CONNECT WITH US  

ಸುಬ್ರಹ್ಮಣ್ಯ:ಹೆದ್ದಾರಿಯಲ್ಲಿ ಕಾರಿನ ಮೇಲೆರಗಿದ ಕಾಡಾನೆ;6ಮಂದಿ ಬಚಾವ್‌

ಸಂಪೂರ್ಣ ಜಖಂಗೊಂಡ ಆಮ್ನಿ

ಕಡಬ: ಕಾಡಾನೆಯೊಂದು ರಸ್ತೆಯಲ್ಲಿ ತೆರಳುತ್ತಿಗೆ ಕಾರಿಗೆ ಅಡ್ಡ ಬಂದು ದಾಳಿ ಮಾಡಿದ ಪರಿಣಾಮ ಓರ್ವ ಗಂಭೀರ ಗಾಯಗೊಂಡು, ಆರು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಉಪ್ಪಿನಂಗಡಿ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕಡೂರು ಮೂಲದ ಯಾತ್ರಾರ್ಥಿಗಳಿದ್ದ ಮಾರುತಿ ಓಮ್ನಿ ಕಾರು ಬಿಳಿನೆಲೆ ಸಮೀಪ ತಲುಪಿದಾಗ ಕಾಡಾನೆ ರಸ್ತೆಯನ್ನು ದಾಟುತ್ತಿತ್ತು. 

ಆನೆಯನ್ನು  ಧಿಡೀರ್‌ ಕಂಡ ಚಾಲಕ ಆನೆಯ ಸಮೀಪದಲ್ಲೇ ಕಾರನ್ನು ನಿಲ್ಲಿಸಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಕಾಡಾನೆಯು ಹಿಂತಿರುಗಿ ಬಂದು ಸೊಂಡಿಲಿನಿಂದ ಕಾರಿನ ಮೇಲೆ ದಾಳಿ ಮಾಡಿದೆ. 

ಇದೇ  ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಬಂದಿದ್ದು, ಜೋರಾಗಿ ಹಾರ್ನ್ ಹಾಕಿದ ಕಾರಣ ಕಾಡಾನೆ ಕಾರನ್ನು ಬಿಟ್ಟು ಓಡಿ ಹೋದ ಕಾರಣ ಭಾರೀ ಅನಾಹುತ ತಪ್ಪಿದೆ. 

ಘಟನೆಯಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ  ಪಾರಾಗಿದ್ದಾರೆ.

Trending videos

Back to Top