CONNECT WITH US  

ಎಂಗೇಜ್‌ಮೆಂಟ್‌ ರಿಂಗ್‌ ತೆಗೆದು ಕಿಸೆಗೆ ಹಾಕಿಕೊಂಡ ಪ್ರಿಯಾಂಕಾ!

ಹೊಸದಿಲ್ಲಿ:ಇತ್ತೀಚೆಗೆ ಗಾಯಕ ನಿಕ್‌ ಜೋನ್ಸ್‌ ಜೊತೆ ರಹಸ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ  ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಕ್ಯಾಮರಾ ಕಂಡೊಡನೆಯೇ ಬೆರಳಿನಲ್ಲಿದ್ದ ಉಂಗುರವನ್ನು ತೆಗೆದು ಕಿಸೆಗೆ ಹಾಕಿಕೊಂಡಿದ್ದಾರೆ. 

ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಾ ಅವರಿಗಾಗಿ ಕಾರು ಸಿದ್ದವಾಗಿ ನಿಂತಿತ್ತು. ಈ ವೇಳೆ ಕೆಲ ಮಾಧ್ಯಮ ಪ್ರತಿನಿಧಿಗಳು ಕ್ಯಾಮರಾ ಹಿಡಿದು ಸಿದ್ದವಾಗಿ ನಿಂತಿದ್ದರು. ಹೊರ ಬರುತ್ತಿದ್ದಂತೆ ಉಂಗುರ ತೆಗೆದು ಪ್ಯಾಂಟ್‌ ಜೇಬಿನಲ್ಲಿ ಹಾಕಿಕೊಂಡಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. 

ಜುಲೈ 18 ರಂದು ತನ್ನ ಜನ್ಮದಿನದಂದೇ ನಿಕ್‌ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.ಆದರೆ ಈ ಬಗ್ಗೆ ಪ್ರಿಯಾಂಕಾ ಅವರು ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲ ಮತ್ತು ವರದಿಯನ್ನು ಅಲ್ಲಗಳೆದೂ ಇಲ್ಲ. 


Trending videos

Back to Top