ಕಾರು ಕದ್ದ ಕಳ್ಳನ ಬಳಿ ಇದ್ದದ್ದು ಪ್ರೀತಿಯ ಕೋತಿ
Team Udayavani, Jun 11, 2018, 7:00 AM IST
ಕಾರು ಕಳ್ಳರ ಸಂಖ್ಯೆ ಅಮೆರಿಕದಲ್ಲೇನೂ ಕಡಿಮೆಯಿಲ್ಲ. ಇತ್ತೀಚೆಗೆ ಫ್ಲೋರಿಡಾದಲ್ಲಿ ಕಾಡಿ ಬ್ಲೇಕ್ ಹೆಶನ್ ಎಂಬ ಹೆಸರಿನ ಕಾರುಗಳ್ಳನನ್ನು ಪೊಲೀಸರು ಕಾರಿನ ಸಮೇತ ಹಿಡಿದರು. ಆದರೆ ಆ ವೇಳೆ ಮನಕಲಕುವ ಘಟನೆ ನಡೆದಿದೆ. ಪೊಲೀಸರು ಕಾರನ್ನು ವಶಕ್ಕೆ ತೆಗೆದುಕೊಂಡ ವೇಳೆ ಅವರಿಗೆ ಕಾರಿನಲ್ಲಿದ್ದ ಅಪರೂಪದ ಮಂಗವೊಂದು ಕಂಡಿದೆ. ಪೊಲೀಸರನ್ನು ನೋಡುತ್ತಲೇ ಅದು ತನ್ನ ಮಾಲೀಕ ಕಾಡಿಯ ಹೆಗಲೇರಿ ಆತನನ್ನು ಬಿಟ್ಟುಕೊಡಲಾರೆ ಎಂಬಂತೆ ತಬ್ಬಿಕೊಳ್ಳುತ್ತದೆ. ಆತ ಪ್ರಾಣಿ ಸಾಕಲು ಹೊಂದಬೇಕಾದ ಪರವಾನಗಿಯನ್ನು ಹೊಂದಿಲ್ಲವೆಂದು ತಿಳಿದ ಪೊಲೀಸರು, ಕಾರಿನ ಜೊತೆ ಮಂಗನನ್ನೂ ಕರೆದುಕೊಂಡು ಹೋಗುತ್ತಾರೆ. ಮಂಗ ತನ್ನ ಮಾಲೀಕನಿಂದ ಬೇಡದ ಮನಸ್ಸಿನಿಂದ ದೂರಾಗುವ ವಿಡಿಯೋ ಈಗ ವೈರಲ್ ಆಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ