CONNECT WITH US  

ಭವಿಷ್ಯ

ಮೇಷ
ಸಾಮಾಜಿಕ ರಂಗದಲ್ಲಿ ನಿಮಗೆ ಯಶಸ್ಸು ತರಲಿದೆ. ಕಾರ್ಮಿಕರಿಗೆ ಸಂತೃಪ್ತಿ ತೋರಿ ಬರಲಿದೆ. ಆರ್ಥಿಕವಾಗಿ ಸಮತೋಲನ ಸಾಧಿಸಿರಿ. ಕಿರು ಸಂಚಾರ ಒದಗಿ ಬಂದೀತು.
ವೃಷಭ
ಸಮಾಧಾನಕರ ವಾತಾವರಣವಾದೀತು. ಆರ್ಥಿಕವಾಗಿ ಅಭಿವೃದ್ಧಿ ಇರುತ್ತದೆ. ಮನೆಯಲ್ಲಿ ಯಂತ್ರಸಾಮಗ್ರಿಗಳ ರಿಪೇರಿಗಾಗಿ ಧನವ್ಯಯವಿದೆ. ಅತಿಥಿಗಳ ಆಗಮನ ಸಂತಸ ತರಲಿದೆ.
ಮಿಥುನ
ಅನಾವಶ್ಯಕ ಧನವ್ಯಯವಾಗಲಿದೆ. ಆಗಾಗ ಸಂಚಾರಗಳು ದೇಹಾರೋಗ್ಯದ ಮೇಲೆ ಪರಿಣಾಮ ಬೀರಬಹುದು. ವಿದ್ಯಾರ್ಥಿಗಳ ಪ್ರಯತ್ನಬಲ ಮುನ್ನಡೆಗೆ ಸಾಧಕ. ದಿನಾಂತ್ಯ ಶುಭವಿದೆ.
ಕಟಕ
ಲಾಟ್ರಿಯಿಂದ ಧನವ್ಯಯವಾದರೂ ಲಾಭ ತಂದೀತು. ವ್ಯಾಪಾರ ವ್ಯವಹಾರಗಳಿಗೆ ಚೇತರಿಕೆ ಇರುತ್ತದೆ. ಸಾಂಸಾರಿಕವಾಗಿ ಹೊಂದಾಣಿಕೆ ಅತೀ ಅಗತ್ಯ. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇದೆ.
ಸಿಂಹ
ನಿದ್ರಾ ಹೀನತೆಯಿಂದ ಆರೋಗ್ಯದಲ್ಲಿ ಸಮಸ್ಯೆ ಇರಲಿದೆ. ಯಾವುದೆ ಕೆಲಸ ಮಾಡಿದರೂ ನಿರೀಕ್ಷಿತ ಲಾಭ ಆದಾಯ ಇರಲಾರದು. ಉದ್ಯೋಗದಲ್ಲಿ ಸ್ಥಾನಪಲ್ಲಟ ತೋರಿ ಬಂದೀತು. ತಾಳ್ಮೆ ಇರಬೇಕು.
ಕನ್ಯಾ
ನ್ಯಾಯಾಲಯದ ಕೆಲಸಕಾರ್ಯಗಳು ನೆರವೇರಲಿವೆ. ಶಿಕ್ಷಕ ವರ್ಗದವರಿಗೆ ಮುಂಭಡ್ತಿ ಸಿಗಲಿದೆ. ನಿರುದ್ಯೋಗಿಗಳಿಗೆ ಅವಕಾಶಗಳು ಉದ್ಯೋಗ ಲಾಭವನ್ನು ಕೊಡಲಿವೆ. ಕಂಕಣಬಲಕ್ಕೆ ಸಕಾಲವಿದು.
ತುಲಾ
ಆಗಾಗ ಅಡೆತಡೆಗಳು ತೋರಿ ಬರಲಿವೆ. ವಿದ್ಯಾರ್ಥಿಗಳಿಗೆ ವಿದೇಶಯಾನದ ಅವಕಾಶಗಳಿರುತ್ತವೆೆ. ವ್ಯಾಪಾರ ವ್ಯವಹಾರಗಳು ಲಾಭಕರವಾಗಲಿವೆ. ನೂತನ ವ್ಯವಹಾರಗಳಿಗೆ ಸಕಾಲವಿದು.
ವೃಶ್ಚಿಕ
ತುಸು ಚೇತರಿಕೆಯಿಂದ ಸಮಾಧಾನ ಸಿಗಲಿದೆ. ವೃತ್ತಿರಂಗದಲ್ಲಿ ಹೊಂದಾಣಿಕೆಯಿಂದ ಮುಂದುವರಿಯಬೇಕು. ಸಾಂಸಾರಿಕವಾಗಿ ಬಂಧುಬಳಗವರ ಆಗಮನದಿಂದ ಸಂತಸವಿದೆ.
ಧನು
ಚಾಲನೆ ಇಲ್ಲದ ವಿಚಾರಗಳಲ್ಲಿ ಪುನಃ ಚಾಲನೆ ಕಂಡು ಬರುತ್ತದೆ. ಉದ್ಯೋಗಸ್ಥರು ತಮ್ಮ ವೃತ್ತಿಯಲ್ಲಿ ಮುನ್ನಡೆಯನ್ನು ಸಾಧಿಸಲಿದ್ದಾರೆ ಕಮಿಷನ್‌-ಎಜೆಂಟ್‌ ವ್ಯವಹರದಲ್ಲಿ ಲಾಭ ತಂದೀತು.
ಮಕರ
ಪುಣ್ಯ ಕಾರ್ಯ, ಧಾರ್ಮಿಕ ಕಾರ್ಯಗಳಿಗೆ ಧನವ್ಯಯವಾದರೂ ಧನಾರ್ಜನೆ ಇದ್ದೆ ಇರುತ್ತದೆ. ಮಾನಸಿಕವಾಗಿ ಆಗಾಗ ಉದ್ವೇಗದ ಪರಿಸ್ಥಿತಿ ಕಂಡು ಬರುತ್ತದೆ. ತಾಳ್ಮೆ ಇರಲಿ.
ಕುಂಭ
ಆರೋಗ್ಯದಲ್ಲಿ ಆಗಾಗ ಏರುಪೇರು ಕಂಡು ಬರುತ್ತದೆ.   ಉಳಿದ ವಿಚಾರದಲ್ಲಿ ನಿಮ್ಮ ಸ್ವಾರ್ಥ ಸಿದ್ಧಿಸುವ ಕಾಲವಿದು. ಸದುಪಯೋಗಿಸಬೇಕು. ನ್ಯಾಯಾಲಯದ ವಿಚಾರದಲ್ಲಿ ಯಶಸ್ಸು ಇದೆ.
ಮೀನ
ಉದ್ಯೋಗದಿಂದ ಅಧಿಕ ವರಮಾನವಿದೆ. ಸಾಮಾಜಿಕವಾಗಿ ಕೀರ್ತಿ ವರ್ಧಿಸುವುದು. ಉದ್ಯೋಗದಲ್ಲಿ ಹೊಂದಾಣಿಕೆ ಇರುತ್ತದೆ. ದೂರ ಸಂಚಾರದಲ್ಲಿ ಜಾಗ್ರತೆ ಇರಲಿ.
Back to Top