‘ಶ್ರೀ ರಾಮಚಂದಿರ – ವೇದಾಂತ ಮಂದಿರ..”
Team Udayavani, Aug 7, 2020, 3:32 PM IST
ಅದ್ವಿತೀಯ, ಅದಮ್ಯ, ಆದಿತ್ಯ ಚೈತನ್ಯ ಶ್ರೀ ರಾಮ,
ಅನನ್ಯ, ಅದ್ಭುತ, ಅಮೋಘ, ಶ್ರೀರಾಮ,
ಅಪ್ರತಿಮ, ಅಜೇಯ, ಅಗಾಧ, ಅಖಂಡ ವಿಶ್ವಾಸ ಶ್ರೀರಾಮ,
ಆದ್ಯಂತ ರಹಿತ, ಆದರಣೀಯ, ಆದಿಕಾವ್ಯ ಮಾಯಣದ ಧ್ರುವ ನಕ್ಷತ್ರ ‘ಶ್ರೀ ರಾಮ,
ಅತ್ಯಮೂಲ್ಯ, ಅನರ್ಘ್ಯ,ಅಪ್ರಮೇಯ ಶ್ರೀ ರಾಮ,
ಅತಿಶಯ, ಅಕ್ಷಯ, ಅಕ್ಷತ ಶ್ರೀ ರಾಮ,
ಅಗಾಧ, ಅಚಿಂತ್ಯ, ಅಸಾಧ್ಯ, ಅಪೂರ್ವ ಶ್ರೀ ರಾಮ,
ಅತಿಮಾನಸ, ಅಗ್ರಸೇನಾಗ್ರಜ, ಅಜರಾಮರ ಶ್ರೀರಾಮ,
ಅನುಪಮ, ಅನಿರ್ವಚನೀಯಾನಂದ, ಅನುಕರ್ಷ, ಶ್ರೀ ರಾಮ,
ಅತ್ಯಂತ, ಅತಿಶಯ, ಅಕ್ಕರೆಯ ಸಕ್ಕರೆ ಕಣ್ಮಣಿ ಶ್ರೀರಾಮ..
ಅಗ್ರಗಣ್ಯ, ಅಗ್ರವೀಳ್ಯ, ಅಗ್ರತಾಂಬೂಲ, ಅಗ್ರಪೀಠಾರ್ಹ,
ಶ್ರೀ ರಾಮ..
ಐತಿಹಾಸಿಕ, ಅಭೂತಪೂರ್ವ, ಅತ್ಯದ್ಭುತ ಕ್ಷಣದ ಅಣು ಅಣುವಿನ ಕಣಕಣದಲ್ಲೂ ಶ್ರೀರಾಮ..ಜಯರಾಮ.. ಜಯಜಯರಾಮ…
– ಸುಮನಾ