ವಜ್ರದ ಉಂಗುರ ಕದ್ದು ನುಂಗಿದ ವಿದೇಶಿ ಕಳ್ಳ!
Team Udayavani, Oct 7, 2018, 4:58 AM IST
ಹೊರದೇಶಗಳಿಗೆ ಹೋಗಿ ದುಬಾರಿ ವಸ್ತುಗಳನ್ನು ಕದ್ದು ತಮ್ಮ ಮರ್ಯಾದೆ ಹರಾಜು ಹಾಕಿಕೊಳ್ಳುವ ಜೊತೆಗೆ ತಮ್ಮ ದೇಶದ ಮರ್ಯಾದೆ ಹರಾಜು ಮಾಡುವವರಿಗೇನೂ ಜಗತ್ತಿನಲ್ಲಿ ಕಡಿಮೆಯಿಲ್ಲ. ಅದೇ ರೀತಿ, ಐರ್ಲೆಂಡ್ನ ವ್ಯಕ್ತಿಯೊಬ್ಬ ಟರ್ಕಿಗೆ ಪ್ರವಾಸಕ್ಕೆಂದು ತೆರಳಿ ಅಲ್ಲಿಯ ಪೊಲೀಸರ ಅತಿಥಿಯಾಗಿದ್ದಾನೆ. ಕಥೆ ಇಷ್ಟೇ ಆಗಿದ್ದರೆ ಅದು ವೈರಲ್ ಆಗುವಂಥ ಸುದ್ದಿಯಾಗುತ್ತಿರಲಿಲ್ಲ.
ಇಲ್ಲಿ ನಡೆದಿರುವುದೇ ಬೇರೆ. ಇಯಾನ್ ಕ್ಯಾಂಪ್ಬೆಲ್ ಎನ್ನುವ ವ್ಯಕ್ತಿ ಟರ್ಕಿಯ ಮರ್ಮರಿಸ್ನ ಆಭರಣದ ಅಂಗಡಿಯೊಂದಕ್ಕೆ ತೆರಳಿ 29.04 ಲಕ್ಷ ರೂ. ಬೆಲೆಯ ವಜ್ರದುಂಗುರವನ್ನು ಕದ್ದ. ತಾನು ಕದ್ದದ್ದು ಯಾರಿಗೂ ಕಂಡಿಲ್ಲ ಎಂದು ಭಾವಿಸಿ ಅಲ್ಲಿಂದ ಪರಾರಿಯಾಗುವಷ್ಟರಲ್ಲಿ ಮಳಿಗೆಯ ಸಿಬ್ಬಂದಿಗೆ ಈತನ ಮೇಲೆ ಗುಮಾನಿ ಬಂದು, ಅಂಗಡಿಯ ಪ್ರವೇಶ ಬಾಗಿಲನ್ನು ಮುಚ್ಚಿಸಿದರು. ತಾನು ಸಿಕ್ಕಿಬೀಳುವುದು ಖಚಿತ ಆಗುತ್ತಿದ್ದಂತೆ, ಆತ ಉಂಗುರವನ್ನು ಬಾಯಿಗೆ ಹಾಕಿ ನುಂಗಿಯೇ ಬಿಟ್ಟ. ಮಳಿಗೆಯ ಮಾಲೀಕರು ಕೂಡಲೇ ಪೊಲೀಸರಿಗೆ ಕರೆ ಮಾಡಿದರು. ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮೂಲಕ ಉಂಗುರವನ್ನು ತೆಗೆಸಲಾಯಿತು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ