ಆರ್ಥ್ರೊಸ್ಕೋಪಿ


Team Udayavani, Oct 28, 2018, 6:00 AM IST

4.jpg

ಹಿಂದಿನ ವಾರದಿಂದ- ಭುಜದ ಮೃದು ಜೀವಕೋಶಗಳ (ಕ್ಯಾಪ್ಸುಲೊ-ಲ್ಯಾಬ್ರಲ್‌) ಸಂರಚನೆಯ ಆರ್ಥ್ರೊಸ್ಕೊಪಿಕ್‌ ದುರಸ್ತಿ ಮತ್ತು ಆ ಬಳಿಕ ಪರಿಣತರಿಂದ ದೈಹಿಕ ಪುನಶ್ಚೇತನದ ಮೂಲಕ ಭುಜದ ಸಹಜ ಕಾರ್ಯಚಟುವಟಿಕೆಯನ್ನು ಪುನರ್‌ಸ್ಥಾಪಿಸುವುದು ಸಾಧ್ಯ.

ಭುಜದ ಸ್ಥಾನಪಲ್ಲಟ (ಡಿಸ್‌ಲೊಕೇಶನ್‌)ವು ಬಹು ಸಾಮಾನ್ಯವಾಗಿದ್ದು, ಇದನ್ನು ಸರಳವಾಗಿ ಕ್ಲೋಸ್ಡ್ ರಿಡಕ್ಷನ್‌ ಮತ್ತು ನಿಗದಿತ ಸಮಯದ ವರೆಗೆ ನಿಶ್ಚಲಗೊಳಿಸುವುದರ ಮೂಲಕ ಪರಿಣಾಮಕಾರಿಯಾಗಿ ಚಿಕಿತ್ಸೆಗೆ ಒಳಪಡಿಸುವುದು ಸಾಧ್ಯ. ಭುಜದ ಸ್ಥಾನಪಲ್ಲಟಕ್ಕೆ ಚಿಕಿತ್ಸೆ ಒದಗಿಸದೆ ಇದ್ದಲ್ಲಿ ಅದು ಪದೇ ಪದೇ ಪುನರಾವರ್ತನೆಯಾಗುತ್ತದೆ ಹಾಗೂ ಭುಜದ ಪೂರಕ ಸಂರಚನೆಗಳಿಗೆ ಘಾಸಿ ಉಂಟು ಮಾಡುತ್ತದೆ. ಆರ್ಥ್ರೊಸ್ಕೊಪಿಕ್‌ ತಂತ್ರದ ಮೂಲಕ ಹಾನಿಯನ್ನು ಆದಷ್ಟು ಬೇಗನೆ ಚಿಕಿತ್ಸೆಗೆ ಒಳಪಡಿಸುವುದರಿಂದ ರೋಗಿಗೆ ಭುಜದ ಗಾಯಪೂರ್ವ ಚಟುವಟಿಕೆಗಳ ಮಟ್ಟಕ್ಕೆ ಮರಳಲು ಸಾಧ್ಯವಾಗುತ್ತದೆ. ನಿರ್ಲಕ್ಷ್ಯ ವಹಿಸಿದರೆ ಎಲುಬಿಗೂ ಹಾನಿಯಾಗಬಹುದು. ಇದು ಎಲುಬಿಗೂ ಶಸ್ತ್ರಚಿಕಿತ್ಸೆಯಂತಹ ಸಂಕೀರ್ಣ ಪ್ರಕ್ರಿಯೆಗಳನ್ನು ಅಗತ್ಯವಾಗಿಸಬಹುದು ಹಾಗೂ ಭುಜದ ಚಲನೆಯನ್ನು ಅನಿರ್ದಿಷ್ಟಾವಧಿ ವರೆಗೆ ತಡೆಹಿಡಿಯಬಹುದು.

ಮಧುಮೇಹ ರೋಗಿಗಳಲ್ಲಿ ಭುಜದ ಸಂಧಿಯ ಪೆಡಸುತನ (ಪೆರಿಯಾಥೆಟಿಸ್‌/ಪೆಡಸು ಭುಜ) ಮತ್ತು ರೊಟೇಟರ್‌ ಕಫ್ಗಳ ಉರಿಯೂತ (ಇಂಪಿಂಜ್‌ಮೆಂಟ್‌) ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳಾಗಿವೆ. ಇವು ವೈಕಲ್ಯಕ್ಕೆ ಕಾರಣವಾಗಬಲ್ಲವುಗಳಾಗಿದ್ದು, ಭಿನ್ನವಾಗಿ ಚಿಕಿತ್ಸೆಗೆ ಒಳಪಡಿಸಬೇಕಾಗುತ್ತದೆ. ತಜ್ಞ ವೈದ್ಯರು ಇದನ್ನು ನಿಖರವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಬಲ್ಲವರಾಗಿರುತ್ತಾರೆ. ಅನೇಕ ಶ್ರಮಜೀವಿ ಕಾರ್ಮಿಕರು ಹಾಗೂ ಪವರ್‌ ಲಿಫ್ಟರ್‌ಗಳು ಆಕ್ರೊಮಿಯೊ-ಕ್ಲಾವಿಕ್ಯುಲಾರ್‌ ಸಂಧಿ (ಕುತ್ತಿಗೆ ಎಲುಬಿನ ಹೊರ ತುದಿ ಮತ್ತು ಭುಜದ ಬ್ಲೇಡ್‌ಗಳನ್ನು ಒಳಗೊಂಡ ಸಂಧಿ)ಯ ಆರ್ಥ್ರೊಟಿಸ್‌ಗೆ ತುತ್ತಾಗುತ್ತಾರೆ. ಈ ತೊಂದರೆಗೆ ಒಳಗಾದ ರೋಗಿಯ ತೀವ್ರ ನೋವನ್ನು ಆಥ್ರೊìಸ್ಕೊಪಿಕ್‌ ಚಿಕಿತ್ಸೆಯು ಶಮನಿಸಬಹುದಾಗಿದೆ. 

ಮೊಣಕಾಲು ಸಂಧಿಯು ದೇಹದ ಭಾರವನ್ನು ಹೊರುವ ಮುಖ್ಯ ಸಂಧಿಗಳಲ್ಲಿ ಒಂದಾಗಿದೆ. ನಾಲ್ಕು ಲಿಗೆ¾ಂಟ್‌ಗಳು ಮತ್ತು ಎರಡು ಮೆನಿಸಿಗಳು ಸಂಧಿಯ ಹೊರಭಾಗದಲ್ಲಿರುವ ಮೃದು ಕೋಶಗಳ ಸಹಾಯದಿಂದ ಈ ಸಂಧಿಯನ್ನು ಹಿಡಿದಿಟ್ಟುಕೊಂಡಿವೆ. ರಸ್ತೆ ಅಪಘಾತಗಳು ಮತ್ತು ಕ್ರೀಡಾ ಚಟುವಟಿಕೆಗಳ ಸಂದರ್ಭಗಳಲ್ಲಿ ಈ ಸಂರಚನೆಯು ಸಾಮಾನ್ಯವಾಗಿ ಘಾಸಿಗೊಳ್ಳುತ್ತದೆ. ಚಿಕಿತ್ಸೆಗೆ ಒಳಪಡಿಸದೇ ಇದ್ದಲ್ಲಿ ಇದು ಕ್ರೀಡಾಳುಗಳ ಸಾಮರ್ಥ್ಯ ಮತ್ತು ಓಡಾಟವನ್ನು ಗಣನೀಯವಾಗಿ ಕಸಿದುಕೊಳ್ಳಬಲ್ಲುದು; ಯುವಕ-ಯುವತಿಯರಲ್ಲಿ ಚಟುವಟಿಕೆಗಳಿಗೆ ಅಡ್ಡಿಯಾಗಬಹುದು. ದೀರ್ಘ‌ಕಾಲೀನವಾಗಿ ಇದು ಚಲನೆಯನ್ನು ಇನ್ನಷ್ಟು ಕುಗ್ಗಿಸುವ ಸಂಧಿಯ ಓಸ್ಟಿಯೊಆಥೆùಟಿಸ್‌ ಆಗಿ ಬದಲಾಗಬಹುದು. ಆಗ ಸಾಮಾನ್ಯವಾಗಿ ಹಿರಿಯ ರೋಗಿಗಳಿಗೆ ಮೀಸಲಾಗಿರುವ ಸಂಧಿಯ ಬದಲಾವಣೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರವಾಗಬಹುದು.

ಮೊಣಕಾಲಿನ ಮೃದು ಕೋಶಗಳ ಆರ್ಥ್ರೊಸ್ಕೊಪಿಕ್‌ ಪುನಾರಚನೆ ಶಸ್ತ್ರಚಿಕಿತ್ಸೆ ಮತ್ತು ದೈಹಿಕ ಪುನಶ್ಚೇತನಗಳಿಂದ ಗಾಯಪೂರ್ವ ಚಟುವಟಿಕೆ ಸಾಮರ್ಥ್ಯ ಮರಳುತ್ತದೆ. ಗಾಯದ ಪರಿಣಾಮ ಅಥವಾ ಕಾಯಿಲೆಯ ಪ್ರಕ್ರಿಯೆಯ ಪರಿಣಾಮವಾಗಿ ಮೊಣಕಾಲು ಸಂಧಿಯ ಕಾರ್ಟಿಲೇಜ್‌ ಲೇಪನ ಹಿಡಿದುಕೊಳ್ಳುವ ಸಮಸ್ಯೆಗೆ ತುತ್ತಾಗುತ್ತಾರೆ. ಪರಿಣಾಮವಾಗಿ ಅದು ಪ್ರತ್ಯೇಕಗೊಳ್ಳುತ್ತದೆ. ಇದನ್ನು ಆಥ್ರೊìಸ್ಕೊಪಿಕ್‌ ಪ್ರಕ್ರಿಯೆಯ ಮೂಲಕ ಪರಿಹರಿಸಬಹುದಾಗಿದೆ. ಸಂಧಿಯ ಸುಗಮ ಚಲನೆಗೆ ಕಾರಣವಾಗುವ ಕಾರ್ಟಿಲೇಜ್‌ ಗಾಯಗೊಂಡಿದ್ದರೆ ಅದನ್ನೂ ಆಥ್ರೊìಸ್ಕೊಪಿಕ್‌ ವಿಧಾನದಿಂದ ದುರಸ್ತಿ ಮಾಡಬಹುದು/ ಪುನಾರಚಿಸಬಹುದು. ಸಂಧಿಯ ಒಳಗೆ ಸೋಂಕು ಉಂಟಾಗಿದ್ದರೆ ಅದಕ್ಕೂ ಆರ್ಥ್ರೊಸ್ಕೊಪಿಕ್‌ ವಿಧಾನದಲ್ಲಿ ಚಿಕಿತ್ಸೆ ಒದಗಿಸಲು ಸಾಧ್ಯವಿದೆ. ಅಲ್ಲದೆ ಇದು ಪರಿಣಾಮಕಾರಿ ಚಿಕಿತ್ಸಾ ವಿಧಾನ ಎಂಬುದು ಸಾಬೀತಾಗಿದೆ. ಮೊಣಕಾಲು ಚಿಪ್ಪು (ಪ್ಯಾಟೆಲ್ಲರ್‌) ಸ್ಥಾನಪಲ್ಲಟವಾಗಿದ್ದರೆ ಅದಕ್ಕೂ ಆರ್ಥ್ರೊಸ್ಕೊಪಿಕ್‌ ವಿಧಾನದಲ್ಲಿ ಚಿಕಿತ್ಸೆಯಿದೆ. 

ಮಣಿಕಟ್ಟು ಸಂಧಿ, ಮೊಣಕೈ, ಪೃಷ್ಠದ ಸಂಧಿ ಮತ್ತು ಪಾದ ಸಂಧಿಗಳ ವಿವಿಧ ಸಮಸ್ಯೆಗಳಿಗೂ ಆರ್ಥ್ರೊಸ್ಕೊಪಿ ವಿಧಾನದ ಮೂಲಕ ಪರಿಣಾಮಕಾರಿ ಚಿಕಿತ್ಸೆ ಒದಗಿಸುವುದು ಸಾಧ್ಯವಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಕ್ರೀಡಾ ಗಾಯ ಮತ್ತು ಆರ್ಥ್ರೊಸ್ಕೊಪಿ ವಿಭಾಗವು ಆರ್ಥ್ರೊಸ್ಕೊಪಿ ಶಸ್ತ್ರಚಿಕಿತ್ಸಾ ಪರಿಣತರು, ಅತ್ಯಾಧುನಿಕ ಚಿಕಿತ್ಸಾ ಸಲಕರಣೆಗಳು, ಪೂರಕ ಸಿಬಂದಿ ಮತ್ತು ಪರಿಣತ ಫಿಸಿಯೊಥೆರಪಿಸ್ಟ್‌ ಗಳನ್ನು ಹೊಂದಿದೆಯಲ್ಲದೆ ಅನೇಕ ರೋಗಿಗಳಿಗೆ ಪರಿಣಾಮಕಾರಿ ಮತ್ತು ಯಶಸ್ವಿಯಾಗಿ ಚಿಕಿತ್ಸೆಯನ್ನು ಒದಗಿಸಿದೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.