ಹೊಸದೆನ್ನುವ ಸಾಹಸ ಅನುಭವಿಸುವ ಸಂತಸ

Team Udayavani, Jan 1, 2019, 12:30 AM IST

14.jpg

ಮತ್ತೂಂದು ಹೊಸತು ಕಣ್ಣು ಬಿಟ್ಟಿದೆ. ನಿನ್ನೆ ಕಂಡ ಹಳತೆಲ್ಲವೂ ಆಲ್ಬಮ್‌ ಆಗಿ, ಕಾಲದ ಕಪಾಟಿನೊಳಕ್ಕೆ ಹೋಗಿ ಬೆಚ್ಚಗೆ ಕುಳಿತು, ಬಾಗಿಲು ಮುಚ್ಚಿಕೊಂಡಿದೆ. ಅದರ ಕೀಲಿ ಹುಡುಕಿದರೂ ಸಿಗದು. ಅದರೊಟ್ಟಿಗೆ ನುಸುಳಿ ಕೂರಲು, ಅಲ್ಲಿ ಪುಟ್ಟ ಕಿಂಡಿಯೂ ಕಾಣಿಸದು. ಕಾಲದೊಟ್ಟಿಗೆ ಎದುರಿಗೆ ಮುಖ ಮಾಡುವುದು ಎಲ್ಲರಿಗೂ ಅನಿವಾರ್ಯ. ಕಳೆದು ಹೋದದ್ದು “ವ್ಯರ್ಥ’ ಎನ್ನುವ ಚಿಂತೆ ಯಾರಲ್ಲೂ ಇಲ್ಲ. ಅದು ಕೂಡಿಟ್ಟ ಅನುಭವದ ಸಂಪತ್ತಷ್ಟೇ. ಅಲ್ಲಿ ಹೆಜ್ಜೆ ಹೆಜ್ಜೆಗೂ ಕಲಿತ ಪ್ರಜ್ಞೆಗಳೆಲ್ಲ ನಮ್ಮೊಳಗೆ ಹರಳುಗಟ್ಟಿ, ಈ ಹೊಸ ಹಾದಿಗೆ ಸಾಲಿಗ್ರಾಮದಂತೆ ಬೆಳಕಾದ ರೇನೇ, ಬದುಕಿನ ಯಾನ ಬಲು ಚೆಂದ ಮತ್ತು ಸುಲಭ.

ಸಾಮಾನ್ಯ ವಾಗಿ ಹೊಸತರ ಬಗ್ಗೆ ಒಂದು ಪುಟ್ಟ ದಿಗಿಲಿರುತ್ತದೆ. ಅದು ಹೇಗಿರುತ್ತೋ, ಏನೋ ಅಂತ. ಅದೇನು ಮಾಯೆಯೋ, ತಿಳಿಯದು… ಹೊಸ ವರುಷವೆಂದಾಗ, “ಅಯ್ಯೋ ಇದು ಹೊಸತು’ ಎನ್ನುವ ಆತಂಕ ದಿಂದ ಯಾರೂ ತಬ್ಬಿಬ್ಟಾಗುವುದಿಲ್ಲ. ಕಾರಣ, ಈ ಹೊಸ ಹಾದಿ ಯಲ್ಲಿ ಹೆಜ್ಜೆ ಹಾಕುತ್ತಿರುವುದು ನಾವೊಬ್ಬರೇ ಅಲ್ಲವಲ್ಲ. ಸಮಸ್ತ ಸಂಕುಲವೇ ಈ ಹೊಸ ಪಯಣಕ್ಕೆ ಜೋಡಿ.

ಆ ಹೊಸತನ್ನು ಯಾರೂ ನೋಡಿದವರಿಲ್ಲ. ಅದರ ರೂಪ ಗೊತ್ತಿಲ್ಲ. ಭಾವ ತಿಳಿದಿಲ್ಲ. ಬಣ್ಣ ಕಂಡವರಿಲ್ಲ. ಅಂದಾಜಿನಲ್ಲಿ ಅದನ್ನು ಊಹಿಸಿದ ಒಬ್ಬನೇ ಒಬ್ಬನು ನಮ್ಮ ಜೋಡಿ ಕಾಣಿಸುವುದೂ ಇಲ್ಲ. ಹಾಗಾಗಿ ಅದರ ಬಗ್ಗೆ ಏನೋ ಕುತೂಹಲ. ಎಲ್ಲರಿಗೂ ಒಟ್ಟಿಗೆ ದರುಶನ ನೀಡುವ ಏಕ ಕಾಲದ ಬೆರಗು ಅದು. ಆಗಿದ್ದು ಆಗಿಹೋಯ್ತು, ಹೊಸ ಹಾದಿಯಲ್ಲಿ ಎಲ್ಲವೂ ಒಳಿತೇ ಆಗುತ್ತೆ ಎನ್ನುವ ಧೈರ್ಯದ ಹುಮ್ಮಸ್ಸನ್ನು ಎದೆಯೊಳಗೆ ತುಂಬುವ ದಂಡನಾಯಕನಂತೆ ಹೊಸ ಪರ್ವ ನಮ್ಮೆಲ್ಲ ರನ್ನು ಒಟ್ಟಿಗೆ ಕರೆದೊಯ್ಯುತ್ತಿದೆ. “ವರುಷ ಕ್ಕೊಂದು ಹೊಸತು ಜನುಮ, ಹರುಷಕ್ಕೊಂದು ಹೊಸತು ನೆಲೆಯು ಅಖೀಲ ಜೀವಜಾತಕೆ’ ಎನ್ನುವ ವರಕವಿಯ ಹಾಡಿನಂತೆ, ಎಲ್ಲರಿಗೂ ಒಂದು ಜನುಮ ಮತ್ತೆ ಸಿಕ್ಕಿದೆ. ಹಳತೆನ್ನುವ ಶಕ್ತಿಯನ್ನು ಕಳಕೊಂಡು, ಹೊಸತೆನ್ನುವ ಶಕ್ತಿಯನ್ನು ತುಂಬಿ ಕೊಂಡು ಸಾಗುವ ಪಯಣಕ್ಕೆ ಎಲ್ಲರೂ ಸಜ್ಜಾಗಿದ್ದೇವೆ. ಹಾಗೆ ನೋಡಿದರೆ, ಪ್ರಕೃತಿ ಹಾಗೂ ಮನುಷ್ಯ ಚಕ್ರದ ಎಲ್ಲ ರಾಗವೈಭವ ಗಳೂ ಇದನ್ನೇ ಆಧರಿಸಿ ಮುನ್ನಡೆಯುವಂಥವು.

“ಈ ವರ್ಷ ಹೀಗೆಯೇ ಬದುಕಬೇಕು’ ಎನ್ನುವ ಸಂಕಲ್ಪ ಈಗಾಗಲೇ ಅನೇಕರ ಹೆಗಲೇರಿ ಕೂತು, ಮತ್ತೇನನ್ನೋ ಪಿಸುಗುಟ್ಟುತ್ತಿರಬಹುದು. ಅದು ಹೇಳಿದಂತೆಯೇ ಹೆಜ್ಜೆ ಇಡುವ ಸಾಹಸ ನಮ್ಮದಾದರೇನೇ, ಬದುಕಿಗೊಂದು ಸ್ಪಷ್ಟತೆ ಎನ್ನುವ ಭಾವ ನಮ್ಮದು. ಆದರೆ, ಈ ತತ್ವದ ಆಚೆಗೂ ಆಲೋಚನೆ ನೆಟ್ಟ ಭಂಡನೊಬ್ಬ ನಮ್ಮೊಳಗೇ ಇದ್ದಾನೆ. “ಬಂದಂತೆ ಬದುಕು’ ಎನ್ನುವ ಅವನ ಮಾತನ್ನು ಕಿವಿಯೊಳಗೆ ಬಿಟ್ಟುಕೊಳ್ಳಲೇಬೇಕು. ನಾಳೆ ಎನ್ನುವುದರ ಬಗ್ಗೆ ಅವನಿಗೇನೋ ಧೈರ್ಯ. ಅದನ್ನು ಹಿಡಿಯುವ ಈ ಓಟವೇ ಒಂದು ಸ್ಫೂರ್ತಿ ಯಾನ.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.