ಖಾಸಗಿ ವಿಮಾನದಲ್ಲಿ ಚಿಕನ್ ಕರ್ರಿ ಸಾಗಣೆ
Team Udayavani, Jan 17, 2018, 6:06 AM IST
ನಗರಗಳಲ್ಲಿ ಹೋಟೆಲ್ಗಳಿಗೆ ಫೋನ್ ಅಥವಾ ಆನ್ ಲೈನ್ ಮೂಲಕ ಆಹಾರ ಆರ್ಡರ್ ಮಾಡಿ ತರಿಸಿಕೊಳ್ಳುವ ವ್ಯವಸ್ಥೆ ಇರುವುದು ತಿಳಿದೇ ಇದೆ. ಈ ಹೊಟೆಲ್ಗಳು ಇಂತಿಷ್ಟು ಕಿಮೀ ದೂರದೊಳಗೆ ಮಾತ್ರ ಆಹಾರ ಪಾರ್ಸೆಲ್ ಮಾಡುವುದು ಎಂಬ ಮಿತಿ ಹಾಕಿಕೊಂಡಿರುತ್ತವೆ. ಆದರೆ, ಬ್ರಿಟನ್ನ ಹ್ಯಾಂಪ್ಶೈರ್ನ ಭಾರತೀಯ ರೆಸ್ಟಾರೆಂಟ್ ವೊಂದು 500 ಮೈಲಿಯಾಚೆಗಿನ ಫ್ರಾನ್ಸ್ಗೆ ಆಹಾರವನ್ನು ಪಾರ್ಸೆಲ್ ನೀಡಿದೆ. ಅದು ಕೂಡ ಆಹಾರ ಸಾಗಿಸಲೆಂದೇ ಖಾಸಗಿ ವಿಮಾನವನ್ನು ಬಾಡಿಗೆಗೆ ಪಡೆದು!
ಬ್ರಿಟನ್ ವ್ಯಕ್ತಿಯೊಬ್ಬ ಫ್ರಾನ್ಸ್ನ ಬೋಡಿಯೋಕ್ಸ್ನಲ್ಲಿ ತನ್ನ ಸ್ನೇಹಿತರ ಜೊತೆ ನೆಲೆಸಿದ್ದರು. ಅವರು ಅಲ್ಲಿಯ ಭಾರತೀಯ ರೆಸ್ಟಾರೆಂಟ್ಗಳಲ್ಲಿ ಚಿಕನ್ ಕರ್ರಿ ರುಚಿ ನೋಡಿದ್ದಾರೆ. ಎಲ್ಲಿಯೂ ಅವರಿಗೆ ಹ್ಯಾಂಪ್ಶೈರ್ನ ದ ಆಕಾಶ್ ರೆಸ್ಟಾರೆಂಟ್ನಲ್ಲಿ ಸಿಗುತ್ತಿದ್ದ ಚಿಕನ್ ಫಾಲ್ ಕರ್ರಿ ಸಿಗಲಿಲ್ಲ.
ಕಡೆಗೆ ಅವರು ಆಕಾಶ್ ಹೋಟೆಲ್ಗೇ ಕರೆ ಮಾಡಿ 89 ಜನರಿಗಾಗುವಷ್ಟು ಊಟ ಒದಗಿಸಲು ಆರ್ಡರ್ ಮಾಡಿದರು. ವಿಶೇಷವೆಂದರೆ, ಅಷ್ಟು ದೂರ ವಿಮಾನದಲ್ಲಿ ಊಟ ಸಾಗಿಸಿದ್ದರೂ ಹೋಟೆಲ್ ಪಾರ್ಸೆಲ್ಗೆ ಹಣ ತೆಗೆದುಕೊಳ್ಳಲಿಲ್ಲವಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ