ಗೋವಿನ ಜತೆ ಸೆಲ್ಫಿ ಕಳುಹಿಸಿ
Team Udayavani, Nov 13, 2018, 9:51 AM IST
ಕೋಲ್ಕತಾ: ಗೋ ಸಾಕಣೆಯೇ ಎಂದು ಮೂಗು ಮುರಿಯುವವರಿಗೆ ಮಾಹಿತಿಯೊಂದಿದೆ. ವಿಶೇಷವಾಗಿ ಯುವ ಜನರಲ್ಲಿ ಗೋವುಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕೋಲ್ಕತಾ ಮೂಲದ ಗೋ ಸೇವಾ ಪರಿವಾರ ಎಂಬ ಎನ್ಜಿಒ “ಸೆಲ್ಫಿ ವಿತ್ ಕೌ’ ಎಂಬ ಸ್ಪರ್ಧೆ ಆಯೋಜಿಸಿದೆ. ಅಂದ ಹಾಗೆ ಈ ಸ್ಪರ್ಧೆ ಪಶ್ಚಿಮ ಬಂಗಾಳ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ. “ವೈಜ್ಞಾನಿಕವಾಗಿ ಗೋವುಗಳ ರಕ್ಷಣೆ’ ಎನ್ನುವುದು ಅದರ ಧ್ಯೇಯ ವಾಕ್ಯ.
ಸ್ಪರ್ಧೆಯಲ್ಲಿ ಭಾಗವಹಿಸುವವರು ಗೋವಿನ ಜತೆಗೆ ತಾವು ತೆಗೆಸಿಕೊಂಡ ಸೆಲ್ಫಿಯನ್ನು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್ ಹಾಗೂ ವಾಟ್ಸ್ಆ್ಯಪ್ಗ್ಳಲ್ಲಿ ‘#selfiewithgomata‘ ಎಂಬ ಟ್ಯಾಗ್ನ ಅಡಿಯಲ್ಲಿ ಪ್ರಕಟಿಸಬೇಕು. ಉತ್ತಮ ಸೆಲ್ಫಿಗಳಿಗೆ ನ. 20ರಂದು ನಡೆ ಯುವ ಸಮಾರಂಭದಲ್ಲಿ ಗೋ ಮೂತ್ರ ಹಾಗೂ ಸಗಣಿಯಿಂದ ತಯಾರಿಸಿದ ಪಾತ್ರೆ ತೊಳೆಯುವ ಸಾಬೂನು, ಕೀಟನಾಶಕಗಳು, ಸೋಪುಗಳುಳ್ಳ ಉಡುಗೊರೆಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಜತೆಗೆ, ಒಂದು ಸ್ಮರಣಿಕೆ ಹಾಗೂ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.
ಪಶ್ಚಿಮ ಬಂಗಾಳದ ನಾಲ್ಕು ಜಿಲ್ಲೆಗಳಾದ ಪಶ್ಚಿಮ ಮಿಡ್ನಾಪುರ, ಬಂಕುರ, ಪುರುಲಿಯಾ, ಬುರುದ್ವಾನ್ಗಳಲ್ಲಿ 70ಕ್ಕೂ ಅಧಿಕ ಬಯೋ ಗ್ಯಾಸ್ ಸ್ಥಾವರಗಳನ್ನು ಸ್ಥಾಪಿಸಿದ್ದಾಗಿ ಸಂಘಟನೆ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ