ಇಂದಿನಿಂದ ಹೆದ್ದಾರಿ ಟೋಲ್ ಶುಲ್ಕ ಹೆಚ್ಚಳ
Team Udayavani, Apr 1, 2018, 6:00 AM IST
ಹೊಸದಿಲ್ಲಿ: ಭಾರತೀಯ ಹೆದ್ದಾರಿ ಪ್ರಾಧಿಕಾರವು (ಎನ್ಎಚ್ಎಐ) ತನ್ನ ವ್ಯಾಪ್ತಿಯಲ್ಲಿನ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ಗಳ ಶುಲ್ಕವನ್ನು ಶೇ. 5ರಿಂದ 7ಕ್ಕೆ ಹೆಚ್ಚಿಸಲು ತೀರ್ಮಾನಿಸಿದೆ. ಪರಿಷ್ಕೃತ ದರಗಳು ಮಾ.31ರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದ್ದು, ಟೋಲ್ಗಳ ಮೂಲಕ ಸಾಗುವವರಿಗೆ ಹೆಚ್ಚುವರಿ ಪ್ರಯಾಣ ದರದ ಬಿಸಿ ತಟ್ಟಲಿದೆ. ಅಂತೆಯೇ, ಹೆದ್ದಾರಿಗಳ ಮೂಲಕ ಸಾಗುವ ದಿನಸಿ ಮತ್ತಿತರ ಉಪಯೋಗಿ ವಸ್ತುಗಳ ಬೆಲೆಯೂ ಗಣನೀಯವಾಗಿ ಹೆಚ್ಚುವ ಸಾಧ್ಯತೆಯಿದೆ. ಈ ಬಗ್ಗೆ ವಿವರಣೆ ನೀಡಿರುವ ಎನ್ಎಚ್-2 ಯೋಜನಾ ನಿರ್ದೇಶಕ ಮೊಹಮ್ಮದ್ ಸಫಿ, “”ಎನ್ಎಚ್ಎಐ ವ್ಯಾಪ್ತಿಗೆ ಬರುವ ದೇಶದ 372 ಟೋಲ್ಗಳಲ್ಲಿಯೂ ಶುಲ್ಕ ಹೆಚ್ಚಾಗಲಿದೆ. ಇವುಗಳ ಮೂಲಕ ಸಾಗುವ ಸರಕುಗಳ ಸಾಗಾಣಿಕೆ ಶುಲ್ಕವನ್ನು ಆಯಾ ಪ್ರದೇಶಗಳ ಸಗಟು ಮಾರಾಟ ದರ ಪಟ್ಟಿಗೆ (ಡಬ್ಲೂéಪಿಐ) ಅನುಗುಣವಾಗಿ ಹೆಚ್ಚಿಸಲಾಗಿದೆ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sadhguru; ಕಾವೇರಿ ಕಾಲಿಂಗ್ ಮೂಲಕ 10.9 ಕೋಟಿ ಸಸಿಗಳ ನಾಟಿ
WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್
Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು