ಚದುರಂಗ ಅವರ ಮಾನವೀಯ ಸಂಬಂಧದ “ವೈಶಾಖ’
Team Udayavani, Nov 24, 2020, 5:50 AM IST
ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.
ಕನ್ನಡ ಸಾಹಿತ್ಯ ಲೋಕದ ಕಾದಂಬರಿ ಕ್ಷೇತ್ರಕ್ಕೆ ಚದುರಂಗ ಅವರ “ವೈಶಾಖ’ ಒಂದು ಮಹ ತ್ವದ ಕೊಡುಗೆ. ಮಹಿಳೆ ಮತ್ತು ಶೋಷಿತರ ಬಗ್ಗೆ ಅನುಕಂಪವಿರುವ ಈ ಕೃತಿಯಲ್ಲಿ ಪಾತ್ರಗಳ ವೈವಿಧ್ಯ ಗಮನ ಸೆಳೆಯುತ್ತದೆ.
ಬದುಕಿನ ನೋವು ನಲಿವುಗಳು, ಎದುರಾಗುವ ಸಮಸ್ಯೆಗಳು ಮುಂತಾದ ಹಲವು ವಿಷಯಗಳು ಕಥೆಯ ರೂಪದಲ್ಲಿ ಕೃತಿಯಲ್ಲಿ ಮೂಡಿಬಂದಿದೆ.
ಚಿಕ್ಕ ವಯಸ್ಸಿನಲ್ಲೇ ಗಂಡ ನನ್ನು ಕಳೆದುಕೊಂಡ ರುಕ್ಮಿಣಿಗೆ ಕೇಶಮುಂಡನ ಮಾಡಿಸಲು ಸುಶೀಲತ್ತೆ ಕಾಟ ಕೊಡುವುದು, ಸೊಸೆ ಬಗ್ಗೆ ಅಪಾರ ಗೌರವವಿದ್ದ ಕೃಷ್ಣಶಾಸ್ತ್ರಿಗಳು ತಂಗಿ ಸುಶೀಲನ ಮಾತಿಗೆ ತದ್ವಿರು ದ್ಧವಾದ ಪ್ರತಿಕ್ರಿಯೆ ನೀಡು ವುದು, ತನ್ನ ಸೊಸೆಯನ್ನು ಸಕೇಶಿಣಿ ಯಾಗಿ ರಿಸಲು ಪ್ರಯತ್ನಿಸುವುದು, ಅದಕ್ಕಾಗಿ ರುಕ್ಮಿಣಿ ಯನ್ನು ತವರಿಗೆ ಕಳಿಸುವುದು ಮುಂತಾದ ದೃಶ್ಯವರ್ಣನೆ ಓದುಗರನ್ನು ಹಿಂದಿನ ಜೀವನಕ್ಕೆ ಕರೆದೊಯ್ಯುತ್ತದೆ.
ಇಷ್ಟಾದರೂ ರುಕ್ಮಿಣಿಗೆ ಕಷ್ಟಗಳು ಮುಗಿ ಯುವುದಿಲ್ಲ. ಅವಳಿಗೆ ರುದ್ರಪಟ್ಟಣದಲ್ಲಿ ತನ್ನ ಅತ್ತಿಗೆಯಿಂದಲೇ ಕಷ್ಟಗಳು ಎದುರಾಗುತ್ತವೆ.
ಮತ್ತೂಂದೆಡೆ ಲಕ್ಕ ಎಂಬಾತನಿಗೆ ಕೃಷ್ಣ ಶಾಸ್ತ್ರಿ ಮತ್ತು ರುಕ್ಮಿಣಿಯ ಬಗ್ಗೆ ಅಪಾರ ಗೌರವ ವಿರುತ್ತದೆ. ಇದೇ ಕಾರಣದಿಂದ ಆತನು ಶಾಸ್ತ್ರಿಗಳ ಮನೆಯಲ್ಲಿ ಏನೇ ಕೆಲಸವಿದ್ದರೂ ಅದನ್ನು ಮಾಡಿಕೊಡಲು ಸಿದ್ಧನಾಗಿದ್ದ. ಕೊನೆ ಯಲ್ಲಿ ಈತನಿಗೆ ಈ ನಿಷ್ಠೆಯೇ ಹೇಗೆ ಮುಳುವಾಗುತ್ತದೆ ಎಂಬುದು ಕೂಡ ಕಥೆಯಿಂದ ಸ್ಪಷ್ಟವಾಗುತ್ತದೆ.
ಕಾದಂಬರಿಯ ಮಧ್ಯಭಾಗದಲ್ಲಿ ತನಗರಿವಿ ಲ್ಲದಂತೆ ಕೃಷ್ಣ ಶಾಸ್ತ್ರಿಗಳು ರುಕ್ಮಿಣಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಾರೆ. ಇದು ಇಬ್ಬರನ್ನೂ ಚಿಂತೆಗೀಡು ಮಾಡುತ್ತದೆ. ಇನ್ನೊಂದೆಡೆ ಯಾವುದೋ ಕಾರಣಕ್ಕೆ ಭೀಮನ ಹಳ್ಳಿಗೆ ಹೋಗುವ ಕಾಡಿನ ಹಾದಿಯಲ್ಲಿರುವ ಲಕ್ಕನ ಮನೆಯ ಮೇಲೆ ರುಕ್ಮಿಣಿಯೇ ಆಕ್ರಮಣ ಮಾಡುತ್ತಾಳೆ. ಅದರಲ್ಲಿ ಆಕೆ ಹೊಂದಿರುವ ರಹಸ್ಯ ಉದ್ದೇಶ ಬೇರೆಯೇ ಇದೆ. ಅದೊಂದು ರೀತಿಯಲ್ಲಿ ಕುತೂಹಲ ವನ್ನೂ ಮೂಡಿಸುತ್ತದೆ.
ಕಾದಂಬರಿಯ ಕೊನೆಯ ಭಾಗದಲ್ಲಿ ರುಕ್ಮಿಣಿ ತಾನು ಗರ್ಭಿಣಿಯಾದ ವಿಷಯ ಲಕ್ಕನ ಬಳಿ ಹೇಳುವ ಪ್ರಸಂಗವಿದೆ. ವಿಷಯ ಇಡೀ ಊರಿಗೆ ಹಬ್ಬುತ್ತದೆ. ಎಲ್ಲರೂ ಲಕ್ಕನೇ ಇದಕ್ಕೆ ಕಾರಣ ಎನ್ನುತ್ತಾರೆ. ಇದರಿಂದ ಲಕ್ಕನು ಹಲವು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ.
ಇತ್ತ ಶಾಸ್ತ್ರಿಗಳಿಗೆ ತನ್ನಿಂದ ಆದ ತಪ್ಪಿಗೆ ಲಕ್ಕ ಮತ್ತು ರುಕ್ಮಿಣಿ ಪಡುವ ಹಿಂಸೆ ನೋವು ತರಿಸುತ್ತದೆ. ತನ್ನ ಮರ್ಯಾದೆಯನ್ನು ಉಳಿ ಸಲು ಅವರಿಬ್ಬರು ಸುಳ್ಳು ಹೇಳಿ ನೋವು ಅನುಭವಿಸು ತ್ತಿ¨ªಾರೆಂದು ನೊಂದು ಕೊಳ್ಳುತ್ತಾರೆ. ಈ ನಡುವೆ ತನ್ನ ಗರ್ಭಕ್ಕೆ ಕಾರಣರಾದವರ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳಲಾಗದೆ ರುಕ್ಮಿಣಿ ಇಕ್ಕಟ್ಟಿನಲ್ಲಿ ಸಿಲುಕುವ ಪರಿಯನ್ನೂ ಕಾದಂಬ ರಿಯಲ್ಲಿ ಮನಮುಟ್ಟುವಂತೆ ವಿವರಿಸಲಾಗಿದೆ.
ರುಕ್ಮಿಣಿಯ ಗರ್ಭದ ವಿಷಯದಲ್ಲಿ ಊರಿನಿಂದ ಲಕ್ಕನನ್ನು ಬಹಿಷ್ಕರಿಸಲಾಗುತ್ತದೆ. ಈ ಸಂದರ್ಭ ತಾಯಿ ಕಲ್ಯಾಣಿ, ತಂಗಿ ಶಿವುನಿಯ ವಾತ್ಸಲ್ಯದ ಚಿತ್ರಣ ಮನಸ್ಪರ್ಶಿ ಯಾಗಿದೆ. ಇಡೀ ಕಾದಂಬರಿಯಲ್ಲಿ ಸಾವು ನೋವುಗಳ ತೊಳಲಾಟದ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಲಾಗಿದೆ.
ಈ ನಡುವೆ ಎಲ್ಲ ಸಮಸ್ಯೆಗಳಿಗೂ ತಾನೇ ಕಾರಣ ಎಂದು ರುಕ್ಮಿಣಿ ಮನೆಬಿಟ್ಟು ಹೋಗು ವುದು, ಬಳಿಕ ಅವಳ ಸಾವಿನ ಸುದ್ದಿ, ಇದರಿಂದ ನೊಂದುಕೊಳ್ಳುವ ಲಕ್ಕ ಮುಂತಾದವೆಲ್ಲ ಓದುಗರನ್ನು ಸೆಳೆದು ನಿಲ್ಲಿಸುತ್ತವೆ.
ಈ ಕೃತಿಯು ಹಲವು ರೀತಿಯ ಮಾನಸಿಕ ಸಂಘರ್ಷಗಳು, ಸಾಮಾಜಿಕ ಮೌಡ್ಯತೆಯ ಪ್ರತಿಬಿಂಬವಾಗಿ ನಮ್ಮ ವಿವೇಕಕ್ಕೆ ಕವಿದಿರುವ ಮಸುಕನ್ನು ದೂರ ಮಾಡಲು ಪೂರಕವಾಗಿದೆ.
– ಪೂರ್ಣಿಮಾ ಬಿ., ಕುಣಿಗಲ್
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ ಕೃಷ್ಣ ಮಠಕ್ಕೆ ಬಾಳೆ ಎಲೆಯನ್ನು ನೀಡುವ ಯುವಕ
ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!
ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ
ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್
ಹೊಸ ಸೇರ್ಪಡೆ
ಪದ್ಮ ಪ್ರಶಸ್ತಿ ಪ್ರಕಟ : ಬಿ.ಎಂ.ಹೆಗ್ಡೆ, ಎಸ್.ಪಿಬಿಗೆ ಪದ್ಮವಿಭೂಷಣ, ಕಂಬಾರರಿಗೆ ಪದ್ಮಭೂಷಣ
ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸಿ, ಯಶಸ್ಸು ಸಾಧಿಸಬೇಕು: ಡಿಸಿಎಂ ಅಶ್ವಥ್ನಾರಾಯಣ
ಹುಣಸೋಡು ಸ್ಫೋಟ ಪ್ರಕರಣ :ಕ್ರಷರ್ ಮಾಲೀಕ ಸೇರಿ ನಾಲ್ವರನ್ನು ಬಂಧಿಸಿದ ಪೊಲೀಸರು
ಮೇಲುಕೋಟೆ ವಜ್ರಾಂಗಿ ಆಭರಣ ಅವ್ಯವಹಾರ ಪ್ರಕರಣ: ಅರ್ಚಕ ನರಸರಾಜಭಟ್ ನೇಮಕಕ್ಕೆ ಹೈಕೋರ್ಟ್ ತಡೆ
145 ದಿನಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ನಟಿ ರಾಗಿಣಿ ಬಿಡುಗಡೆ