Udayavni Special

ಉಡುಪಿ: ಶ್ರೀಕೃಷ್ಣ ದರ್ಶನ ಸದ್ಯಕ್ಕಿಲ್ಲ

Team Udayavani, May 29, 2020, 6:05 AM IST

ಉಡುಪಿ: ಶ್ರೀಕೃಷ್ಣ ದರ್ಶನ ಸದ್ಯಕ್ಕಿಲ್ಲ

ಸಾಂದರ್ಭಿಕ ಚಿತ್ರ.

ಉಡುಪಿ: ರಾಜ್ಯದ ವಿವಿಧ ಮುಜರಾಯಿ ದೇವಸ್ಥಾನಗಳಲ್ಲಿ ಜೂ. 1ರಿಂದ ಭಕ್ತರಿಗೆ ಪ್ರವೇಶಾವಕಾಶ ಕೊಡಲು ರಾಜ್ಯ ಸರಕಾರ ನಿರ್ಧರಿಸಿದೆಯಾದರೂ ಉಡುಪಿ ಶ್ರೀಕೃಷ್ಣ ಮಠದಲ್ಲಿ 10-15 ದಿನಗಳ ಬಳಿಕವೇ ಅವಕಾಶ ಕೊಡಲು ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನಿರ್ಧರಿಸಿದ್ದಾರೆ.

ಪ್ರಸ್ತುತ ಅಗತ್ಯದ ಸೇವಾ ಪರಿಚಾರಕರು ಮಾತ್ರ ಮಠದೊಳಗಿದ್ದು ಪೂಜಾ ಕೈಂಕರ್ಯ ನಡೆಸುತ್ತಿದ್ದಾರೆ. ಅವರಾರೂ ಹೊರಗೆ ಹೋಗುತ್ತಿಲ್ಲ, ಹೊರಗಿದ್ದವರನ್ನು ಒಳಗೆ ಬಿಡುತ್ತಿಲ್ಲ.

ಶ್ರೀಕೃಷ್ಣ ಮಠದಲ್ಲಿ ಅಷ್ಟಮಠದ ಯತಿಗಳೇ ಪೂಜೆ ನಡೆಸುತ್ತಿರುವುದರಿಂದ ಪೂಜಾ ಕೈಂಕರ್ಯಗಳಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಜೂನ್‌ ಮಧ್ಯಾವಧಿಯ ಬಳಿಕ ಪರಿಸ್ಥಿತಿ ಯನ್ನು ಗಮನಿಸಿ, ಇತರ ಮಠಾ ಧೀಶರ ಸಲಹೆ ಸೂಚನೆ ಪ್ರಕಾರ ಭಕ್ತರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಶ್ರೀ ಈಶಪ್ರಿಯತೀರ್ಥರು ತಿಳಿಸಿದ್ದಾರೆ.

ಹಿಂಭಾಗದಿಂದ ಪ್ರವೇಶ?
ಶ್ರೀಕೃಷ್ಣ ಮಠದಲ್ಲಿ ಭಕ್ತರಿಗೆ ಪ್ರವೇಶಾ ವಕಾಶ ಕಲ್ಪಿಸುವಾಗ ಇದುವರೆಗೆ ಇದ್ದಂತೆ ರಾಜಾಂಗಣದ ಪ್ರದೇಶದಿಂದ ಭೋಜನಶಾಲೆಯ ಉಪ್ಪರಿಗೆ ಮೂಲಕ ಶ್ರೀಕೃಷ್ಣ ದರ್ಶನಕ್ಕೆ ಅವಕಾಶ ನೀಡಲು ಚಿಂತನೆ ನಡೆಸಲಾಗುತ್ತಿದೆ. ಸಾಮಾಜಿಕ ಅಂತರವನ್ನು ಪರಿಣಾಮಕಾರಿಯಾಗಿ ಕಾಪಾಡಲು ಇದರಿಂದ ಸಾಧ್ಯವಾ ಗುತ್ತದೆ ಎಂದು ಶ್ರೀಕೃಷ್ಣ ಸೇವಾ ಬಳಗದ ಗೋವಿಂದರಾಜ್‌ ತಿಳಿಸಿದ್ದಾರೆ.

ಆನ್‌ಲೈನ್‌ ಪೂಜೆ, ಪ್ರವಚನ
ಶ್ರೀಕೃಷ್ಣ ಮಠದಲ್ಲಿ ಪೂಜೆ ಪುನಸ್ಕಾರಗಳು ಮತ್ತು ಪ್ರವಚನಗಳು ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಪ್ರವಚನಗಳನ್ನು, ಬೆಳಗ್ಗೆ, ಮಧ್ಯಾಹ್ನದ ಪೂಜೆಗಳನ್ನೂ ಆನ್‌ಲೈನ್‌ನಲ್ಲಿ ಬಿತ್ತರಿಸಲಾಗುತ್ತಿದೆ. ರಾಜಾಂಗಣದಲ್ಲಿ ನಡೆಯುತ್ತಿದ್ದ ವಿದ್ವಾಂಸರ ಪ್ರವಚನಗಳೂ ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ಪ್ರವಚನ, ಪೂಜೆಗಳನ್ನು ಅಪಾರ ಸಂಖ್ಯೆಯಲ್ಲಿ ವೀಕ್ಷಿಸುತ್ತಿದ್ದಾರೆ. ಕೆಲವರು ವರ್ಷಂಪ್ರತಿ ಸಲ್ಲಿಸುವ ಸೇವೆಯನ್ನು ಆನ್‌ಲೈನ್‌ ಮೂಲಕ ಸಲ್ಲಿಸುತ್ತಿದ್ದಾರೆ.

ಕನಕನ ಕಿಂಡಿಯಲ್ಲಿ ಕೃಷ್ಣದರ್ಶನ ಅಬಾಧಿತ
ಸುಮಾರು ಎರಡು ತಿಂಗಳಿಂದ ಶ್ರೀಕೃಷ್ಣ ಮಠದ ಪ್ರವೇಶ ಭಕ್ತರಿಗೆ ಇಲ್ಲವಾದರೂ ಕನಕದಾಸರು ಹಾಕಿಕೊಟ್ಟ ಸಂಪ್ರದಾಯದಂತೆ ದಿನದ 24 ಗಂಟೆಯೂ ಕನಕನ ಕಿಂಡಿ ಮೂಲಕ ದೇವರ ದರ್ಶನ ನಡೆಯುತ್ತಿದೆ. ಸ್ಥಳೀಯರು ಕನಕನ ಕಿಂಡಿ ಮೂಲಕ ದರ್ಶನ ಪಡೆಯುತ್ತಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಮನಗರದ ಕೋವಿಡ್‍ ಆಸ್ಪತ್ರೆಗೆ ಸಂಸದ ಡಿ.ಕೆ.ಸುರೇಶ್‍ಭೇಟಿ

ರಾಮನಗರದ ಕೋವಿಡ್‍ ಆಸ್ಪತ್ರೆಗೆ ಸಂಸದ ಡಿ.ಕೆ.ಸುರೇಶ್‍ಭೇಟಿ

28 ವರ್ಷದ ಯುವ ನಟಿ, ರೂಪದರ್ಶಿ ದಿವ್ಯಾ ಚೌಕ್ಸಿ ವಿಧಿವಶ; ಸಾಯೋ ಮುನ್ನ ಬರೆದ ಪೋಸ್ಟ್ ವೈರಲ್

28 ವರ್ಷದ ಯುವ ನಟಿ, ರೂಪದರ್ಶಿ ದಿವ್ಯಾ ಚೌಕ್ಸಿ ವಿಧಿವಶ; ಸಾಯೋ ಮುನ್ನ ಬರೆದ ಪೋಸ್ಟ್ ವೈರಲ್

ಕುಂದಾಪುರದಲ್ಲಿ 163 ಬಾರಿ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಕೇಸು ದಾಖಲು

ಕುಂದಾಪುರದಲ್ಲಿ 163 ಬಾರಿ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಕೇಸು ದಾಖಲು

ಕೋವಿಡ್ ಸೋಂಕಿಗೆ ಬಂಟ್ವಾಳದ 70 ವರ್ಷದ ವೃದ ಸಾವು!

ಬಂಟ್ವಾಳ: ಕೋವಿಡ್ ಸೋಂಕಿಗೆ 70 ವರ್ಷದ ವೃದ ಸಾವು!

ಕುಂದಾಪುರ: ಮೂವರು ಪೊಲೀಸರಿಗೆ ಕೋವಿಡ್-19 ಸೋಂಕು ದೃಢ

ಕುಂದಾಪುರ: ಇಬ್ಬರು ಪೊಲೀಸರು ಓರ್ವ ಚಾಲಕನಿಗೆ ಕೋವಿಡ್-19 ಸೋಂಕು ದೃಢ

ಕೋವಿಡ್ ಚಿಕಿತ್ಸೆಗೆ ಹಾಸಿಗೆ ನೀಡದ ಖಾಸಗಿ ಆಸ್ಪತ್ರೆ ಪರವಾನಗಿ ರದ್ದು: ಸಿಎಂಗೆ ಡಿಸಿಎಂ ಸಲಹೆ

ಕೋವಿಡ್ ಚಿಕಿತ್ಸೆಗೆ ಹಾಸಿಗೆ ನೀಡದ ಖಾಸಗಿ ಆಸ್ಪತ್ರೆ ಪರವಾನಗಿ ರದ್ದು: ಸಿಎಂಗೆ ಡಿಸಿಎಂ ಸಲಹೆ

ದೇಶದಲ್ಲಿ ಗೂಗಲ್ ನಿಂದ 75 ಸಾವಿರ ಕೋಟಿ ರೂ. ಹೂಡಿಕೆ; ಸುಂದರ್ ಪಿಚೈ ಬಿಚ್ಚಿಟ್ಟ ಡಿಜಿಟಲ್ ಕನಸು

ದೇಶದಲ್ಲಿ ಗೂಗಲ್ ನಿಂದ 75 ಸಾವಿರ ಕೋಟಿ ರೂ. ಹೂಡಿಕೆ;ಸುಂದರ್ ಪಿಚೈ ಬಿಚ್ಚಿಟ್ಟ ಡಿಜಿಟಲ್ ಕನಸು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುಂದಾಪುರದಲ್ಲಿ 163 ಬಾರಿ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಕೇಸು ದಾಖಲು

ಕುಂದಾಪುರದಲ್ಲಿ 163 ಬಾರಿ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಕೇಸು ದಾಖಲು

ಕುಂದಾಪುರ: ಮೂವರು ಪೊಲೀಸರಿಗೆ ಕೋವಿಡ್-19 ಸೋಂಕು ದೃಢ

ಕುಂದಾಪುರ: ಇಬ್ಬರು ಪೊಲೀಸರು ಓರ್ವ ಚಾಲಕನಿಗೆ ಕೋವಿಡ್-19 ಸೋಂಕು ದೃಢ

ಕೋವಿಡ್ ಸೋಂಕಿಗೆ 70 ವರ್ಷದ ವೃದ್ಧ ಬಲಿ! ಉಡುಪಿ ಜಿಲ್ಲೆಯಲ್ಲಿ ನಾಲ್ಕನೇ ಬಲಿ

ಕೋವಿಡ್ ಸೋಂಕಿಗೆ 70 ವರ್ಷದ ವೃದ್ಧ ಸಾವು! ಉಡುಪಿ ಜಿಲ್ಲೆಯಲ್ಲಿ ನಾಲ್ಕನೇ ಬಲಿ

ಉಡುಪಿ ಜಿಲ್ಲೆಯಲ್ಲಿ ಶೇ.7 ಮಂದಿಗಷ್ಟೇ ಸೋಂಕು ಶೇ.15 ಮಂದಿಗೆ ಲಕ್ಷಣ ; ಮರಣ ಪ್ರಮಾಣ ಶೇ. 0.18

ಉಡುಪಿ ಜಿಲ್ಲೆಯಲ್ಲಿ ಶೇ.7 ಮಂದಿಗಷ್ಟೇ ಸೋಂಕು ಶೇ.15 ಮಂದಿಗೆ ಲಕ್ಷಣ ; ಮರಣ ಪ್ರಮಾಣ ಶೇ. 0.18

ಉಡುಪಿ ಜಿಲ್ಲೆ: 41 ಪಾಸಿಟಿವ್‌ ಪ್ರಕರಣ ; ದಾವಣಗೆರೆ ವ್ಯಕ್ತಿ ಸಾವು

ಉಡುಪಿ ಜಿಲ್ಲೆ: 41 ಪಾಸಿಟಿವ್‌ ಪ್ರಕರಣ ; ದಾವಣಗೆರೆ ವ್ಯಕ್ತಿ ಸಾವು

MUST WATCH

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

udayavani youtube

How TV & Mobile Screens Damage Our Eyes ( And HOW TO BE SAFE ) | Udayavani

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

udayavani youtube

Covid Bus Basin : A new invention by students of SMVIT College Bantakal

ಹೊಸ ಸೇರ್ಪಡೆ

ಅಂಬೇಡ್ಕರ್ ಪ್ರತಿಮೆ ಎತ್ತರ ಹೆಚ್ಚಿಸಲು ರಾಜ್ಯ ಯೋಜನೆ

ಅಂಬೇಡ್ಕರ್ ಪ್ರತಿಮೆ ಎತ್ತರ ಹೆಚ್ಚಿಸಲು ರಾಜ್ಯ ಯೋಜನೆ

ರಾಮನಗರದ ಕೋವಿಡ್‍ ಆಸ್ಪತ್ರೆಗೆ ಸಂಸದ ಡಿ.ಕೆ.ಸುರೇಶ್‍ಭೇಟಿ

ರಾಮನಗರದ ಕೋವಿಡ್‍ ಆಸ್ಪತ್ರೆಗೆ ಸಂಸದ ಡಿ.ಕೆ.ಸುರೇಶ್‍ಭೇಟಿ

28 ವರ್ಷದ ಯುವ ನಟಿ, ರೂಪದರ್ಶಿ ದಿವ್ಯಾ ಚೌಕ್ಸಿ ವಿಧಿವಶ; ಸಾಯೋ ಮುನ್ನ ಬರೆದ ಪೋಸ್ಟ್ ವೈರಲ್

28 ವರ್ಷದ ಯುವ ನಟಿ, ರೂಪದರ್ಶಿ ದಿವ್ಯಾ ಚೌಕ್ಸಿ ವಿಧಿವಶ; ಸಾಯೋ ಮುನ್ನ ಬರೆದ ಪೋಸ್ಟ್ ವೈರಲ್

ಕುಂದಾಪುರದಲ್ಲಿ 163 ಬಾರಿ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಕೇಸು ದಾಖಲು

ಕುಂದಾಪುರದಲ್ಲಿ 163 ಬಾರಿ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಕೇಸು ದಾಖಲು

ಮೇಡ್‌ ಇನ್‌ ಇಂಡಿಯಾ ಕೂ

ಮೇಡ್‌ ಇನ್‌ ಇಂಡಿಯಾ ಕೂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.