ್ಷಿತವಾಗಿದೆ.

ಕೋವಿಡ್‌ ನ್ಯುಮೋನಿಯಾ : ಇದು ಅವಧಿಪೂರ್ವ ಶಿಶುವಿನ ಜನನ, ಪ್ರಿಕ್ಲಾಂಪ್ಸಿಯಾ (ಗರ್ಭವಾಸ್ಥೆಯಲ್ಲಿ ಬರುವ ರಕ್ತದೊತ್ತಡದ ಕಾಯಿಲೆ), ಶಿಶುವಲ್ಲಿ ಹೃದಯಬಡಿತದ ತೊಂದರೆ, ಸಿಸೇರಿಯನ್‌ ಹೆರಿಗೆ ಮತ್ತು ನವಜಾತ ಐಸಿಯುನಲ್ಲಿ ಶಿಶುವಿನ ಆರೈಕೆಯ ಆವರ್ತನವನ್ನು ಹೆಚ್ಚಿಸುತ್ತದೆ.

SARS-CoV-2 ಗರ್ಭಾಶಯದಲ್ಲಿನ ಮಗುವಿಗೆ ಹರಡುತ್ತದೆಯೇ?
ಇಲ್ಲ, ಇದು ಗರ್ಭಾಶಯದಲ್ಲಿ ತಾಯಿಯಿಂದ ಮಗುವಿಗೆ ಹರಡುವುದಿಲ್ಲ.

ಶಿಶುವಿನ ಹೊಕ್ಕುಳ ಬಳ್ಳಿಯ ರಕ್ತ, ಆಮ್ನಿಯೋಟಿಕ್‌ ದ್ರವ (ಶಿಶುವಿನ ಸುತ್ತಲೂ ಇರುವ ನೀರು) ಅಥವಾ ಜರಾಯು (ಕಸ) ವಿನಲ್ಲಿ SARS-CoV-2 ಪತ್ತೆಯಾಗಿಲ್ಲ. ತಾಯಿಯ ರಕ್ತದಲ್ಲಿ ವೈರಸ್‌ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇರುವುದರಿಂದ ಜರಾಯುವಿನಲ್ಲಿ ವೈರಸ್‌ನ ಅಂಕುರವಾಗುವುದಿಲ್ಲ. ಆದ್ದರಿಂದ ಅದು ಶಿಶುವಿಗೆ ಪ್ರಸರಣವಾಗುವುದಿಲ್ಲ

ರೋಗ ಪತ್ತೆ ಹಚ್ಚುವುದು ಹೇಗೆ?
ಕೋವಿಡ್‌ -19 ಅನ್ನು ಈ ರೋಗಿಗಳಲ್ಲಿ ಪರಿಗಣಿಸಬೇಕು:
- ಹೊಸದಾಗಿ ಪ್ರಾರಂಭವಾದ ಜ್ವರ ಮತ್ತು / ಅಥವಾ ಉಸಿರಾಟದ ಲಕ್ಷಣಗಳು (ಉದಾ, ಕೆಮ್ಮು, ಉಸಿರಾಟದ ತೊಂದರೆ).
- ಯಾವುದೇ ಸ್ಪಷ್ಟ ಕಾರಣವಿಲ್ಲದೆ ತೀವ್ರ ಮತ್ತು ಕಡಿಮೆ ಉಸಿರಾಟದ ಕಾಯಿಲೆ.
- ಕಳೆದ 14 ದಿನಗಳಲ್ಲಿ ಸಮುದಾಯ ಪ್ರಸರಣ ಅಥವಾ ದೃಢೀಕೃತ ಅಥವಾ ಶಂಕಿತ ಪ್ರಕರಣದವರೊಂದಿಗೆ ನಿಕಟ ಸಂಪರ್ಕವಿರುವ ಸ್ಥಳದಲ್ಲಿ ವಾಸಿಸು ವುದು ಅಥವಾ ಪ್ರಯಾಣಿಸುವುದು.
ಮೇಲೆ ತಿಳಿಸಿದ ರೋಗಲಕ್ಷಣವಿದ್ದು ಪರೀಕ್ಷಾ ಮಾನದಂಡಗಳನ್ನು ಪೂರೈಸುವ ರೋಗಿಗಳು ಇತರ ಉಸಿರಾಟದ ರೋಗಕಾರಕಗಳಿಗೆ (ಉದಾ: ಎಚ್‌1 ಎನ್‌1) ಪರೀಕ್ಷೆಯ ಜತೆಗೆ SARS-CoV-2 ಪರೀಕ್ಷೆಗೆ ಒಳಗಾಗಬೇಕು. ಆದಾಗ್ಯೂ ಈ ಪರೀಕ್ಷೆಯು ಪ್ರಸೂತಿ ಹೊರರೋಗಿ ವಿಭಾಗ, ವಾರ್ಡ್‌ ಅಥವಾ ಪ್ರಸೂತಿ ಕೋಣೆಯಲ್ಲಿ ಸಂಭವಿಸಬಾರದು.
SARS-CoV-2 ಸಕಾರಾತ್ಮಕ ಪರೀಕ್ಷೆಯು ಸಾಮಾನ್ಯವಾಗಿ ಕೋವಿಡ್‌-19 ರೋಗವನ್ನು ಖಚಿತಪಡಿಸುತ್ತದೆ. ಕೆಲವೊಮ್ಮೆ ತಪ್ಪು ಋಣಾತ್ಮಕ ಪರೀಕ್ಷೆಗಳನ್ನು ದಾಖಲಿಸಲಾಗುತ್ತದೆ ಎಂದೂ ಗಮನಿಸಬೇಕು, ಹಾಗಾಗಿ ಆರಂಭಿಕ ಪರೀಕ್ಷೆಯು ತಪ್ಪು ಋಣಾತ್ಮಕವಾಗಿ, ಇನ್ನೂ ಅನುಮಾನಗಳು ಉಳಿದಿದ್ದರೆ ಪರೀಕ್ಷೆಯನ್ನು ಪುನರಾವರ್ತಿಸಬೇಕು.
ಶ್ವಾಸಕೋಶದ ತೊಡಕುಗಳ ಆರಂಭಿಕ ಮೌಲ್ಯಮಾಪನಕ್ಕೆ ಶ್ವಾಸಕೋಶದ ಒಂದು ಎಕ್ಸರೇ / ಕಂಪ್ಯೂಟರೀಕೃತ ಟೊಮೊಗ್ರಫಿ (ಸಿಟಿ ಸ್ಕ್ಯಾನ್‌) /ಅಲ್ಟ್ರಾಸೌಂಡ್‌ ಸಾಕಾಗುತ್ತದೆ ಮತ್ತು ಸುರಕ್ಷಿತವಾಗಿರುತ್ತದೆ.

ಆ್ಯಂಟಿವೈರಲ್‌ ಔಷಧಗಳು
ಕೋವಿಡ್‌-19ಗಾಗಿ ಆಂಟಿವೈರಲ್‌ ಔಷಧಗಳ ಬಳಕೆ ಇನ್ನೂ ತನಿಖೆಯಲ್ಲಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್‌ ಮತ್ತು ಕ್ಲೋರೊಕ್ವಿನ್‌ ಎರಡೂ SARS-CoV-2 ಅನ್ನು ಪ್ರತಿಬಂಧಿಸುತ್ತದೆ ಎಂದು ವರದಿಯಾಗಿದೆ. ಆದರೆ ಕೋವಿಡ್‌ -19 ಚಿಕಿತ್ಸೆಯಲ್ಲಿ ಇದರ ಪಾತ್ರವು (ಅಜಿಥ್ರೊಮೈಸಿನ್‌ ಜತೆಗೆ ಯಾ ಅಜಿಥ್ರೊಮೈಸಿನ್‌ ಇಲ್ಲದೆ) ಇನ್ನೂ ತನಿಖಾ ಹಂತದಲ್ಲಿದೆ. ಆರಂಭಿಕ ಪ್ರಯೋಗಗಳ ವರದಿಗಳು ಸಮ್ಮಿಶ್ರವಾಗಿವೆ ಮತ್ತು ಸ್ಪಷ್ಟ ಪ್ರಯೋಜನವನ್ನು ಸೂಚಿಸುವುದಿಲ್ಲ.

ಗರ್ಭಾವಸ್ಥೆಯ ಎಚ್‌ಐವಿ ಸೋಂಕು ಚಿಕಿತ್ಸೆಗೆ ಪ್ರಾಥಮಿಕವಾಗಿ ಬಳಸಲಾಗುವ ಲೋಪಿನವೀರ್‌-ರಿಟೋನವಿರ್‌ಮಾತ್ರೆಗಳನ್ನೂ ಅಧ್ಯಯನಗಳಲ್ಲಿ ಬಳಸಲಾಗಿದೆ.

ಹೆರಿಗೆ ಯಾವಾಗ ಮಾಡಿಸಬೇಕು?
ಸೌಮ್ಯ ಪ್ರಕರಣಗಳು: ಗರ್ಭಾವಸ್ಥೆಯು ಅವಧಿಪೂರ್ವ ವಾಗಿದ್ದರೆ ಮತ್ತು ತ್ವರಿತ ಹೆರಿಗೆಗೆ ವೈದ್ಯಕೀಯ/ ಪ್ರಸೂತಿ ಸೂಚನೆಗಳನ್ನು ಹೊಂದಿಲ್ಲದಿದ್ದರೆ ತುರ್ತು ಹೆರಿಗೆಯನ್ನು ಸೂಚಿಸಲಾಗುವುದಿಲ್ಲ. ನಕಾರಾತ್ಮಕ ಪರೀಕ್ಷಾ ಫಲಿತಾಂಶ ಅಥವಾ ಪ್ರತ್ಯೇಕತೆಯ ಸ್ಥಿತಿಯನ್ನು ನೋಡಿದ ಅನಂತರ ಇದನ್ನು ಪರಿಗಣಿಸಬಹುದು. ಇದು ನವಜಾತ ಶಿಶುವಿಗೆ ಪ್ರಸವಪೂರ್ವ ಪ್ರಸರಣದ ಅಪಾಯವನ್ನು ಕಡಿಮೆ ಮಾಡುತ್ತದೆ.
ನ್ಯುಮೋನಿಯಾದ ತೀವ್ರತರ ಪ್ರಕರಣಗಳು: ಗರ್ಭಿಣಿಯು 32 – 34 ವಾರಗಳನ್ನು ದಾಟಿದ್ದರೆ ತತ್‌ಕ್ಷಣವೇ ಹೆರಿಗೆ ಮಾಡಬಹುದು. ಇದರಿಂದ ಶ್ವಾಸಕೋಶದ ಪರಿಸ್ಥಿತಿ ಹದಗೆಡುವ ಮೊದಲು ಮತ್ತು ಆಮ್ಲ ಜನಕದ ಕೊರತೆಯಿಂದ ಶಿಶುವಿಗೆ ಉಂಟಾಗುವ ತೊಂದರೆ ಮೊದಲು ಹೆರಿಗೆ ಮಾಡಿಸಿ ದಂತಾಗುತ್ತದೆ.

ಶ್ವಾಸನಾಳಕ್ಕೆ ಕೊಳವೆ ಅಳವಡಿಸಿ ರುವ ಮತ್ತು ಗಂಭೀರ‌ ಅನಾರೋಗ್ಯ ಇರುವ ಪ್ರಕರಣಗಳು: ಗರ್ಭಿಣಿ 32 – 34 ವಾರಗಳನ್ನು ದಾಟಿದ್ದರೆ ಮತ್ತು ಸ್ಥಿರವಾಗಿದ್ದರೆ ತತ್‌ಕ್ಷಣವೇ ಹೆರಿಗೆ ಮಾಡಿಸಬಹುದು. ಇದು ತಾಯಿಯ ಸ್ಥಿತಿಯನ್ನು ಉಲ್ಬಣಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದಿರಬೇಕು ಮತ್ತು ಅದರ ಚಿಕಿತ್ಸೆಗೆ ಸನ್ನದ್ಧವಾಗಿರ ಬೇಕು. ಶಿಶು 32 ವಾರಗಳಿಗಿಂತ ಸಣ್ಣ ದಿದ್ದರೆ, ತಾಯಿಯ ಪರಿಸ್ಥಿತಿ ಸ್ಥಿರ ವಾಗುವ ಯಾ ಸುಧಾರಿಸುವವರೆಗೂ ಶಿಶುವಿನ ಯೋಗಕ್ಷೇಮ ಪರೀಕ್ಷೆ ಗಳೊಂದಿಗೆ ತಾಯಿಗೆ ನೆರವು ಮುಂದು ವರಿಸಲು ಸೂಚಿಸಲಾಗುತ್ತದೆ.

ಹೆರಿಗೆ ಹೇಗೆ ಮಾಡಿಸಬೇಕು?
ಗರ್ಭಿಣಿಗೆ ಕೋವಿಡ್‌-19 ಇದ್ದ ಮಾತ್ರಕ್ಕೆ ಹೆರಿಗೆಯ ಮಾರ್ಗವನ್ನು ಬದಲಾಯಿಸುವ ಆವಶ್ಯಕತೆ ಇಲ್ಲ. ಸಿಸೇರಿಯನ್‌ ಹೆರಿಗೆಯನ್ನು ಪ್ರಮಾಣಿತ ಪ್ರಸೂತಿ ಸೂಚನೆಗಳಿಗಾಗಿ ಮಾತ್ರ ನಡೆಸಲಾಗುತ್ತದೆ.

ಕೋವಿಡ್‌-19 ಲಕ್ಷಣರಹಿತ ಮಹಿಳೆಯರಲ್ಲಿ ನಿಯೋಜಿತ ಹೆರಿಗೆ ಮತ್ತು ಯೋಜಿತ ಶಸ್ತ್ರಚಿಕಿತ್ಸಾ ಹೆರಿಗೆಗಳನ್ನು ಮುಂದೂಡಬಾರದು ಅಥವಾ ಮರು ನಿಗದಿಪಡಿಸಬಾರದು.

ಗರ್ಭಕಂಠದ ಪಕ್ವಗೊಳಿಸುವಿಕೆ / ಪ್ರಚೋದನೆಗಾಗಿ, 2 ವಿಧಾನ ಬಳಸಬೇಕು (ಉದಾ, ಯಾಂತ್ರಿಕ ಮತ್ತು ಮಿಸೊøಸ್ಟಾಲ್‌). ಒಂದು ಸಾಧನವನ್ನು ಮಾತ್ರ ಬಳಸುವುದ ರೊಂದಿಗೆ ಹೋಲಿಸಿದರೆ, ಪ್ರಚೋದನೆ ಯಿಂದ ಹೆರಿಗೆಯ ಸಮಯವನ್ನು ಕಡಿಮೆ ಮಾಡಬಹುದಾಗಿದೆ.
ಯೋನಿ ಸ್ರಾವ ಅಥವಾ ಆಮ್ನಿಯೋಟಿಕ್‌ ದ್ರವದಲ್ಲಿ ಇಟV 2 ಪತ್ತೆಯಾಗಿಲ್ಲ, ಆದ್ದರಿಂದ ಪೊರೆಗಳ ಛೇದ ಮಾಡಿ ನೀರು ಬಿಡಿಸುವ ವಿಧಾನವನ್ನೂ ಬಳಸಬಹುದಾಗಿದೆ.

ಬೆನ್ನು ಅರಿವಳಿಕೆ ಉತ್ತಮ. ಸಾಮಾನ್ಯ ಅರಿವಳಿಕೆ ಏರೋಸೊ ಲೈಸಿಂಗ್‌ ವಿಧಾನವೆಂದು ಪರಿಗಣಿಸ ಲಾಗುತ್ತದೆ. ಆದ್ದರಿಂದ ಅದನ್ನು ನೀಡಿ ಮಾಡುವ ಸಿಸೇರಿಯನ್‌ ಹೆರಿಗೆಯಲ್ಲಿ ತೊಡಗಿರುವ ಎಲ್ಲರೂ ವಿಶೇಷ ಪಿಪಿಇ ಧರಿಸಬೇಕು.

ಗರ್ಭಾವಸ್ಥೆಯಲ್ಲಿ ಕೋವಿಡ್‌ 19 ಸೋಂಕಿನ ಲಕ್ಷಣಗಳು
ಸೋಂಕಿನ ಲಕ್ಷಣಗಳು ಗರ್ಭಿಣಿಯಲ್ಲದ ಸಾಮಾನ್ಯ ಮಹಿಳೆಯರಲ್ಲಿ ಇರುವಂತೆಯೇ ಆಗಿದೆ, ಅವುಗಳೆಂದರೆ:
– ಜ್ವರ ಮತ್ತು / ಅಥವಾ ಹೊಸ ಕೆಮ್ಮು
– ಉಸಿರಾಟದ ತೊಂದರೆ
– ಗಂಟಲು ಕೆರೆತ
– ಸ್ನಾಯು ನೋವು
– ರೈನೋರಿಯಾ / ಮೂಗು ಕಟ್ಟುವುದು
– ವಾಸನೆ ಮತ್ತು / ಅಥವಾ ರುಚಿಯಲ್ಲಿ ಅಸಹಜತೆಗಳು
– ಹೆಚ್ಚಿನ ತೊಡಕುಗಳೆಂದರೆ, ತೀವ್ರವಾದ ಉಸಿರಾಟದ ತೊಂದರೆ, ಹೃದಯದ ತೀವ್ರ ಗಾಯ, ಎದೆಬಡಿತದ ವ್ಯತ್ಯಾಸ ಮತ್ತು ಆಘಾತ.

ಕೋವಿಡ್‌ ಅಲ್ಲದ ಗರ್ಭಿಣಿ ಮಹಿಳೆಯರಿಗೆ ಪ್ರಸವಪೂರ್ವ ಆರೈಕೆಯ ಕಾರ್ಯ ಸೂಚಿಗಳು
ಸಾಮಾನ್ಯವಾಗಿ ಕೋವಿಡ್‌ ಅಲ್ಲದ ಗರ್ಭಿಣಿ ಮಹಿಳೆಯರು ಆಸ್ಪತ್ರೆ ಭೇಟಿ ಗಳನ್ನು ಕಡಿಮೆ ಮಾಡುವುದು ಉತ್ತಮ. ಕೆಳಗಿನ ಕೆಲವು ಕಾರ್ಯ ಸೂಚಿ ಗಳನ್ನು ಅನುಸರಿವುದು ಒಳ್ಳೆಯದು:
– ಟೆಲಿಮೆಡಿಸಿನ್‌
– ವ್ಯಕ್ತಿಗತ ಭೇಟಿಗಳ ಅಂತರವನ್ನು ಕಡಿಮೆ ಮಾಡುವುದು
– ಗರ್ಭಿಣಿಯರು ಇತರರ ಸಂಪರ್ಕಕ್ಕೆ ಬರದಿರುವುದು ಮತ್ತು ಜತೆಗಾರರನ್ನು ನಿರ್ಬಂಧಿಸುವುದು
– ಕೆಲವು ಪರೀಕ್ಷೆಗಳನ್ನು ಒಟ್ಟಾಗಿ ಮಾಡಿಸುವುದು
– ಶಿಶುವಿನ ಊನದ ಮತ್ತು ಬೆಳವಣಿಗೆಯ ಸ್ಕ್ಯಾನ್‌ಗಳನ್ನು ಮಾತ್ರ ನಿರ್ವಹಿಸುವುದು
– ಡೌನ್‌ ಸಿಂಡ್ರೋಮ್‌ಗಾಗಿ ಸೆಲ್‌-ಫ್ರೀ ಡಿಎನ್‌ಎ ಸ್ಕ್ರೀನಿಂಗ್‌ / ಕ್ವಾಡ್ರುಪಲ್‌ ಪರೀಕ್ಷೆ
– ಎನ್‌.ಎಸ್‌.ಟಿ. ಮತ್ತು ಬಿ.ಪಿ.ಪಿ.ಯಂತಹ ಶಿಶುವಿನ ಯೋಗಕ್ಷೇಮ ಪರೀಕ್ಷೆಗಳ ಬಳಕೆಯ ಸಮಯ ಮತ್ತು ಆವರ್ತನವನ್ನು ಕಡಿಮೆ ಮಾಡುವುದು
ಈ ಸಮಯದಲ್ಲಿ ಗರ್ಭಿಣಿಯರ ಕೋವಿಡ್‌ – 19 ಬೀರುವ ಮಾನಸಿಕ ಪ್ರಭಾವವನ್ನು ಕೂಡ ಗುರುತಿಸಬೇಕು ಮತ್ತು ಬೆಂಬಲವನ್ನು ನೀಡಬೇಕು. ಸರಿಸುಮಾರು ಮೂರನೇ ಒಂದು ಭಾಗದಷ್ಟು ಗರ್ಭಿಣಿಯರು ಮಧ್ಯಮದಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆಂದು ವರದಿ ಮಾಡಲಾಗಿದೆ.

ಕೋವಿಡ್‌ -19 ಗರ್ಭಿಣಿ ಮಹಿಳೆಯರಿಗೆ ಯಾವ ಔಷಧಗಳನ್ನು ಅನುಮತಿಸಲಾಗಿದೆ?
– ಕಬ್ಬಿಣದ, ಫೋಲಿಕ್‌ ಆಮ್ಲ ಮತ್ತು ಕ್ಯಾಲ್ಸಿಯಂನಂತಹ ಎಲ್ಲಾ ಪೂರಕಗಳನ್ನು ಮುಂದುವರಿಸಬೇಕು.
– ಟೆಟನಸ್‌ ಟಾಕ್ಸಾಯx… (ಟಿಟಿ) ಚುಚ್ಚುಮದ್ದನ್ನು ನೀಡಬಹುದು.
– ಭ್ರೂಣದ ಶ್ವಾಸಕೋಶದ ಪರಿಪಕ್ವತೆಗೆ ಸ್ಟೀರಾಯx… ಚುಚ್ಚುಮದ್ದನ್ನು “ಎಸಿಒಜಿ’ ಮಾರ್ಗಸೂಚಿಗಳ ಪ್ರಕಾರ ನೀಡಬಹುದು. ಏಕೆಂದರೆ ಇದರ ಪ್ರಯೋಜನಗಳು ಸೌಮ್ಯ ಪ್ರಕರಣಗಳಲ್ಲಿನ ಅಪಾಯಗಳನ್ನು ಸ್ಪಷ್ಟವಾಗಿ ಮೀರಿಸುತ್ತವೆ. ಆದರೆ ರೋಗಿಯು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ, ಸಾಮಾನ್ಯ ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.
– ಪ್ರಿಕ್ಲಾಂಪ್ಸಿಯಾ ತಡೆಗಟ್ಟುವಿಕೆಗಾಗಿ ನೀಡುವ ಕಡಿಮೆ ಪ್ರಮಾಣದ ಆಸ್ಪಿರಿನ್‌ ಮತ್ತು ಅವಧಿಪೂರ್ವ ಪ್ರಸವದ ನೋವನ್ನು ನಿಲ್ಲಿಸಲು ನೀಡುವ ಟೋಕೋಲಿಟಿಕÕ… ಔಷಧಗಳನ್ನು ಕೊಡುವ ಬಗ್ಗೆ ನಿರ್ಧಾರವನ್ನು ಆಯಾಯ ಪ್ರಕರಣದ ಆಧಾರದ ಮೇಲೆ ತೆಗೆದುಕೊಳ್ಳಬಹುದು.
– ಉಸಿರಾಟದ ತೊಂದರೆ ಹೊಂದಿರುವ ಮಹಿಳೆಯರಲ್ಲಿ, ತಾಯಿಯ ಸೆಳವು ರೋಗನಿರೋಧಕತೆ ಮತ್ತು / ಅಥವಾ ಶಿಶುವಿನ ನ್ಯೂರೋಪ್ರೊಟೆಕ್ಷನ್‌ (ನರರಕ್ಷಣೆ) ಗಾಗಿ ಮೆಗ್ನಿàಸಿಯಮ್‌ ಸಲ್ಫೆàಟ್‌ ಅನ್ನು ಆಯಾಯ ಪ್ರಕರಣದ ಆಧಾರದ ಮೇಲೆ ನಿರ್ಧರಿಸಬೇಕು. ಏಕೆಂದರೆ ಔಷಧವು ಉಸಿರಾಟವನ್ನು ಮತ್ತಷ್ಟು ಕುಗ್ಗಿಸಬಹುದು.
– ಗರ್ಭಿಣಿಯಲ್ಲದ ಸಾಮಾನ್ಯ ಮಹಿಳೆಯರು ಐಬುಪ್ರೊಫೇನ್‌ ಮಾತ್ರೆಯನ್ನು ಕೋವಿಡ್‌ – 19ರ ಆರಂಭದಲ್ಲಿ ತೆಗೆದುಕೊಂಡು ಅದರಿಂದ ತೀವ್ರತರ ತೊಂದರೆಯನ್ನು ಅನುಭವಿಸಿದ್ದಾರೆ. ಆದ್ದರಿಂದ ಕೋವಿಡ್‌ -19 ಹೊಂದಿರುವ ಗರ್ಭಿಣಿ ಮಹಿಳೆಯರಿಗೆ ಇದನ್ನು ಶಿಫಾರಸು ಮಾಡುವುದಿಲ್ಲ.

ಡಾ| ಮುರಲೀಧರ್‌ ವಿ. ಪೈ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ
ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮಣಿಪಾಲ

ಟಾಪ್ ನ್ಯೂಸ್

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.