ಮೆರವಣಿಗೆ ವೇಳೆ ಆನೆಯಿಂದ ಕೆಳ ಬಿದ್ದ ಬಿಜೆಪಿ ಶಾಸಕ ;ವಿಡಿಯೋ ನೋಡಿ
Team Udayavani, Oct 8, 2018, 4:42 PM IST
ಕರೀಂ ಗಂಜ್(ಅಸ್ಸಾಂ): ನೂತನವಾಗಿ ವಿಧಾನಸಭೆಯ ಉಪಸಭಾಪತಿಯಾಗಿ ಆಯ್ಕೆಯಾಗಿದ್ದ ಬಿಜೆಪಿ ಶಾಸಕ ಕೃಪಾನಾಥ್ ಮಲ್ಲಾ ಅವರು ಆನೆಯಿಂದ ಆಯತಪ್ಪಿ ಕೆಳಕ್ಕೆ ಬಿದ್ದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ.
ಸ್ವಕ್ಷೇತ್ರದಲ್ಲಿ ಅಭಿಮಾನಿಗಳು ಭವ್ಯ ಸ್ವಾಗತ ನೀಡಲು ಆನೆಯ ಮೇಲೆ ಕುಳ್ಳಿರಿಸಿದ್ದರು. ಆನೆ ಕೊಂಚ ಗಲಿಬಿಲಿಗೊಂಡಿದ್ದು ಓಡಲು ಆರಂಭಿಸಿದೆ. ಈ ವೇಳೆ ಕೃಪಾನಾಥ್ ಅವರು ಕೆಳಕ್ಕೆ ಬಿದ್ದಿದ್ದಾರೆ. ಅದೃಷ್ಟವಷಾತ್ ಅವರಿಗೆ ಯಾವುದೇ ಗಾಯಗಳಾಗಿಲ್ಲ.