CONNECT WITH US  

ಶ್ರೀಮನ್ನಾರಾಯಣನ ಟಾರ್ಗೆಟ್‌ 75 ಕೋಟಿ!

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ರಕ್ಷಿತ್‌ ಶೆಟ್ಟಿ ಅಭಿನಯದ "ಅವನೇ ಶ್ರೀಮನ್ನಾರಯಣ' ಚಿತ್ರವು ಸೆಟ್ಟೇರಬೇಕಿತ್ತು. ಆದರೆ, "ಕಿರಿಕ್‌ ಪಾರ್ಟಿ' ಶುರುವಾಗಿ 11 ತಿಂಗಳಾದರೂ ಚಿತ್ರ ಬಿಡುಗಡೆಯಾಗಿಲ್ಲ. ಮೊದಲು ರಕ್ಷಿತ್‌ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುಗಿಯಲಿ ಅಂತಾಯಿತು. ಈಗ ನಿಶ್ಚಿತಾರ್ಥ ಮುಗಿದು ಮೂರು ತಿಂಗಳಾಗಿವೆ. ಇನ್ನೂ ಚಿತ್ರ ಮಾತ್ರ ಸೆಟ್ಟೇರಿಲ್ಲ.

ಇಷ್ಟಕ್ಕೂ ಚಿತ್ರ ಯಾಕೆ ಸೆಟ್ಟೇರಿಲ್ಲ ಎಂದರೆ, ಪ್ರೀ-ಪ್ರೊಡಕ್ಷನ್‌ ಕೆಲಸಗಳೇ ಸುಮಾರು 12 ತಿಂಗಳಾಗಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ. "ಕಳೆದ 12 ತಿಂಗಳುಗಳಿಂದ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ರಕ್ಷಿತ್‌ ಶೆಟ್ಟಿ ಬೆಳಿಗ್ಗೆಯಿಮದ ರಾತ್ರಿಯವರೆಗೂ ಚಿತ್ರಕಥೆ ಹಾಗೂ ಸಂಭಾಷಣೆಯ ಕೆಲಸವನ್ನೇ ಮಾಡುತ್ತಿರುತ್ತಾರೆ. ಈ ಬಾರಿ ಬೆಸ್ಟ್‌ ಕೊಡಬೇಕು ಎನ್ನುವುದು ಎಲ್ಲರ ಆಸೆ. ಚಿತ್ರದ ಬಜೆಟ್‌ 15ರಿಂದ 20 ಕೋಟಿಯಾಗುತ್ತದೆ. ಈ ಚಿತ್ರ 75ರಿಂದ 100 ಕೋಟಿಯಷ್ಟು ಗಳಿಕೆ ಮಾಡಬೇಕು ಎಂದು ಟಾರ್ಗೆಟ್‌ ಇಟ್ಟುಕೊಂಡಿದ್ದೇವೆ. ಚಿತ್ರದ ಬಜೆಟ್‌ ಬಹುಪಾಲು ಸೆಟ್‌ಗೆà ಖರ್ಚಾಗುತ್ತದೆ. ಹಾಲಿವುಡ್‌ ಲೆವೆಲ್‌ನಲ್ಲಿ ಒಂದಿಷ್ಟು ಸೆಟ್‌ಗಳನ್ನು ನಿಮಾಘಣ ಮಾಡುವ ಯೋಚನೆ ಇದೆ. ಒಂದು ಕೋಟೆ ಸೃಷ್ಟಿಸಬೇಕಿದೆ' ಎನ್ನುತ್ತಾರೆ ಅವರು.

ರಕ್ಷಿತ್‌ ಶೆಟ್ಟಿ ಈ ಚಿತ್ರದಲ್ಲಿ ಐದು ಗೆಟಪ್‌ಗ್ಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರದಲ್ಲಿ ಅವರದ್ದು ಭ್ರಷ್ಟ ಪೊಲೀಸ್‌ ಅಧಿಕಾರಿಯ ಪಾತ್ರ. 80ರ ದಶಕದ ಉತ್ತರ ಕರ್ನಾಟಕದ ಊರೊಂದರಲ್ಲಿ ನಡೆಯುವ ಕಾಲ್ಪನಿಕ ಘಟನೆಯನ್ನಿಟ್ಟುಕೊಂಡು ಈ ಚಿತ್ರ ಮಾಡಲಾಗುತ್ತಿದೆ. "ಈಗಿನ ಕಾಲಕ್ಕೆ ಪೊಲೀಸ್‌ ಅಧಿಕಾರಿ ಔಟ್‌ಶರ್ಟ್‌ ಮಾಡಿಕೊಂಡು, ಗುಂಡಿ ಬಿಚ್ಚಿಕೊಂಡಿದ್ದರೆ ಜನ ನಂಬಲ್ಲ. ಏಕೆಂದರೆ, ಈಗೆಲ್ಲಾ ಬಹಳ ಸ್ಟ್ರಿಕ್ಟ್ ಆಗಿದೆ. ಹಾಗಾಗಿ ಆಗಿನ ಕಾಲದಲ್ಲಿ ಹೀಗೊಬ್ಬ ಇದ್ದ ಅಂತ ತೋರಿಸಬಹುದು. ಅಮರಾವತಿ ಎಂಬ ಪುಟ್ಟ ಕಾಲ್ಪನಿಕ ಹಳ್ಳಿಯಲ್ಲಿ ಇಡೀ ಕಥೆ ನಡೆಯುತ್ತದೆ' ಎನ್ನುತ್ತಾರೆ ರಕ್ಷಿತ್‌.

ಈ ಚಿತ್ರದಲ್ಲಿ ರಕ್ಷಿತ್‌ಗೆ ನಾಯಕಿಯಾಗಿ ಸಾನ್ವಿ ಶ್ರೀವಾತ್ಸವ್‌ ನಟಿಸುತ್ತಿದ್ದು, ಅಚ್ಯುತ್‌ ಕುಮಾರ್‌ ಸಹ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಇನ್ನು ಚಿತ್ರವನ್ನು ಪುಷ್ಕರ, ಪ್ರಕಾಶ್‌ (ರಂಗಿ ತರಂಗ) ಮತ್ತು ರಕ್ಷಿತ್‌ ಸೇರಿ ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಸಚಿನ್‌ ನಿರ್ದೇಶಿಸುತ್ತಿದ್ದಾರೆ.


Trending videos

Back to Top