CONNECT WITH US  

ಬಾಲಿವುಡ್‌ ಹಾಡು ಬಳಸಿ ಅಮೆರಿಕದಲ್ಲಿ ಫ್ಲ್ಯಾಶ್‌ ಮಾಬ್‌

ವಿದೇಶಗಳಲ್ಲಿ ನಡೆವ ಫ್ಲ್ಯಾಶ್‌ ಮಾಬ್‌(ಜನನಿಬಿಡ ಸ್ಥಳದಲ್ಲಿತಂಡವೊಂದು ಇದ್ದಕ್ಕಿದ್ದ ಹಾಗೆ ನೃತ್ಯದಲ್ಲಿ ತೊಡಗುವುದು) ಜಾಲತಾಣಗಳಲ್ಲಿ ನೋಡಿರುತ್ತೀರಿ. ನಮ್ಮ ದೇಶದಲ್ಲಿಯೂ ಇತ್ತೀಚೆಗೆ ಈ ಟ್ರೆಂಡ್‌ ಹೆಚ್ಚುತ್ತಿದೆ. ಇತ್ತೀಚೆಗಷ್ಟೇ ಕ್ಯಾಲಿಫೋರ್ನಿಯಾದ ಮಾಲ್‌ ಒಂದರಲ್ಲಿ "ಅರೌಂಡ್‌ ದ ವರ್ಲ್ಡ್ ಇನ್‌ 80 ಡ್ಯಾನ್ಸಸ್‌' ಎಂಬ ತಂಡ ಶಾಪಿಂಗ್‌ ಮಾಡುತ್ತಿರುವಂತೆಯೇ ಫ್ಲ್ಯಾಶ್‌ ಮಾಬ್‌ ಆರಂಭಿಸಿತು.

ಅದಕ್ಕಾಗಿ ಅವರು ಆಯ್ದುಕೊಂಡಿದ್ದ ಹಾಡು ಕಂಗನಾ ರನೌತ್‌ ಅಭಿನಯದ ಹಿಂದಿ ಚಿತ್ರ "ಕ್ವೀನ್‌'ನ ಲಂಡನ್‌ ತುಮಕ ಹಾಡು.

 ಮಹಿಳೆಯರು ಭಾರತೀಯ ಶೈಲಿಯಲ್ಲೇ ನೃತ್ಯ ಮಾಡಿ ನೆರೆದವರ ಮನ ತಣಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಹಿಟ್‌ ಆಗಿದೆ.


Trending videos

Back to Top