ಮುಖ ಗಾಯಗೊಂಡ ರೋಗಿಯ ಆರಂಭಿಕ ನಿಭಾವಣೆ


Team Udayavani, Feb 10, 2019, 12:40 AM IST

face.jpg

ಕೆಟ್ಟದ್ದು ಮುನ್ಸೂಚನೆ ಕೊಟ್ಟು ಬರುವುದಿಲ್ಲ. ನಾವು ಅವುಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ ಇನ್ನಷ್ಟು ಸಮಸ್ಯೆ ಉಂಟಾಗುವುದನ್ನು ತಡೆಯಲು ಅವುಗಳನ್ನು ಸಮರ್ಥವಾಗಿ ಎದುರಿಸಲು ನಾವು ಸನ್ನದ್ಧರಾಗಬಹುದು. ಎಲ್ಲೆಂದರಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದರಿಂದ ಮ್ಯಾಕ್ಸಿಲೊಫೇಶಿಯಲ್‌ ಗಾಯಗಳು ಇಂದು ಅತಿ ಸಾಮಾನ್ಯವಾಗಿವೆ. ರಸ್ತೆ ಅವಘಡಗಳಲ್ಲಿ ಮ್ಯಾಕ್ಸಿಲೊಫೇಶಿಯಲ್‌ ಗಾಯ ಉಂಟಾಗುವುದು ಇಂದು ತೀರಾ ಸಾಮಾನ್ಯವಾಗಿದೆ. ಕಲಹಗಳು, ಕ್ರೀಡಾ ಸಂಬಂಧಿ ಗಾಯಗಳಲ್ಲಿ ಕೂಡ ಮ್ಯಾಕ್ಸಿಲೊಫೇಶಿಯಲ್‌ ಗಾಯ ಉಂಟಾಗುತ್ತವೆ. ಇವೆಲ್ಲವುಗಳ ಪೈಕಿ ಅಪಘಾತಗಳಿಂದ ಅತಿ ಹೆಚ್ಚು ಮ್ಯಾಕ್ಸಿಲೊಫೇಶಿಯಲ್‌ ಗಾಯಗಳು ಉಂಟಾಗುತ್ತವೆ. 

ಮ್ಯಾಕ್ಸಿಲೊಫೇಶಿಯಲ್‌ ಗಾಯಗಳಿಂದ ಸಮಸ್ಯೆಗಳು ಉಂಟಾಗದಂತೆ ಮತ್ತು ಕೆಲವು ಸಂದರ್ಭಗಳಲ್ಲಿ  ಪ್ರಾಣವನ್ನು 
ಉಳಿಸುವುದಕ್ಕೆ ಕೂಡ ಜನಸಾಮಾನ್ಯರು ಏನು ಮಾಡಬಹುದು ಎಂಬ ಮಾಹಿತಿ ಈ ಲೇಖನದಲ್ಲಿದೆ.

– ಕುತ್ತಿಗೆಯನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು: ಯಾವುದೇ ವ್ಯಕ್ತಿಯ ಮುಖಕ್ಕೆ ಗಾಯವುಂಟಾದಾಗ ಅಂತಹ ವ್ಯಕ್ತಿಯ ಬೆನ್ನುಹುರಿಗೂ ಗಾಯವಾಗಿರಬಹುದು ಎಂದು ಶಂಕಿಸಿ ಮುನ್ನಡೆಯಬೇಕು. ಇಂತಹ ಗಾಯಾಳುಗಳನ್ನು ಕರೆದೊಯ್ಯುವಾಗ ಕುತ್ತಿಗೆ ತಿರುಗದಂತೆ, ತಿರುಚಿಕೊಳ್ಳದಂತೆ ಎಚ್ಚರಿಕೆಯಿಂದ ಆಧರಿಸಿ ನೋಡಿಕೊಳ್ಳಬೇಕು. ಇಲ್ಲವಾದರೆ ಈಗಾಗಲೇ ಇರುವ ಗಾಯ ಉಲ್ಬಣಿಸಬಹುದು.
– ರಕ್ತಸ್ರಾವದ ನಿರ್ವಹಣೆ: ಮುಖದ ಮೇಲೆ ಯಾವುದೇ ಗಾಯ ಉಂಟಾಗಿದ್ದು, ರಕ್ತಸ್ರಾವ ಆಗುತ್ತಿದ್ದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಒಯ್ಯುವ ಸಂದರ್ಭದಲ್ಲಿ ಗಾಯದಿಂದ ಆಗುತ್ತಿರುವ ರಕ್ತಸ್ರಾವವನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ಶುಭ್ರ ಬಟ್ಟೆ ಅಥವಾ ಗಾಸ್‌ನಿಂದ ಗಾಯವನ್ನು ಒತ್ತಿ ಹಿಡಿಯುವುದರ ಮೂಲಕ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಹೆಚ್ಚು ರಕ್ತ ನಷ್ಟವಾಗುವುದನ್ನು ತಡೆಯಬಹುದು. 
– ಅವಘಡದಿಂದಾಗಿ ಹಲ್ಲು ಹೊರಕ್ಕೆ ಬಂದಿದ್ದರೆ: ಅವಘಡದಿಂದಾಗಿ ಹಲ್ಲು ಹೊರಬಂದಿದ್ದರೆ ಅದನ್ನು ಗಾಯಾಳುವಿನ ಬಾಯಿಯೊಳಗೆ ಇರಿಸಬೇಕು (ಪ್ರಜ್ಞೆ ಇದ್ದ ಸಂದರ್ಭದಲ್ಲಿ ಮಾತ್ರ) ಮತ್ತು ಗಾಯಾಳುವನ್ನು ಆದಷ್ಟು ಬೇಗನೆ ಆಸ್ಪತ್ರೆಗೆ ಸಾಗಿಸಬೇಕು. ಹಲ್ಲನ್ನು ಬಾಯಿಯೊಳಗೆ ಇರಿಸುವುದು ಸಾಧ್ಯವಾಗದೆ ಇದ್ದರೆ ಅದನ್ನು ಎಲ್ಲ ಮನೆಗಳಲ್ಲಿ ಲಭ್ಯವಿರುವ ಕಡಿಮೆ ಕೊಬ್ಬಿನ ಹಾಲಿನೊಳಗೆ ಮುಳುಗಿಸಿಟ್ಟು ಒಯ್ಯಬೇಕು. ಯಾವುದೇ ಸಂದರ್ಭದಲ್ಲಿ ಹಲ್ಲನ್ನು ಶುದ್ಧಗೊಳಿಸಲು ತೊಳೆಯಬಾರದು ಅಥವಾ ಉಜ್ಜಬಾರದು.
– ಊತದ ನಿರ್ವಹಣೆ: ಅಪಘಾತದ ಬಳಿಕ ದವಡೆಯಲ್ಲಿ ಊತ ಕಂಡುಬಂದರೆ ಬಾಧಿತ ಪ್ರದೇಶ ಮೇಲೆ ಐಸ್‌ ಇರಿಸಬೇಕು. ಇದು ಆಂತರಿಕ ರಕ್ತಸ್ರಾವವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಊತವನ್ನು ಕಡಿಮೆಗೊಳಿಸಲು ಕೂಡ ನೆರವಾಗುತ್ತದೆ. 
– ಮೂಗಿನ ರಕ್ತಸ್ರಾವದ ನಿಭಾವಣೆ: ಮೂಗಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಹೆಪ್ಪುಗಟ್ಟಿದ ರಕ್ತವು ಉಚ್ಛಾಸ-ನಿಶ್ವಾಸಕ್ಕೆ ತಡೆಯಾಗದಂತೆ ಮುಖವನ್ನು ಕೆಳಮುಖವಾಗಿ ಬಾಗಿಸಿ ಹಿಡಿಯಬೇಕು. ಮೂಗಿನ ಹೊಳ್ಳೆಗಳನ್ನು ಸ್ವಲ್ಪಕಾಲ ಒತ್ತಿ ಹಿಡಿಯಬಹುದು. ರಕ್ತಸ್ರಾವವನ್ನು ತಡೆಯಲು ಐಸ್‌ಪ್ಯಾಕ್‌ ಅಥವಾ ಬಟ್ಟೆಯನ್ನು ಮೂಗಿನ ಮೇಲೆ ಇರಿಸಬಹುದು. ಮೂಗಿನಲ್ಲಿ ಗಾಯ ಅಥವಾ ನೋವು ಇದ್ದರೆ ಯಾವುದೇ ರೀತಿಯಲ್ಲಿ ಸರಿಪಡಿಸುವುದಕ್ಕೆ ಹೋಗಬಾರದು; ತಜ್ಞ ವೈದ್ಯರ ಸಲಹೆ ಪಡೆಯಬೇಕು.
– ಮ್ಯಾಕ್ಸಿಲೊಫೇಶಿಯಲ್‌ ಗಾಯ ಹೊಂದಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸುವ ವೇಳೆ ತಲೆಯ ಭಾಗ ಎತ್ತರಿಸಿರುವಂತೆ ಒಯ್ಯಬೇಕು. ಇದು ಉಸಿರಾಟ ನಿರಾತಂಕವಾಗಿರುವುದಕ್ಕೆ ಸಹಾಯ ಮಾಡುತ್ತದೆಯಲ್ಲದೆ ನಾಲಗೆ ಒಳಕ್ಕೆಳೆದುಕೊಳ್ಳದಂತೆ ಕಾಪಾಡುತ್ತದೆ.
– ಗಾಯಾಳುವನ್ನು ಹೆಚ್ಚು ವಿಳಂಬ ಮಾಡದೆ ಆದಷ್ಟು ಬೇಗನೆ ಆಸ್ಪತ್ರೆಗೆ ಕರೆದೊಯ್ಯಬೇಕು.

ಮುಖಕ್ಕೆ ಗಾಯವಾದರೆ ನಿಭಾವಣೆ ಕಷ್ಟ. ಆದರೆ, ಸರಿಯಾದ ಎಚ್ಚರಿಕೆ ತೆಗೆದುಕೊಂಡು ಗಾಯಾಳುವನ್ನು ಕ್ಷಿಪ್ರವಾಗಿ ಆಸ್ಪತ್ರೆಗೆ ರವಾನಿಸಿದರೆ ಅನೇಕ ಸಮಸ್ಯೆಗಳನ್ನು ತಡೆಯಬಹುದು.

– ಆನಂದ ದೀಪ್‌ ಶುಕ್ಲಾ
ರೀಡರ್‌, ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ಸರ್ಜರಿ ವಿಭಾಗ,
ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.