ಭಾರತೀಯ ಹುಡುಗಿ ಐಷಾರಾಮಿ ವಿದ್ಯಾರ್ಥಿನಿ
Team Udayavani, Sep 12, 2018, 5:51 AM IST
ದೇಶದ ಶ್ರೀಮಂತ ಉದ್ಯಮಿಗಳ, ನಟರ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಲಂಡನ್ಗೆ ತೆರಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಮಕ್ಕಳ ಜೀವನ ಶೈಲಿ, ಓಡಾಟ, ಸುತ್ತಾಟ ಆಗಾಗ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುತ್ತದೆ. ಆದರೆ ಅವರಾರೂ ಲಂಡನ್ನ “ಐಶಾರಾಮಿ ವಿದ್ಯಾರ್ಥಿ’ ಎಂದು ಕರೆಸಿಕೊಂಡಿದ್ದಿಲ್ಲ. ಆದರೆ ಈಗ ಭಾರತೀಯ ಮೂಲದ ಆಗರ್ಭ ಶ್ರೀಮಂತ ಉದ್ಯಮಿಯೊಬ್ಬರ ಮಗಳು ಲಂಡನ್ನಲ್ಲಿ ಅತ್ಯಂತ ಐಶಾರಾಮಿ ವಿದ್ಯಾರ್ಥಿನಿ ಎಂದು ಕರೆಸಿಕೊಂಡಿದ್ದಾರೆ. ಆದರೆ ಆ ಉದ್ಯಮಿ ಯಾರು ಎಂದು ಎಲ್ಲೂ ಬಹಿರಂಗಗೊಂಡಿಲ್ಲ. ಈ ವಿದ್ಯಾರ್ಥಿನಿ ಹೀಗೆ ಕರೆಸಿಕೊಳ್ಳಲೂ ಕಾರಣ ಇದೆ. ಊಟ, ಬಟ್ಟೆ, ಮೇಕಪ್ ನಿಂದ ಹಿಡಿದು ಆಕೆಯ ಸಂಪೂರ್ಣ ವೈಯಕ್ತಿಕ ಕೆಲಸಗಳನ್ನು ನಿರ್ವಹಿಸಲು 12 ಸಿಬ್ಬಂದಿ ಬೇಕಿದ್ದಾರೆ ಎಂದು ಅವರ ಪೋಷಕರು ಜಾಹೀರಾತು ನೀಡಿದ್ದಾರೆ.
ಮಗಳು ಸಾಮಾನ್ಯ ವಿದ್ಯಾರ್ಥಿ ನಿಲಯದಲ್ಲಿ ಇರುವುದು ಬೇಡವೆಂದು ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದಾರೆ. ಸಿಬ್ಬಂದಿಯನ್ನು ಅದೇ ಬಂಗಲೆ ಯಲ್ಲಿ ಇರಿಸಲಾಗುವುದಂತೆ. ಇಷ್ಟೆಲ್ಲಾ ಇದ್ದ ಮೇಲೆ ಆಕೆಯನ್ನು ಐಷಾರಾಮಿ ವಿದ್ಯಾರ್ಥಿನಿ ಎಂದು ಕರೆಯದೇ ಇರಲಾಗುತ್ತದೆಯೇ?
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ