CONNECT WITH US  

ವಿಟ್ಲ: ಗೃಹರಕ್ಷಕ ದಳದ ಸಿಬಂದಿಗೆ ನಿಂದಿಸಿದ ರಿಕ್ಷಾ ಚಾಲಕನಿಗೆ ದಂಡ

ವಿಟ್ಲ: ವಿಟ್ಲ - ಪುತ್ತೂರು ರಸ್ತೆಯಲ್ಲಿ ಅಕ್ರಮವಾಗಿ ವಾಹನ ನಿಲ್ಲಿಸಿದ್ದಲ್ಲದೆ, ಪ್ರಶ್ನಿಸಿದ ಗೃಹರಕ್ಷಕ ದಳದ ಸಿಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ  ರಿûಾ (ನಾಲ್ಕು ಚಕ್ರದ ಹೊಸ ಮಾದರಿಯ ವಾಹನ) ಚಾಲಕನನ್ನು ವಶಕ್ಕೆ ಪಡೆದುಕೊಂಡು, ದಂಡ ವಿಧಿಸಿದ ಘಟನೆ ಸೋಮವಾರ ಸಂಭವಿಸಿದೆ.

ವಿಟ್ಲದಿಂದ ಉಕ್ಕುಡ ಕಡೆಗೆ ಸಂಚಾರ ಮಾಡುವ  ರಿûಾದ ಚಾಲಕ ಅಡ್ಡದಬೀದಿ ರಸ್ತೆಯಲ್ಲಿ ವಾಹನ ನಿಲ್ಲಿಸಿ, ಪ್ರಯಾಣಿಕರನ್ನು ಹತ್ತಿಸುತ್ತಿದ್ದ. ಪರಿಣಾಮ ವಿಟ್ಲ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಿಟ್ಲ ಠಾಣೆ ನಿಯೋಜಿಸಿದ ಗೃಹರಕ್ಷಕದಳದ ಸಿಬಂದಿ ವಾಹನ ತೆರವುಗೊಳಿಸಲು ಹೇಳಿದ್ದರಿಂದ ಕುಪಿತನಾದ ಚಾಲಕ ಅವರ ಮೇಲೆ ರೇಗಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. 

ವಿಟ್ಲ ಪೊಲೀಸರು ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದು  ವಿಚಾರಣೆ ನಡೆಸಿ, ದಂಡ ವಿಧಿಸಿದ್ದಾರೆ.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top