CONNECT WITH US  

ದೆಹಲಿ ಬಸ್‌ನಲ್ಲಿ 3 ಮಾರ್ಷಲ್‌ ನಿಯೋಜನೆ

ನವದೆಹಲಿ: ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ದೆಹಲಿಯ ನಗರ ಸಾರಿಗೆ ಬಸ್‌ಗಳಲ್ಲಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಮೊದಲ ಹಂತದಲ್ಲಿ 2,500 ಹೋಮ್‌ ಗಾರ್ಡ್‌ ಮತ್ತು ನಾಗರೀಕ ರಕ್ಷಣಾ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. 3-4 ಸಿಬ್ಬಂದಿಯನ್ನು ಒಂದು ಗುಂಪಾಗಿ ವಿಂಗಡಿಸಿ, ಅವರನ್ನು ಪ್ರತಿ ಬಸ್‌ಗೆ ನಿಯೋಜಿಸಲಾಗುವುದು. ಪ್ರತಿ ಬಸ್‌ಗೆ ಮೂವರನ್ನು ನಿಯೋಜನೆ ಮಾಡುವುದರಿಂದ, ಇಬ್ಬರು ಅಥವಾ ಮೂವರ ಗುಂಪು ಬಸ್‌ನಲ್ಲಿ ನಡೆಸುವ ಯಾವುದೇ ಅಹಿತಕರ ಘಟನೆಯನ್ನು ಸೂಕ್ತ ರೀತಿಯಲ್ಲಿ ತಡೆಯಬಹುದಾಗಿದೆ. ಈ ಗುಂಪಿನ ಸಿಬ್ಬಂದಿ ಪರಸ್ಪರರನ್ನು ಸಂಪರ್ಕಿಸಲು ವಾಕಿ-ಟಾಕಿಗಳನ್ನು ನೀಡಲಾಗುತ್ತದೆ ಎಂದು ಸಚಿವ ಗೋಪಾಲ್‌ ರೈ ಹೇಳಿದ್ದಾರೆ.

Trending videos

Back to Top