CONNECT WITH US  

ಬಿಟ್‌ಕಾಯಿನ್‌ ಎಂಬ ಡೆಡ್ಲಿ ಡಿಜಿಟಲ್‌ ಕರೆನ್ಸಿ

ದುಡ್ಡು ಎಂದರೆ ವಿನಿಮಯದ ಒಂದು ಮಾಧ್ಯಮ ಅಷ್ಟೆ. ಒಂದು ವಸ್ತುವನ್ನು ದುಡ್ಡು ಎಂದು ಪರಿಗಣಿಸಬೇಕಾದರೆ ಅದು ಚಿನ್ನದಂತೆ ಬೆಲೆ ಬಾಳಬೇಕೆಂದೇನೂ ಇಲ್ಲ. ಸರಕಾರ ದುಡ್ಡು ಎಂದು ಮಾನ್ಯ ಮಾಡಿದೆಲ್ಲವೂ ದುಡ್ಡಾಗಿ ಬಳಸಲ್ಪಡುತ್ತದೆ- ಕಾಗದದ ತುಂಡೂ ಕೂಡಾ!

ಭಾನುವಾರ ರಜಾದಿನ. ಹಾಗಾಗಿ ಪುಟ್ಟು ಶಾಲೆಗೆ ಹೋಗಿಲ್ಲ. ಬೆಳಗ್ಗೆ ಎಬ್ಬಾತ ಕಂಪ್ಯೂಟರ್‌ ಎದುರು ಕುಳಿತು ಏನೋ ಕುಟುಕುಟು ಮಾಡುವುದು ಕಾಣಿಸುತ್ತದೆ. ಬಹೂರಾನಿ ಇನ್ನೂ ಎದ್ದಂತಿಲ್ಲ. ಮಗರಾಯ ಊರಲ್ಲಿಲ್ಲ. ಟೂರ್‌ ಅಂತ ಎಲ್ಲೋ ಹೋಗಿದಾನೆ. ಮೊಮ್ಮಗ ಈ ರೀತಿ ಕಂಪ್ಯೂಟರ್‌ ಎದುರು ಕಾಲಹರಣ ಮಾಡುವುದನ್ನು ಕಂಡು ರಾಯರಿಗೆ ತಾಳ್ಮೆ ತಪ್ಪಿತು. 

ಈ ಪೀಳಿಗೆಯ ಮಕ್ಕಳಿಗೆ ಏನಾಗಿದೆ ಅಂತ? ಅಪ್‌ಬ್ರಿಂಗಿಂಗೇ ಸರಿ ಇಲ್ಲ ಅಂತ ಪಿತ್ತ ನೆತ್ತಿಗೇರಿತು. ತಾಯಿಯೇ ಬೆಳಗ್ಗೆ ಎಂಟು ಗಂಟೆವರೆಗೆ ನಿದ್ದೆ ಹೊಡೆದರೆ ಇನ್ನು ಮಗ ಹೇಗೆ ತಾನೆ ಉದ್ಧಾರ ಆದಾನು? ರಾಯರು ಇನ್ನು ತಡೆಯದಾದರು. ಏನೋ ಅದು ಪುಟ್ಟಾ ಬೆಳಗಾಗೆದ್ದು ಕಂಪ್ಯೂಟರ್‌? ರಾಯರು ಅಬ್ಬರಿಸಿದರು. "ಮೈನಿಂಗ್‌ ಮಾಡ್ತಾ ಇದೇನೆ ಅಜ್ಜಾ' ಮೊಮ್ಮಗ ವಿಚಲಿತ ನಾಗಲಿಲ್ಲ. ಕೂಲಾಗೇ ಹೇಳಿದ. ರಾಯರ ಬೊಬ್ಬೆಗೆ ಹೆದರಿ ಮೂಲೆ ಸೇರುವ ಪ್ರಾಯ ಪುಟ್ಟುವಿಗೆ ಅದ್ಯಾವಾಗಲೇ ಮೀರಿ ಹೋಗಿದೆ. ಇತ್ತೀಚೆಗೆ ಮಕ್ಕಳಿಗೆ ಟೀನೇಜು ಎಂಟು ವರ್ಷಕ್ಕೇ ಆರಂಭವಾಗುತ್ತಿದೆ. ಅಲ್ವೆ?

"ಏನು ಮೈನಿಂಗಾ?' ರಾಯರಿಗೆ ದಿಗಿಲಾಯಿತು. "ಮೈನಿಂಗ್‌, ಗಣಿಗಾರಿಕೆ, ಮೈನಿಂಗ್‌ ಮಾಫಿಯಾ, ಗಣಿಧಣಿ' ಇತ್ಯಾದಿ ಡೈನಾ ಮೈಟ್‌ ಶಬ್ದಗಳನ್ನು ಪೇಪರಿನಲ್ಲಿ ಓದಿಯೇ ಹೆದರಿದ್ದ ರಾಯರಿಗೆ ತಮ್ಮ ಕುಲೋದ್ಧಾರಕ ಮೊಮ್ಮಗನ ಬಾಯಿಂದ ಅಂತಹ ಶಬ್ದ ಕೇಳಿ ಇನ್ನಿಲ್ಲದ ಹೆದರಿಕೆ ಉಂಟಾಯಿತು. ಆಂಧ್ರದ ಜೈಲುಗಳ ಕಂಬಿಗಳು ಅವರ ಮನದಲ್ಲಿ ಮಿಂಚಿ ಮರೆಯಾಯಿತು. ಇದ್ಯಾವ ಕೆಡುಗಾಲ ಬಂತಪ್ಪಾ ದೇವರೇ ಎಂದು ಚಿಂತಿತರಾದರು.

ಏನಾಯೊ ಪುಟ್ಟಾ ನಿನಗೆ? ನಿನಗ್ಯಾಕೆ ಪರಮಾತ್ಮ ಆ ಬುದ್ಧಿ ಕೊಟ್ಟ? ನಿನಗ್ಯಾಕೋ ಮೈನಿಂಗ್‌ನಲ್ಲಿ ಆಸಕ್ತಿ ಶುರುವಾಯ್ತು? ರಾಯರು ಕಳವಳ ವ್ಯಕ್ತಪಡಿಸಿದರು. ದುಡ್ಡು ಮಾಡೊಕೆ ಅಜ್ಜಾ, ಒಂದು ಬಿಟ್‌ಕಾಯಿನ್‌ಗೆ ಈಗ 14,500 ಡಾಲರ್‌ ಅಂತೆ. ನನ್ನ ಫ್ರೆಂಡ್ಸ್‌ ಎÇÉಾ ಶುರು ಮಾಡಿದಾರೆ ಅದರ ಮೈನಿಂಗ್‌. ನಾನೇ ಮಾಡಿಲ್ಲ ಇದುವರೆಗೆ

ಅದೆಂತ¨ªೋ ಬಿಡ್ಕಾಯಿನ್‌? ಬಿಡಾಯಿನ್‌ ಅಲ್ಲ ಅಜ್ಜ, ಬಿಡ್ಕಾಯಿನ್‌. ಬಿಟ್‌! ಬಿಟ್‌  ಅಂದ್ರೆ ಕಂಪ್ಯೂಟರಿನಲ್ಲಿ ಬೈನರಿ ಡಿಜಿಟ್‌.ಇಡೀ ಕಂಪ್ಯೂಟರ್‌ 
ವರ್ಕ್‌ ಆಗೋದೇ ಬಿಟ್‌ ಮತ್ತು ಬೈಟ್ಸ್‌ ಮೇಲೆ ರಾಯರಿಗೆ ಬಿಟ್ಕಾಯಿನ್‌ನ ತಲೆಬುಡ ಅರ್ಥ ಆಗಲಿಲ್ಲ ಅಂತ ಪುಟ್ಟುಗೆ ತಿಳಿದುಹೋಯಿತು. 
ಅದೇನು ಸರಿಯಾಗಿ ಹೇಳ್ಳೋ ಪುಟ್ಟಾ. ಬಿಟ್‌ಕಾಯಿನ್‌ ಅಂದ್ರೆ ಏನು? ಅದರ ಮೈನಿಂಗ್‌ ಅಂದ್ರೆ ಏನು? ರಾಯರು ಆಸಕ್ತಿ ತೋರಿದರು.

ಅಯ್ಯೋ ಅದೇನು ಜನರೇಶನ್ನೋ? ಯಾವ ವಿಚಾರಕ್ಕೂ ಫ‌ಂಡಮೆಂಟಲ್ಸೇ ಗೊತ್ತಿಲ್ಲ. ಅದೇನು ಉದ್ಧಾರ ಆಗಿದಾರೋ? ವಯಸ್ಸು ಮಾತ್ರ ಆಗೋಗಿದೆ ಕತ್ತೆ ತರ, ಬೇರೇನೂ ಉಪಯೋಗಕ್ಕಿಲ್ಲ ಪುಟ್ಟು ಗೊಣಗಾಡತೊಡಗಿದ... ದುಡ್ಡು ಎಂದರೆ ವಿನಿಮಯದ ಒಂದು ಮಾಧ್ಯಮ ಅಷ್ಟೆ. ಅನಾದಿ ಕಾಲದಿಂದಲೂ ದುಡ್ಡು ವಿವಿಧ ರೂಪಗಳನ್ನು ತಾಳಿ ಬಂದಿತ್ತು. ಚಿನ್ನ, ತಾಮ್ರ, ಚರ್ಮ, ಕವಡೆ, ಪೇಪರ್‌ ಕರೆನ್ಸಿ ಇತ್ಯಾದಿ ವಿವಿಧ ರೂಪಗಳಲ್ಲಿ ಬಳಕೆಯಲ್ಲಿತ್ತು ದುಡ್ಡು. ಒಂದು ವಸ್ತುವನ್ನು ದುಡ್ಡು ಎಂದು ಪರಿಗಣಿಸಬೇಕಾದರೆ ಅದು ಚಿನ್ನದಂತೆ ಬೆಲೆ ಬಾಳಬೇಕೆಂದೇನೂ ಇಲ್ಲ. ಅದು ದುಡ್ಡು ಎಂದಾಗಬೇಕಾದರೆ ಮುಖ್ಯವಾಗಿ ಅದು ಕೇಂದ್ರ ಸ್ಥಾನದಿಂದ ನಿಯಂತ್ರಿತವಾದ ಸಾಧನವಾಗಿರಬೇಕಾದುದು ಮುಖ್ಯ. ಎÇÉಾ ದೇಶಗಳಲ್ಲೂ ಸರಕಾರ ಈ ಕೆಲಸ ಮಾಡುತ್ತದೆ. ಸರಕಾರ ದುಡ್ಡು ಎಂದು ಮಾನ್ಯ ಮಾಡಿದ್ದೆಲ್ಲವೂ ದುಡ್ಡಾಗಿ ಬಳಸಲ್ಪಡುತ್ತದೆ- ಕಾಗದದ ತುಂಡೂ ಕೂಡಾ! 

ಆದರೆ ಸರಕಾರೇತರ ದುಡೂx ಇರಬಹುದಲ್ಲವೇ? ಪ್ರಾಯಶಃ ಹೌದು. ಯಾವುದೇ ಸಮುದಾಯ ಒಂದು ವಸ್ತುವನ್ನು ಅದರ ಅಧಿಕಾರದ ಪರಿಧಿಯೊಳಗೆ ದುಡ್ಡು ಎಂದು ಪರಿಗಣಿಸಿದರೆ ಆ ಸಮುದಾಯದೊಳಕ್ಕೆ ಅದು ದುಡ್ಡಾಗಿಯೇ ಕಾರ್ಯ ನಿರ್ವ ಹಿಸುತ್ತದೆ. ಆದರೆ ಅದಕ್ಕೆ ಸರಕಾರದ ಹಾಗೂ ಕಾನೂನಿನ ರಕ್ಷಣೆ ಇರುವುದಿಲ್ಲ. ಅದನ್ನು "ಇಲ್ಲೀಗಲ್‌ ಮನಿ' ಎನ್ನಬಹುದು. ಉದಾಹರಣೆಗೆ ಹವಾಲ ವ್ಯವಹಾರದಲ್ಲಿ ದುಡ್ಡಿನ ಬದಲಾಗಿ ಇಸ್ಪೇಟ್‌ ಕಾರ್ಡಿನ ಹರಿದ ತುಂಡು ಕೂಡಾ ದುಡ್ಡಾಗಿ ಕೆಲಸ ಮಾಡು ತ್ತದೆ ಅಲ್ಲವೇ? ಹೀಗೆಯೇ ಮಾಫಿಯಾ ಅಥವ ಅಂಡರ್ವಲ್ಡ…ì ಒಳಕ್ಕೂ ದುಡ್ಡಿನ ಸಾಗಾಟಕ್ಕೆ ಏನೇನನ್ನು ಬಳಸುತ್ತಾರೋ, ಯಾವೋನಿಗೊತ್ತು ಸಾರ್‌?

ಅದೇ ರೀತಿ ಇಂಟರ್ನೆಟ್‌ ಎಂಬೋ ಮಾಯಾನಗರಿಯಲ್ಲಿ ಇದೀಗ ಬಿಟ್ಕಾಯಿನ್‌ ಎಂಬ ಡಿಜಿಟಲ್‌ ಕರೆನ್ಸಿ ಆರಂಭವಾಗಿದೆ. ಇದೊಂದು ಡಿಜಿಟಲ್‌ ರೂಪದಲ್ಲಿರುವ ದುಡ್ಡು. ಇದನ್ನು 2009 ರಲ್ಲಿ ಆರಂಭಿಸಿದ ವ್ಯಕ್ತಿ ಸತಾಶಿ ನಕಮೋಟೋ. ಆದರೆ ಈ  ಹೆಸರು ಕೂಡಾ ಒಂದು ನಕಲಿ ನಾಮಧೇಯ ಎಂದು ಹೇಳಲಾ ಗುತ್ತದೆ. ಇದು ಚಿನ್ನದಂತೆಯೇ ಅಪರೂಪವಾಗಿ ಇಂಟರ್ನೆಟ್ಟಿನಲ್ಲಿ ಎಲ್ಲೆಲ್ಲೋ ಹುದುಗಿರುತ್ತದೆ. ಅದನ್ನು ಕಂಪ್ಯೂಟರ್‌ ಸಹಾಯ ದಿಂದ ಗಣಿಗಾರಿಕೆ ಮಾಡಿ ಹೊರತೆಗೆಯಬೇಕು. ಅತ್ಯಂತ ಕ್ಲಿಷ್ಟವಾದ ಲೆಕ್ಕಾಚಾರಗಳನ್ನು ಪರಿಹರಿಸಿದರೆ 50 ಬಿಟ್ಕಾಯಿನ್‌ಳ ಒಂದು ನಿಧಿ ನಿಮಗೆ ದೊರಕುತ್ತದೆ. ಮೊದಮೊದಲು ಸುಲಭದಲ್ಲಿ ಸಿಗುತ್ತಿದ್ದರೂ ಅಗೆದಷ್ಟೂ ಕ್ಲಿಷ್ಟವಾಗುತ್ತಾ ಹೋಗುತ್ತದೆ ಈ ಗಣಿಗಾರಿಕೆ. ಇಡೀ ಜಗತ್ತಿನಲ್ಲಿ ಒಟ್ಟಾರೆ 21 ಮಿಲಿಯನ್‌ (2.1 ಕೋಟಿ) ಬಿಟ್‌ಕಾಯಿನ್‌ಗಳು ಮಾತ್ರವೇ ಅಸ್ತಿತ್ವದಲ್ಲಿವೆ ಎಂದು ಹೇಳಲಾಗುತ್ತದೆ. ಅದರ ಗಣಿಗಾರಿಕೆಗೆ ಬೇಕಾದ ತಂತ್ರಾಂಶಗಳನ್ನು ನೀವು ಡೌನ್‌ಲೋಡ್‌ ಮಾಡಿಕೊಂಡು ನಿಮ್ಮ ಗಣಿಗಾರಿಕೆ ಆರಂಭಿಸಬಹುದು. 

ಈ ಬಿಟ್‌ಕಾಯಿನ್‌ಗಳು ಒಂದು ಕರೆನ್ಸಿಯಾಗಿ ಹಲವಾರು ಕಡೆ ಸ್ವೀಕೃತವಾಗುತ್ತದೆ. ಮುಖ್ಯವಾಗಿ ಡಾಲರ್‌ ಇತ್ಯಾದಿ ಅಧಿಕೃತ ಕರೆನ್ಸಿಗಳು ಸ್ವೀಕೃತವಾಗದ ಎಡೆಗಳಲ್ಲಿ ಕೂಡಾ! ಅಂದರೆ ಇಂಟರ್ನೆಟ್ಟಿನಲ್ಲಿ ನಿಮಗೆ ಡ್ರಗ್ಸ್‌ ಇತ್ಯಾದಿ ಕಾನೂನುಬಾಹಿರ ಖರೀದಿಗಳಿಗೆ, ವಾಮಮಾರ್ಗದ ಪಾವತಿಗಳಿಗೆ ಬಿಟ್ಕಾಯಿನ್‌ ಅತ್ಯಂತ ಸೂಕ್ತ. ಇದಕ್ಕೆ ಬ್ಯಾಂಕ್‌ ವೆಚ್ಚ, ವಿನಿಮಯ ದರ ಇದಾವುದೂ ಅನ್ವಯಿಸುವುದಿಲ್ಲ. 

ಆದ್ರೆ ಗಾಬರಿಯಾಗಬೇಡಿ. ಬಿಟ್‌ಕಾಯಿನ್‌ ಮಾರುಕಟ್ಟೆ ಕಾನೂನುಬಾಹಿರ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಇದೀಗ ಅದರದ್ದೇ ಆದ ಒಂದು ಮಾರುಕಟ್ಟೆ ನಿರ್ಮಾಣವಾಗಿದೆ. ಇತರ ಕರೆನ್ಸಿಗಳು ಮಾರಾಟವಾಗುವಂತೆ ಬಿಟ್ಕಾಯಿನ್‌ ಕೂಡಾ ಬಿಕರಿಯಾಗುತ್ತದೆ. ಸದ್ಯಕ್ಕೆ 1 ಬಿಟ್‌ಕಾಯಿನ್‌ ಬೆಲೆ ಸುಮಾರು 14500 ಡಾಲರ್‌! ಅಂದರೆ ಸುಮಾರು 9.25 ಲಕ್ಷ ರುಪಾಯಿಗಳು!! ಇದು ಜಲೈ 2010 ರಲ್ಲಿ ಕೇವಲ 5 ಸೆಂಟ್ಸ್‌ ಇತ್ತು. 

ಹಲವಾರು ಏರಿಳಿತಗಳನ್ನು ಕಂಡ ಈ ಕರೆನ್ಸಿ 2017 ರಲ್ಲಿ ಭಾರಿ ಏರಿಕೆಯನ್ನು ಕಂಡಿದೆ . 1000 ಡಾಲರ್‌ ಮಟ್ಟದಿಂದ 14500 ಡಾಲರ್‌ ಮಟ್ಟಕ್ಕೆ ಏರಿದ ಈ ಬಿಟ್‌ಕಾಯಿನ್‌ಗೆ ಸಾಟಿ ಪ್ರಾಯಶಃ ಜಗತ್ತಿನಲ್ಲಿ ಬೇರಾವುದೇ ಸರಕು ಇರಲಾರದು. ಇದು ಈಗ ಅತ್ಯಂತ ವೇಗವಾಗಿ ಬೆಲೆ ಏರುತ್ತಿರುವ ಕರೆನ್ಸಿ ಹಾಗೂ ಅತ್ಯಂತ ಏರಿಳಿತಕ್ಕೆ ಗುರಿಯಾಗುವ ಕರೆನ್ಸಿ ಕೂಡಾ ಹೌದು. ಆದ್ದರಿಂದಲೇ ಅದಕ್ಕೆ ಈಗ ಬೇಡಿಕೆಯೂ ಜಾಸ್ತಿಯಾಗಿದೆ. ಎಷ್ಟೋ ಜನರು ಶೇರು ಕೊಂಡಂತೆ ದುಡ್ಡುಕೊಟ್ಟು ಬಿಟ್‌ಕಾಯಿನ್‌ ಖರೀದಿಸಿ ತಮ್ಮ ಕಂಪ್ಯೂಟರುಗಳಲ್ಲಿ ದಾಸ್ತಾನು ಮಾಡಿಡುತ್ತಿ¨ªಾರೆ. ಅದೂ ಒಂದು ಮಾರುಕಟ್ಟೆ. ಹಾಗೆಯೇ ಒಂದು ಹೊಸ ಹೂಡಿಕಾ ಹಾದಿ. ಬಿಟ್‌ಕಾಯಿನ್‌ ಮುಖ್ಯವಾಗಿ ಅಮೇರಿಕಾದ ಮೌಂಟ್‌ಗಾಕ್ಸ್‌ ಎಂಬ ಎಕ್ಸ್‌ಚೇಂಜ್‌ನಲ್ಲಿ ಮಾರಾಟವಾಗುತ್ತದೆ. ಜಪಾನ್‌ ಸರಕಾರ ವಂತೂ ಇದಕ್ಕೆ ಕಾನೂನಿನ ಅಸ್ತಿತ್ವವನ್ನೂ ನೀಡಿದೆ. ಭಾರತದಲ್ಲೂ ಇದೀಗ ಬೆಂಗಳೂರು, ಹೈದರಬಾದ್‌ ಎಂಬಂತೆ ಎಲ್ಲೆಡೆ ಬಿಟ್ಕಾ ಯಿನ್‌ ಮಾರುಕಟ್ಟೆ ಕಾರ್ಯ ನಿರ್ವಹಿಸುತ್ತಿದೆ. ಈ ಬಿಟ್ಕಾಯಿನ್‌ ಮಾರುಕಟ್ಟೆ ಕಾಳಧನದಿಂದ ಉತ್ತೇಜಿತವಾದದ್ದು ಖಂಡಿತವಾ ಗಿಯೂ ಸತ್ಯ. ಸರಕಾರದ ಹಸ್ತಕ್ಷೇಪವಿಲ್ಲದೆ ಕಾನೂನುಬಾಹಿರ ಎಡೆಗಳಲ್ಲೆಲ್ಲೋ ಇದು ಉಪಯೋಗಕ್ಕೆ ಬರುವುದೇ ಇದಕ್ಕೆ ಕಾರಣ.

ಭಾರತದ ಮಟ್ಟಿಗೆ ಹೇಳುವುದಾದರೆ ಡಾಲರ್‌ ಅಥವ ಯಾವುದೇ ವಿದೇಶಿ ವಿನಿಮಯದ ವಿಚಾರ ಬರುವಾಗ 'ಫೆಮ' ಸಹಿತ ಆರ್‌ಬಿಐಯ ಹಲವು ಕಾನೂನುಗಳ ನಿಯಂತ್ರಣ ಬರುತ್ತದೆ. ಈಗ ಎಲ…ಆರ್‌ಎಸ್‌ ಸ್ಕೀಮ್‌ ಪ್ರಕಾರ ವಾರ್ಷಿಕ 2.5 ಲಕ್ಷ ಡಾಲರ್‌ವರೆಗೆ ಭಾರತದಿಂದ ದುಡ್ಡನ್ನು ಹೊರಕ್ಕೆ ಕಳುಹಿಸುವ ಅಟೋಮ್ಯಾಟಿಕ್‌ ಅನುಮತಿ ಭಾರತೀಯರಿಗೆ ಇದೆ. ಆದರೆ ಅದರಲ್ಲೂ ಹಲವು ನಿಯಮಗಳು ಇವೆ ಅನ್ನುವುದನ್ನು ಗಮನಿಸಬೇಕು. ಈ ಸೌಲಭ್ಯವನ್ನು ನೈಜವಾದ ವ್ಯವಹಾರಗಳಿಗೆ ಮಾತ್ರವೇ ಬಳಸಿಕೊಳ್ಳಬಹುದಾಗಿದೆ. ಯಾವುದೇ ರೀತಿಯ ಸ್ಪೆಕ್ಯುಲೆಟಿವ್‌ ಅಥವಾ ಊಹಾತ್ಮಕ ವ್ಯವಹಾರಗಳನ್ನು ಈ ಮೂಲಕ ಮಾಡುವಂತಿಲ್ಲ. ಇಂಟರ್ನೆಟ್ಟಿನಲ್ಲಿ ಬರುವ ಫಾರೆಕ್ಸ್‌ ಟ್ರೇಡಿಂಗ್‌ ಇದೇ ಕಾರಣಕ್ಕೆ ಭಾರತೀಯರಿಗೆ ಕಾನೂನುಬಾಹಿರ ವಾಗುತ್ತದೆ. ಬಿಟ್ಕಾಯಿನ್‌ ಎಂಬುದು ಒಂದು ಊಹಾತ್ಮಕ ಮಾರುಕಟ್ಟೆ ಮತ್ತು ಅದಕ್ಕಾಗಿ ಡಾಲರ್‌ ಕಳುಹಿಸುವುದು ಆರ್‌ಬಿಐ ಕಾನೂನಿನ ಉಲ್ಲಂಘನೆಯಾಗುತ್ತದೆ. ಬಿಟ್‌ಕಾಯಿನ್‌ಗೆ ಆರ್‌ಬಿಐ ವತಿಯಿಂದ ಮಾನ್ಯತೆ ಇಲ್ಲ ಎನ್ನುವುದನ್ನು ಹಲವಾರು ಬಾರಿ ಅದು ಸ್ಪಷ್ಟಪಡಿಸಿದೆ. ಈ ಬಗ್ಗೆ ಎಚ್ಚರ ಅಗತ್ಯ. 

ಅದಲ್ಲದೆ, ವಿತ್ತ ಮಂತ್ರಾಲಯವೂ ಕೂಡಾ ಬಿಟ್‌ಕಾಯಿನ್‌ ಎನ್ನುವುದು ಒಂದು ಮೋಡಿ ಮಾಡುವ ಯೋಜನೆ ಹಾಗೂ ಅದಕ್ಕೆ ಭಾರತದಲ್ಲಿ ಕಾನೂನಿನ ಮಾನ್ಯತೆ ಇಲ್ಲ ಎನ್ನುವುದನ್ನು ಮಗದೊಮ್ಮೆ ಸ್ಪಷ್ಟೀಕರಿಸಿದೆ. ಅದಕ್ಕೆ ಸಮಾನವಾದ ಮೌಲ್ಯವನ್ನು ಯಾವುದೇ ಏಜೆನ್ಸಿ ನಿಗದಿಪಡಿಸಿಲ್ಲ. ಕೇವಲ ಊಹಾತ್ಮಕ ಲೆಕ್ಕಾಚಾರ ಗಳೇ ಇದರ ಬೆಲೆಯನ್ನು ಕಂಡುಹಿಡಿಯುತ್ತಿದೆ. ಇದರ ಹಿನ್ನೆಲೆ ಯಲ್ಲಿ ಚಿನ್ನ ಅಥವಾ ಇನ್ನಾವುದೇ ಸೊತ್ತುಗಳ ಆಧಾರವಿಲ್ಲ 
ಹಾಗೂ ಕರೆನ್ಸಿ ನೋಟಿನಂತೆ ಒಂದು ಸರಕಾರದ ಭರವಸೆಯೂ ಇಲ್ಲ. ಇದೊಂದು ಅಪಾಯಕಾರಿ ಹೂಡಿಕೆಯಾಗಿದ್ದು ಇದರಿಂದ ದೂರವಿರುವಂತೆ ಸರಕಾರವು ಜನತೆಯನ್ನು ಎಚ್ಚರಿಸಿದೆ. ಸರಕಾರದ ಎಚ್ಚರಿಕೆಯ ಪ್ರಕಾರ ಕಂಪ್ಯೂಟರ್‌ ಮಾಧ್ಯಮದಲ್ಲಿ ಶೇಖರವಾಗುವ ಇಂತಹ ಡಿಜಿಟಲ್‌ ಕರೆನ್ಸಿಗಳೂ ವೈರಸ್‌, ಹ್ಯಾಕಿಂಗ್‌ ಅಥವಾ ಯಾವುದೇ ಮಾಲ್‌ವೇರ್‌ಗಳ ದಾಳಿಗೆ ಸುಲಭವಾಗಿ ತುತ್ತಾಗಬಹುದು. 

ಅಚಾನಕ್ಕಾಗಿ ಹುಟ್ಟಿಕೊಂಡು ಈ ಪಾಟಿ ಬೆಳೆದ ಬಿಟ್‌ಕಾಯಿನ್‌ ಎಂಬ ಈ ಕರೆನ್ಸಿಯ ಭವಿಷ್ಯವೇನು ಎಂಬುದು ಯಾರಿಗೂ ತಿಳಿ ಯದು. ಬಹುತೇಕ ಗೈರ್‌ಕಾನೂನೀ ವ್ಯವಹಾರಗಳಿಗೆ ವಿನಿ ಯೋಗವಾಗುವ ಈ ಕರೆನ್ಸಿ ಕೇವಲ "ನೀರ ಮೇಲಣ ಗುಳ್ಳೆ ನಿಜವಲ್ಲವೋ ಹರಿಯೇ' ಎನ್ನುವುದೇ ಹೆಚ್ಚು ಸೂಕ್ತ ಅನಿಸುತ್ತದೆ. ಹಾಗೇನಿಲ್ಲ, ನೈಜ ಕರೆನ್ಸಿಗೆ ಪರ್ಯಾಯವಾದ ಈ ವ್ಯವಸ್ಥೆ ಅತ್ಯಂತ ಅಗ್ಗವಾದ ವ್ಯವಸ್ಥೆ ಹಾಗೂ ಅತ್ಯಂತ ಸುಲಭವೂ ಹೌದು ಹಾಗಾಗಿ ಇದು ಆಚಂದ್ರಾರ್ಕ ಚಿರಾಯು ಎನ್ನುವವರೂ ಇದ್ದಾರೆ. ಆದರೆ ಸರಕಾರ ಹಾಗೂ ರಿಸರ್ವ್‌ ಬ್ಯಾಂಕು ವತಿಯಿಂದ ಪದೇ ಪದೇ ಎಚ್ಚರಿಕೆ ಬರುತ್ತಿರುವುದನ್ನು ಎಲ್ಲರೂ ಗಮನದಲ್ಲಿ ಇರಿಸಿಕೊಳ್ಳಲೇ ಬೇಕು. ಆದರೆ ಒಂದೆಡೆ ಬಿಟ್ಕಾಯಿನ್‌ ಕಾನೂನು ಬಾಹಿರ, ಅಪಾಯಕಾರಿ ಎನ್ನುವ ಸರಕಾರವು ಅದನ್ನು ಬ್ಯಾನ್‌ ಮಾಡುವ ಬದಲು ಅದರಲ್ಲಿ ಉಂಟಾಗುವ ಲಾಭಕ್ಕೆ ಕ್ಯಾಪಿಟಲ್‌ ಗೈನ್ಸ್‌ ಕರ ಕಟ್ಟಿ ಎನ್ನುವ ನೋಟೀಸುಗಳನ್ನು ಜನರಿಗೆ ಕಳುಹಿಸಿರುವುದರಿಂದ ಸರಕಾರದ ಸ್ಪಷ್ಟ ನಿಲುವು ಏನೆಂಬುದು ಜನರಿಗೆ ಗೊಂದಲವನ್ನು ಉಂಟುಮಾಡಿದೆ. 

ಸ್ಪಷ್ಟೀಕರಣ: ಕಾಸು-ಕುಡಿಕೆಯಲ್ಲಿ ಕಳೆದ ಹತ್ತು ವರ್ಷಗಳಿಂದ ವಿವಿಧ ಪಾತ್ರ/ ಕಥೆ/ ಹಾಸ್ಯ/ ಸನ್ನಿವೇಶಗಳನ್ನು ಬಳಸಿಕೊಂಡು ಬಂದಿದ್ದೇನೆ. ವಿತ್ತ ಸಂಬಂಧಿ ಮಾಹಿತಿಯನ್ನು ಆಸಕ್ತಿದಾಯಕ ಹಾಗೂ ಪರಿಣಾಮಕಾರಿಯಾಗಿ ದಾಟಿಸುವುದು ಮಾತ್ರ ಇದರ ಉದ್ದೇಶವಾಗಿದೆ. ಗುರುಗುಂಟಿರಾಯರು ಹಾಗೂ ಅವರ ಕುಟುಂಬದದವರ ಪಾತ್ರಗಳೂ ಕೂಡಾ ಸಂಪೂರ್ಣವಾಗಿ ಕಾಲ್ಪನಿಕವಾಗಿದೆ. ಹಾಗೆಯೇ ಕಳೆದ ವಾರ ಬಳಸಿದ ವೈದ್ಯರ ಪಾತ್ರವೂ ಕೇವಲ ಕಾಲ್ಪನಿಕವಾಗಿದ್ದು, ಅದು ಯಾವುದೇ ಊರಿನ ಯಾವುದೇ ವೈದ್ಯರನ್ನು ಉದ್ಧೇಶಿಸಿ ಬರೆದಿದ್ದಲ್ಲ. ಕಾಕತಾಳೀಯವಾಗಿ ಅದು ಯಾರನ್ನಾದರು ಹೋಲುತ್ತಿದ್ದು ಅದರಿಂದ ಅವರಿಗೆ ನೋವು ಉಂಟಾಗಿದ್ದಲ್ಲಿ ಅದಕ್ಕಾಗಿ ವಿಷಾದಿಸುತ್ತೇನೆ.

ಜಯದೇವ ಪ್ರಸಾದ ಮೊಳೆಯಾರ


Trending videos

Back to Top