CONNECT WITH US  

ಟ್ವಿಟರಲ್ಲಿ ಮೋದಿ ನಂ.3 , ಟ್ರಂಪ್‌ಗೆ ಮೊದಲ ಸ್ಥಾನ

ಮೈಕ್ರೋಬ್ಲಾಗಿಂಗ್‌ ಸೈಟ್‌ ಟ್ವಿಟರ್‌ನಲ್ಲಿ ವಿಶ್ವದ ಪ್ರಮುಖ ನಾಯ ಕರ ಫಾಲೋವರ್‌ಗಳ ಬಗ್ಗೆ ಹೊಸ ಮಾಹಿತಿ ಬಹಿರಂಗವಾಗಿದ್ದು, ಪ್ರಧಾನಿ ಮೋದಿ 3ನೇ ಸ್ಥಾನ ಪಡೆದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೊದಲ ಸ್ಥಾನದಲ್ಲಿದ್ದು, ಪೋಪ್‌  ಫ್ರಾನ್ಸಿಸ್‌ 2ನೇ ಸ್ಥಾನದಲ್ಲಿದ್ದಾರೆ. ಸಂಪರ್ಕ ಸಂಸ್ಥೆ ಬರ್ಸನ್‌ ಕೋನ್‌ ಆ್ಯಂಡ್‌ ವೂಲ್ಫ್ ನಡೆಸಿದ ಅಧ್ಯಯನ "ಟ್ವಿಪ್ಲೊಮೆಸಿ'ಯಲ್ಲಿ ಈ ಮಾಹಿತಿ ನೀಡಲಾಗಿದೆ.

- 5.20 ಕೋಟಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಫಾಲೋವರ್‌ಗಳು
- 4.50 ಕೋಟಿ ಪೋಪ್‌ ಫ್ರಾನ್ಸಿಸ್‌ ಫಾಲೋವರ್‌ಗಳು
- 4.33 ಕೋಟಿ ಪ್ರಧಾನಿ ಮೋದಿ ಫಾಲೋವರ್‌ಗಳು

06 ಟ್ವಿಟರ್‌ ಖಾತೆಯನ್ನೇ ಹೊಂದಿರದ ಸರಕಾರಗಳು ಲಾವೋಸ್‌,  ಮಾರಿಟಾನಿ ಯಾ, ನಿಕರಾಗುವಾ, ಉತ್ತರ ಕೊರಿಯಾ, ಸ್ವಿಜರ್ಲೆಂಡ್‌, ತುರ್ಕ್‌ಮೆನಿಸ್ಥಾನ

56 ಲಕ್ಷ  ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್‌ ಪ್ರಧಾನಿ ಥೆರೇಸಾ ಮೇ ಅವರನ್ನು ಫಾಲೋ ಮಾಡುತ್ತಿರುವವರ ಸಂಖ್ಯೆ

11 2017 ಮೇ, 2018 ಮೇ ನಡುವೆ ಸೌದಿ ದೊರೆ ಸಲ್ಮಾನ್‌ ಮಾಡಿರುವ ಟ್ವೀಟ್‌ಗಳು

ಅರಬ್‌ ರಾಷ್ಟ್ರಗಳಲ್ಲಿ
- 17 ಕೋಟಿ ಜೋರ್ಡಾನ್‌ನ ರಾಣಿ ರನಿಯಾ (ಮೊದಲ ಸ್ಥಾನ)
- 90ಲಕ್ಷ ಶೇಖ್‌ ಮೊಹಮ್ಮದ್‌- ದುಬಾೖ ಆಡಳಿತಗಾರ (ದ್ವಿ. ಸ್ಥಾನ)
- 70 ಲಕ್ಷ-  ಸಲ್ಮಾನ್‌- ಸೌದಿಯ ದೊರೆ (ತೃತೀಯ ಸ್ಥಾನ)

- ಟ್ರಂಪ್‌ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ  26.4 ಕೋಟಿಗೂ ಹೆಚ್ಚು ಬಾರಿ ಫಾಲೋವರ್ಸ್‌ ಜತೆ ಸಂಪರ್ಕ
- ಭಾರತದ ಪ್ರಧಾನಿ ಮೋದಿಯವರಿಗಿಂತ 1 ಕೋಟಿ ಹೆಚ್ಚುವರಿ ಫಾಲೋವರ್‌ಗಳನ್ನು ಹೊಂದಿರುವ ಟ್ರಂಪ್‌
- ಅಮೆರಿಕದ ವಿದೇಶಾಂಗ ಇಲಾಖೆ ಅಧ್ಯಕ್ಷರೇ ಟ್ರಂಪ್‌ರ ವೈಯಕ್ತಿಕ ಟ್ವಿಟರ್‌ ಖಾತೆ @realDonaldTrump ಅನ್ನು ಫಾಲೋ ಮಾಡುತ್ತಿಲ್ಲ. 


Trending videos

Back to Top