ಮೊಬೈಲ್ ಉಳಿಸಲು ಹೋಗಿ ಮಗುವನ್ನೇ ಕಳೆದುಕೊಂಡ
Team Udayavani, Aug 30, 2017, 5:05 PM IST
ಮುಂಬಯಿ: ಕೈ ಜಾರಿದ ಮೊಬೈಲ್ ಪೋನ್ ಹಿಡಿಯುವ ಯತ್ನದಲ್ಲಿ ತನ್ನ ಮಗಳನ್ನೆ ಕೆಳಗೆ ಬೀಳಿಸಿದ ಘಟನೆಯು ಉಪನಗರದ ಅಂಧೇರಿಯಲ್ಲಿ ಸಂಭವಿಸಿದೆ.
ಆರತಿ ಯಾದವ್ (28) ಅವರ ಗಂಡ ಮತ್ತು ಒಂದೂವರೆ ವರ್ಷದ ಮಗಳು ಅನು ಅಂಧೇರಿ ಪೂರ್ವದ ರಿಹಾಬ್ ಕನಕಿಯ ಕಟ್ಟಡದ ಹತ್ತನೇಯ ಮಹಡಿಯಲ್ಲಿ ವಾಸವಾಗಿದ್ದರು. ಆರತಿ ಮತ್ತು ಮಗಳಾದ ಅನು ಈರ್ವರು ಗೆಲರಿಯಲ್ಲಿ ನಿಂತಿದ್ದರು.ಆರತಿ ಅವರ ಪೋನ್ ಕೈ ಜಾರಿದ್ದು ಹಿಡಿಯುಲು ಪ್ರಯತ್ನಿಸಿದಾಗ ಮಗಳಾದ ಅನು ನೂಕಲ್ಪಟ್ಟು ಹತ್ತನೆ ಮಹಡಿಯಿಂದ ಕೆಳಗೆ ಬಿದ್ದಿತು.
ತತ್ಕ್ಷಣ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಯಿತಾದರೂ ಅದು ಮಾರ್ಗಮಧ್ಯೆ ಸಾವನ್ನಪ್ಪಿತು ಎಂದು ಮೂಲಗಳು ತಿಳಿಸಿದೆ.