CONNECT WITH US  

ಬಂಟ್ವಾಳ: ನೇತ್ರಾವತಿ ಅಪಾಯ ಮಟ್ಟಕ್ಕೆ

ನೇತ್ರಾವತಿ ಸೇತುವೆ ಬಳಿ ಶನಿವಾರ ಮಧ್ಯಾಹ್ನ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿತು.

ಬಂಟ್ವಾಳ: ನಿರಂತರ ಸುರಿಯುತ್ತಿರುವ ಭಾರೀ ಮಳೆಗೆ ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದ್ದು, ಶನಿವಾರ ಮಧ್ಯಾಹ್ನದ ಹೊತ್ತಿಗೆ ನೀರಿನ ಮಟ್ಟಕ್ಕೆ 8.5 ಮೀಟರ್‌ಗೆ ಬಂದಿದೆ.

ಇಲ್ಲಿ ಅಪಾಯದ ಮಟ್ಟ 9 ಮೀಟರಾಗಿದ್ದು ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿದೆ. ನದಿ ಪಾತ್ರದ ತೋಡು, ಹಳ್ಳಗಳಲ್ಲಿ ನೀರ ಹರಿವು ಹೆಚ್ಚಿದ್ದು, ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ಅನೇಕ ಕಡೆಗಳಲ್ಲಿ ನೀರು ಹರಿಯ ಲಾಗದೆ ಕೃತಕ ನೆರೆ ಸೃಷ್ಟಿಯಾಗಿದೆ. ಬಂಟ್ವಾಳ ಭಂಡಾರಿಬೆಟ್ಟಿನಲ್ಲಿ ಬಂಟ್ವಾಳ ಪುರಸಭೆಯು ಇಲ್ಲಿನ ವಸತಿ ಸಮುಚ್ಚಯದ ಸುತ್ತ ಕೃತಕ ನೆರೆಯನ್ನು ಹರಿಯಗೊಡುವ ಕೆಲಸ ಮಾಡಿದ್ದು, ಸಾರ್ವಜನಿಕ ಸಂಪರ್ಕದ ಖಾಸಗಿ ರಸ್ತೆಯನ್ನು ಅಗೆದುದರಿಂದ ಹಾನಿಯಾಗಿ ವಾಹನ ಸಂಚಾರಕ್ಕೆ ಅಡಚಣೆ ಎದುರಾಗಿದೆ.


Trending videos

Back to Top