“ಸೀತಾರಾಮ ಕಲ್ಯಾಣ’ದಲ್ಲಿ ರಾಜ ರಾಣಿ ಸಾಂಗ್: Watch
Team Udayavani, Nov 16, 2018, 4:05 PM IST
ಯುವರಾಜ ನಿಖಿಲ್ ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ “ಸೀತಾರಾಮ ಕಲ್ಯಾಣ’ ಚಿತ್ರದ ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ತತಂಡ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸಾಂಗ್ವೊಂದನ್ನು ಬಿಡುಗಡೆ ಮಾಡಿದೆ.
“ನಿನ್ನ ರಾಜ ನಾನು.. ನನ್ನ ರಾಣಿ ನೀನು’ ಎಂಬ ಬ್ಯೂಟಿಫುಲ್ ಮೆಲೋಡಿ ಹಾಡು ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅರ್ಮನ್ ಮಲ್ಲಿಕ್ ಧ್ವನಿಯಲ್ಲಿ ಮೂಡಿಬಂದಿರೋ ಈ ಹಾಡಿಗೆ ವಿ. ಸಾಯಿ ಸುಕನ್ಯ ಸಾಹಿತ್ಯವಿದ್ದು, ಅನೂಪ್ ರೂಬೀನ್ಸ್ ಸಂಗೀತ ಸಂಯೋಜನೆಯಿದೆ.
ಅಲ್ಲದೇ ಹಾಡಿನ ಲಿರಿಕಲ್ ವಿಡಿಯೋದಲ್ಲಿ ನಿಖಿಲ್ ಕುಮಾರ್, ರಚಿತಾರಾಮ್ ಕೆಮಿಸ್ಟ್ರಿ ಭರ್ಜರಿಯಾಗಿ ಕಾಣುತ್ತಿದೆ. ಚೆನ್ನಾಂಬಿಕ ಫಿಲಂಸ್ ಬ್ಯಾನರ್ನಲ್ಲಿ ಶ್ರೀಮತಿ ಅನಿತಾ ಕುಮಾರಸ್ವಾಮಿ ನಿರ್ಮಾಣದ ಈ ಚಿತ್ರಕ್ಕೆ ಹರ್ಷ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸ್ವಾಮಿ ಛಾಯಾಗ್ರಹಣ, ಸುನೀಲ್ ಗೌಡ ಸಹ ನಿರ್ಮಾಣ, ಪ್ರಶಾಂತ್ ರಾಜಪ್ಪ, ಹಾಗೂ ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
IPL;ಮುಂಬೈ ಇಂಡಿಯನ್ಸ್ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ