22 ಕೋಟಿ ವೆಚ್ಚದ ಜಿಲ್ಲಾಸ್ಪತ್ರೆಯಲ್ಲಿ ಸಿಗಲ್ಲ ಬಿಸಿನೀರು!


Team Udayavani, Jul 12, 2018, 3:33 PM IST

chikk-b-3.gif

ಚಿಕ್ಕಬಳ್ಳಾಪುರ: ಜಿಲ್ಲೆಯ ಬಡ ರೋಗಿಗಳ ಪಾಲಿಗೆ ಸ್ವರ್ಗವಾಗಬೇಕಿದ್ದ ಜಿಲ್ಲಾಸ್ಪತ್ರೆ ಉದ್ಘಾಟನೆಗೊಂಡದಾಗಿ
ನಿಂದಲೂ ಒಂದಲ್ಲ ಒಂದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು, ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಕನಿಷ್ಠ
ಶುದ್ಧ ಕುಡಿಯುವ ನೀರು ಹಾಗೂ ಬಿಸಿ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ರೋಗಿಗಳು ಹಾಗೂ ಅವರ ಸಂಬಂಧಿ
ಕರು ನಿತ್ಯ ಬಿಸಿ ನೀರಿಗಾಗಿ ಬಾಟಲು ಹಿಡಿದು ಅಕ್ಕಪಕ್ಕದ ಹೋಟೆಲ್‌ಗ‌ಳ ಮುಂದೆ ಕ್ಯೂ ನಿಲ್ಲಬೇಕಾದ ದುಸ್ಥಿತಿ
ಎದುರಾಗಿದೆ.

ಬರೋಬ್ಬರಿ 22 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಜಿಲ್ಲಾಸ್ಪತ್ರೆಯ ಮೇಲೆ ಮೊದಲೇ ಔಷಧಗಾಗಿ ಬಿಳಿ ಚೀಟಿ
ಹಾವಳಿ, ತಜ್ಞ ವೈದ್ಯರ ಕೊರತೆ, ಡಿ ಗ್ರೂಪ್‌ ನೌಕರರ ಲಂಚಕ್ಕೆ ಬೇಡಿಕೆ, ಹೆರಿಗೆ ವಾರ್ಡ್‌ಗಳಲ್ಲಿ ನಾಯಿಗಳ ಕಾಟ, ಆಸ್ಪತ್ರೆ ಸುತ್ತಮುತ್ತಲೂ ನೈರ್ಮಲ್ಯದ ಕೊರತೆ ಜತೆಗೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂಬ ಅಪವಾದ ಇದೆ. ಆದರೆ, ಆಸ್ಪತ್ರೆಯಲ್ಲಿನ ಒಳ ರೋಗಿಗಳಿಗೆ ಹಾಗೂ ಆಸ್ಪತ್ರೆಗೆ ಬರುವ ಹೊರ ರೋಗಿಗಳಿಗೆ ಅಗತ್ಯ ಸಮರ್ಪಕ ಶುದ್ದ ಕುಡಿಯುವ ನೀರು ಹಾಗೂ ಬಿಸಿ ನೀರಿನ ವ್ಯವಸ್ಥೆ ಇಲ್ಲದೇ ರೋಗಿಗಳು ನಿತ್ಯ ಪರದಾಡುವುದು ಸಾಮಾನ್ಯವಾಗಿದೆ.

ನೀರಿಗೆ ಪರದಾಟ: ಜಿಲ್ಲಾಸ್ಪತ್ರೆಯಲ್ಲಿ ನಿತ್ಯ ಹೆರಿಗೆಗೆಂದು ಜಿಲ್ಲೆಯ ದೂರದ ಪ್ರದೇಶಗಳಿಂದ ಬರುವ ಮಹಿಳೆಯರ
ಸಂಖ್ಯೆ ಅಧಿಕವಾಗಿದೆ. ಅದರಲ್ಲೂ ಒಳ ರೋಗಿಗಳಿಗೆ 200 ರಿಂದ 250 ಮಂದಿ ನಿತ್ಯ ಚಿಕಿತ್ಸೆ ಪಡೆಯುತ್ತಾರೆ. ಹೊರ
ರೋಗಿ ಗಳಾಗಿ ನಿತ್ಯ 300 ಕ್ಕೂ ಹೆಚ್ಚು ಸಾರ್ವಜನಿಕರು ಆರೋಗ್ಯ ತಪಾಸಣೆಗೆಂದು ಜಿಲ್ಲಾಸ್ಪತ್ರೆಗೆ ಬಂದು
ಹೋಗುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಸಮರ್ಪಕ ಕುಡಿಯುವ ನೀರು ಇಲ್ಲದಿರುವುದು ಮಾತ್ರ ರೋಗಿಗಳಿಗೆ
ತೀವ್ರ ತೊಂದರೆಯಾಗಿ ಪರಿಣಮಿಸಿದೆ. 

ಶಿಶು ಸ್ನಾನಕ್ಕೂ ನೀರಿಲ್ಲ: ಆಸ್ಪತ್ರೆಯಲ್ಲಿ ಹುಟ್ಟುವ ಮಕ್ಕಳಿಗೆ ಸ್ನಾನ ಮಾಡಿಸಲು ಬಿಸಿ ನೀರಿನ ಸೌಲಭ್ಯ
ಇಲ್ಲದಿರುವುದರಿಂದ ಸಂಬಂಧಿಕರು ಬಾಟಲು ಹಿಡಿದು ಹೋಟೆಲ್‌ಗ‌ಳಲ್ಲಿ ಬಿಸಿ ನೀರು ಖರೀದಿಸಿ ಮಕ್ಕಳಿಗೆ ಸ್ನಾನ
ಮಾಡಿಸಬೇಕಿದೆ. ಆಸ್ಪತ್ರೆಯಲ್ಲಿ ಒಂದು ಕಡೆ ಮಾತ್ರ ನೀರಿನಸೌಲಭ್ಯ ಇದ್ದರೂ ಅದು ಶುದ್ಧ ಕುಡಿಯುವ ನೀರು ಅಥವಾ ಇನ್ನಾವುದೋ ಎಂದು ಜನ ಆ ನೀರನ್ನು ಕುಡಿಯಲು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಇಡೀ ಆಸ್ಪತ್ರೆಗೆ
ಒಂದು ಕಡೆ ನೀರಿನ ಸೌಕರ್ಯ ಕಲ್ಪಿಸಿರುವುದರಿಂದ ಬಹುತೇಕ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ
ಇಂತಹ ಕಡೆಗೆ ನೀರು ಸಿಗುತ್ತದೆ ಎಂದು ಮಾಹಿತಿ ಕೂಡ ಇಲ್ಲವಾಗಿದೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳು
ದಿಕ್ಕು ತೋಚದೇ ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಬಿಸಿ ನೀರುಗಾಗಿಯೇ ಲಕ್ಷಾಂತರ ರೂ. ವೆಚ್ಚದಲ್ಲಿ ಸೋಲಾರ್‌ಗಳನ್ನು ಅಳವಡಿಸಲಾಗದ್ದಿರೂ ಅವು ಆಟಕ್ಕಕ್ಕುಂಟು ಲೆಕ್ಕಕ್ಕಿಲ್ಲ
ಎಂಬಂತಾಗಿದೆ. ಸೋಲಾರ್‌ ಬಳಸದ ಕಾರಣ ಅವು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎನ್ನಲಾಗಿದೆ

 ಬಿಸಿ ನೀರಿಗಾಗಿ ರೋಗಿಗಳ ಸಂಬಂಧಿಕರು ಹೋಟೆಲ್‌ಗಳಿಗೆ ಹೋಗುವುದು ನನ್ನ ಗಮನಕ್ಕೆ ಬಂದಿಲ್ಲ.
ಜಿಲ್ಲಾಸ್ಪತ್ರೆಯಲ್ಲಿ ಬಿಸಿ ನೀರಿಗಾಗಿಯೇ ಸೋಲಾರ್‌ ವ್ಯವಸ್ಥೆ ಅಳವಡಿಸಲಾಗಿದೆ. ರೋಗಿಗಳಿಗೆ ಬಿಸಿ ನೀರು ಕಲ್ಪಿಸುವ ಬಗ್ಗೆ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕರ ಜತೆಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ.
ಡಾ.ಬಿ.ಎಂ.ರವಿಶಂಕರ್‌, ಜಿಲ್ಲಾ ಆರೋಗ್ಯಾಧಿಕಾರಿ

ಸಮರ್ಪಕ ಊಟವೂ ಇಲ್ಲ
ಜಿಲ್ಲಾಸ್ಪತ್ರೆಯು ಮೂಲ ಸೌಕರ್ಯಗಳ ಕೊರತೆಯಿಂದ ಅವ್ಯವಸ್ಥೆಗಳ ಆಗರವಾಗಿದೆ. ರೋಗಿಗಳಿಗೆ ಶುದ್ಧ ಕುಡಿಯುವ ನೀರು, ಬಿಸಿ ನೀರಿನ ವ್ಯವಸ್ಥೆ ಇಲ್ಲ. ಬೆಳಗ್ಗೆ, ರಾತ್ರಿ ಸಮರ್ಪಕವಾಗಿ ತಿಂಡಿ ಕೊಡುವುದಿಲ್ಲ. ಕೊಡುವ ಊಟ ಕೂಡ ಗುಣಮಟ್ಟದಿಂದ ಇರಲ್ಲ. ಮೊಟ್ಟೆ, ಬಾಳೆಹಣ್ಣು ವಿತರಿಸುವುದಿಲ್ಲ. ಆಸ್ಪತ್ರೆಯಲ್ಲಿ ನೀಡುವ ತಿಂಡಿ ಸೇವಿಸಲಾಗದೇ ಬಹಳಷ್ಟು ರೋಗಿಗಳು ಹೋಟೆಲ್‌ಗ‌ಳಲ್ಲಿ ಇಡ್ಲಿ ತಂದು ತಿನ್ನಬೇಕಿದೆ ಎಂದು ರೋಗಿಗಳು ಅಳಲು ತೋಡಿಕೊಂಡಿದ್ದು, ಜಿಲ್ಲಾಧಿಕಾರಿಗಳು ಒಮ್ಮೆ ಜಿಲ್ಲಾಸ್ಪತ್ರೆಗೆ ಬಂದು ಖುದ್ದು ಪರಿಶೀಲನೆ ನಡೆಸಲಿ ಎಂದು ಆಸ್ಪತ್ರೆಯ
ಅವ್ಯವಸ್ಥೆಯಿಂದ ರೋಸಿ ಹೋಗಿರುವ ರೋಗಿಗಳು ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ನೀರಿಗೆ ಹೋಟೆಲ್‌ಗೆ ಅಲೆದಾಟ
ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ರೋಗಿಗಳು ಹಾಗೂ ಹೆರಿಗೆಗೆ ಬಂದು ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುವ ಬಾಣಂತಿಯರು ವೈದ್ಯರ ಸೂಚನೆಯಂತೆ ಬಿಸಿ ನೀರು ಕುಡಿಯಬೇಕು. ಆದರೆ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಇಲ್ಲದ ಪರಿಣಾಮ ರೋಗಿಗಳ ಸಂಬಂಧಿಕರು ದಿನ ಬೆಳಗಾದರೆ ಆಸ್ಪತ್ರೆಯ ಅಕ್ಕಪಕ್ಕದ
ಹೋಟೆಲ್‌ಗ‌ಳಿಗೆ ಖಾಲಿ ಬಾಟಲು ಹಿಡಿದು ಹೋಗಿ ಹೋಟೆಲ್‌ ಮಾಲಿಕರಿಗೆ 10, 20 ರೂ. ಕೊಟ್ಟು ಬಿಸಿ ನೀರನ್ನು ತರುತ್ತಾರೆ. 

ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

CHandrababu Naidu

Tirupati Laddus row;ತಪ್ಪಿತಸ್ಥರನ್ನು ಸುಮ್ಮನೆ ಬಿಡಲು ಸಾಧ್ಯವೇ?: ಸಿಎಂ ನಾಯ್ಡು ಪ್ರಶ್ನೆ

1-ambani

Ambani;1,000 ಕೋಟಿಯ ವಿಮಾನ ಖರೀದಿಸಿದ ಮುಕೇಶ್‌ ಅಂಬಾನಿ

ISREL

Israel- ಹೆಜ್ಬುಲ್ಲಾ ನಡುವೆ ಬಾಂಬ್‌ಗಳ ಸುರಿಮಳೆ! ; 100 ರಾಕೆಟ್‌ ಲಾಂಚರ್‌ ಧ್ವಂಸ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

goa

Goa Beachನಲ್ಲಿ ಮದುವೆ: ದಿನಕ್ಕೆ 1 ಲಕ್ಷ ರೂ. ಶುಲ್ಕ

1-ddsadsa

Amit Shah; ತಡೆಯದಿದ್ದರೆ ಅಕ್ರಮ ವಲಸಿಗರೇ ಬಹುಸಂಖ್ಯಾಕರಾಗುತ್ತಾರೆ!

Pushkar sing dhami

Uttarakhand: ಪ್ರತಿಭಟನಕಾರರಿಂದ ಹಾನಿ ನಷ್ಟ ಭರಿಸುವ ಕಾನೂನು ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

12

Chikkaballapur: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ!

suicide (2)

Chikkaballapur: ಪೋಕ್ಸೋ ಆರೋಪಿ ಜತೆಗೆ 16 ವರ್ಷದ ಬಾಲಕಿ ಆತ್ಮಹತ್ಯೆ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Electric scooter

Battery production ಅಮೆರಿಕ ಹೂಡಿಕೆ; ಚೀನಕ್ಕೆ ಸಡ್ಡು

CHandrababu Naidu

Tirupati Laddus row;ತಪ್ಪಿತಸ್ಥರನ್ನು ಸುಮ್ಮನೆ ಬಿಡಲು ಸಾಧ್ಯವೇ?: ಸಿಎಂ ನಾಯ್ಡು ಪ್ರಶ್ನೆ

1-ambani

Ambani;1,000 ಕೋಟಿಯ ವಿಮಾನ ಖರೀದಿಸಿದ ಮುಕೇಶ್‌ ಅಂಬಾನಿ

ISREL

Israel- ಹೆಜ್ಬುಲ್ಲಾ ನಡುವೆ ಬಾಂಬ್‌ಗಳ ಸುರಿಮಳೆ! ; 100 ರಾಕೆಟ್‌ ಲಾಂಚರ್‌ ಧ್ವಂಸ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.