CONNECT WITH US  
echo "sudina logo";

ಸಾವಿನ ಬಾಯಿಂದ ಪಾರಾದ ಯುವ ದಂಪತಿ

ಈಗೆಲ್ಲಾ ಮದುವೆಗಿಂತ ಮದುವೆ ಮುಂಚಿನ ಫೋಟೊಶೂಟ್‌ಗಳು, ವಿಡಿಯೋ ಚಿತ್ರೀಕರಣಗಳೇ ಹೆಚ್ಚು ಭರಾಟೆಯಲ್ಲಿ ನಡೆಯುತ್ತವೆ. ಅದಕ್ಕಾಗಿ ಛಾಯಾಚಿತ್ರಗ್ರಾಹಕರು, ಮದುಮಕ್ಕಳು ಮಾಡುವ ಕಸರತ್ತುಗಳು ಒಂದೆರಡಾ? ಇತ್ತೀಚೆಗೆ ಚೀನಾದಲ್ಲಿ ಬೆಂಕಿ ಬಳಸಿ ಫೋಟೊ ಶೂಟ್‌ ಮಾಡುವ ವೇಳೆ ವಧುವಿನ ಉದ್ದನೆಯ ಗೌನ್‌ಗೆ ಬೆಂಕಿ ಹತ್ತಿದ್ದನ್ನು ನೀವು ಓದಿದ್ದೀರಿ. ಅಂಥದ್ದೇ ಮತ್ತೂಂದು ಘಟನೆ ನಡೆದಿದೆ.

ನವ ವಧುವರರಾದ ಶೆಯೆನ್‌ ಮತ್ತು ಲುಕಾಸ್‌ ತಮ್ಮ ಮದುವೆ ಕಾರ್ಯಗಳನ್ನು ಮುಗಿಸಿ ವಿಡಿಯೋ ಶೂಟ್‌ಗೆ ತಯಾರಾಗಿದ್ದರು. ತಮ್ಮಿಬ್ಬರ ಪರಿಚಯದಿಂದ ಮದುವೆವರೆಗಿನ ಜರ್ನಿಯನ್ನು ಅವರು ನಿರೂಪಿಸುವ ದೃಶ್ಯ ಚಿತ್ರೀಕರಣವಾಗುತ್ತಿತ್ತು. ಇದ್ದಕ್ಕಿದ್ದಂತೆ ಮೇಲೆ ಏನೋ ಶಬ್ದ ಕೇಳಿ ಮೇಲೆ ನೋಡಿದ ಅವರು ಕ್ಷಣಮಾತ್ರದಲ್ಲಿ ಆ ಜಾಗದಿದಂದ ಕಾಲ್ಕಿತ್ತರು. ದೊಡ್ಡದೊಂದು ಮರದ ರಂಬೆ ಆ ಜಾಗದಲ್ಲಿ ಬಿದ್ದಿತು. ಕಲವೇ ಕ್ಷಣಗಳ ಅಂತರದಲ್ಲಿ ಅವರಿಬ್ಬರೂ ಸಾವಿನಿಂದ ಪಾರಾದರು. ಈ ವಿಡಿಯೋವನ್ನು ಅವರು ಫೇಸ್‌ ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

Trending videos

Back to Top