ಕುದುರೆ ಮೇಲೇರಿ ಹೋಗಿ ಐಫೋನ್ ಕೊಂಡ!;ವೈರಲ್ ವಿಡಿಯೋ

ಮಹಾರಾಷ್ಟ್ರದ ಥಾಣೆಯ ರಸ್ತೆಗಳಲ್ಲಿ ಗುರುವಾರ ಡೋಲುವಾಲಾಗಳ ಮಧ್ಯೆ, ಕುದುರೆ ಏರಿ ಮಹೇಶ್ ಪಲಿವಾಲ್ ಎಂಬ ಯುವಕ ಸಾಗುತ್ತಿದ್ದ. ರಸ್ತೆಯಲ್ಲಿ ಸಾಗುತ್ತಿದ್ದ ಜನರು, "ಓಹೋ, ಇವನ ಮದುವೆ ಇರಬಹುದು. ಮದುಮಗ ಕುದುರೆಯಲ್ಲಿ ಹೋಗುತ್ತಿದ್ದಾನೆ' ಎಂದೇ ಅಂದುಕೊಂಡರು. ಆದರೆ, ಅದು ಆತನ ಮದುವೆ ಮೆರವಣಿಗೆ ಆಗಿರಲಿಲ್ಲ.ಬದಲಾಗಿ ಆತ ಮೊದಲೇ ಆರ್ಡರ್ ಮಾಡಿದ್ದ ಐಫೋನ್-ಎಕ್ಸ್ ಅನ್ನು ಪಡೆಯಲು ಹೋಗುತ್ತಿದ್ದ. ಜೊತೆಗೆ ಭಾರಿ ಹೆಮ್ಮೆಯಿಂದ "ಐ ಲವ್ ಐಫೋನ್-ಎಕ್ಸ್' ಎಂಬ ಪ್ಲಕಾರ್ಡ್ ಕೂಡ ಹಿಡಿದಿದ್ದ. ಇಷ್ಟೇ ಅಲ್ಲ ಈ ಯುವಕ ಕುದುರೆಯ ಮೇಲೇ ಕುಂತೇ ತನ್ನ ಐಫೋನ್-ಎಕ್ಸ್ ಪಡೆದನಂತೆ.
ವಿಶ್ವದೆಲ್ಲೆಡೆ ಆ್ಯಪಲ್ ಐಫೋನ್ ಹುಚ್ಚರಿದ್ದಾರೆ. ಆದರೆ ಬಾಜಭಜಂತ್ರಿ ಬಾರಿಸಿಕೊಂಡು ಐಫೋನ್
ಕೊಂಡವರಲ್ಲಿ ಇವನೇ ಮೊದಲಿಗ ಇರಬೇಕು.