ಹಠದಿಂದ ಕಳ್ಳನ ಹಿಡಿದ ಮಹಿಳೆ
Team Udayavani, Jan 11, 2019, 12:30 AM IST
ಮುಂಬಯಿ: ಹಠ ಎಂದರೆ ಇದು. ಎಟಿಎಂನಲ್ಲಿ ಹಣ ವಿಥ್ಡ್ರಾ ಮಾಡುವ ವೇಳೆ ಡೆಬಿಟ್ ಕಾರ್ಡ್ ವಿವರಗಳನ್ನು ಗಮನಿಸಿ ಮೋಸ ಮಾಡಿದಾತನನ್ನು 17 ದಿನದಲ್ಲಿ ಹಿಡಿದು ಪೊಲೀಸರಿಗೆ ಮಹಿಳೆಯೊಬ್ಬರು ಹಿಡಿದು ಕೊಟ್ಟಿದ್ದಾರೆ. ಮೋಸ ಹೋದ ಎಟಿಎಂ ಅನ್ನು ಕಚೇರಿಗೆ ಹೋಗುವ ಮತ್ತು ವಾಪಸಾಗುವ ವೇಳೆ ಸೂಕ್ಷ್ಮವಾಗಿ ಗಮನಿಸಿ ಅವರು ಈ ಸಾಹಸ ಮೆರೆದಿದ್ದಾರೆ. ಮುಂಬೈನಲ್ಲಿ ಈ ಘಟನೆ ನಡೆದಿದ್ದು, ವಡಾಲಾ ನಿವಾಸಿ ಆಗಿರುವ ರೆಹಾನಾ ಶೇಖ್ ಎಂಬು ವರು 17 ದಿನಗಳ ಹಿಂದೆ ಕಚೇರಿಗೆ ತೆರಳುತ್ತಿದ್ದ ವೇಳೆ ಬಾಂದ್ರಾದಲ್ಲಿರುವ ಎಟಿಎಂನಲ್ಲಿ ಹಣ ವಿಥ್ಡ್ರಾ ಮಾಡಲು ತೆರಳಿದ್ದರು. ತಾಂತ್ರಿಕ ಕಾರಣಗಳಿಂದ ಅಗತ್ಯವಾಗಿರುವ ಹಣ ಪಡೆಯಲು ಸಾಧ್ಯವಾಗಲಿಲ್ಲ.
ಈ ಸಂದರ್ಭದಲ್ಲಿ ಎಟಿಎಂ ಹೊರಗಿದ್ದ ವ್ಯಕ್ತಿ ಸಹಾಯ ಮಾಡುವ ನೆಪದಲ್ಲಿ ಒಳಗೆ ಬಂದ. ಆತನ ನೆರವಿನೊಂದಿಗೆ ಮತ್ತೂಮ್ಮೆ ಹಣ ಪಡೆಯುವ ಪ್ರಯತ್ನ ಮಾಡಿದ್ದರು ರೆಹಾನಾ ಶೇಖ್. ಈ ಸಂದರ್ಭದಲ್ಲಿ ಆತ ಕಾರ್ಡ್ ವಿವರಗಳನ್ನು ದಾಖಲಿಸಿಟ್ಟುಕೊಂಡ. ರೆಹಾನಾ ಕಚೇರಿ ತಲಪುವಷ್ಟರಲ್ಲಿ 10 ಸಾವಿರ ರೂ. ವಿಥ್ಡ್ರಾ ಮಾಡಿದ ಬಗ್ಗೆ ಮೊಬೈಲ್ಗೆ ಎಸ್ಎಂಎಸ್ ಬಂದಿತ್ತು. ಕಚೇರಿಯಿಂದ ಮನೆಗೆ ತೆರಳುವ ವೇಳೆ ವಂಚಿಸಿದ ವ್ಯಕ್ತಿ ಅಲ್ಲಿ ಇದ್ದಾನೆಯೇ ಎಂದು ನೋಡಿದರೂ, ಫಲ ಸಿಗಲಿಲ್ಲ. ಆತನನ್ನು ಹಿಡಿಯಲು ಹಠ ತೊಟ್ಟ ರೆಹಾನಾ, 17 ದಿನಗಳ ಕಾಲ ಎಟಿಎಂ ಮೇಲೆ ನಿಗಾ ಇರಿಸಿದರು. ಜ.4ರಂದು ರಾತ್ರಿ 11.30ರ ಸುಮಾರಿಗೆ ರೆಹಾನಾ ವಂಚಿಸಿದ ವ್ಯಕ್ತಿ ಎಟಿಎಂ ಬಳಿ ಇದ್ದಿದ್ದನ್ನು ಗುರುತಿಸಿ, ಕೂಡಲೇ ಆತನ ಮೇಲೆ ಮುಗಿ ಬಿದ್ದು, ಹಿಡಿದು ಪೊಲೀಸರಿಗೆ ಆತನನ್ನು ಒಪ್ಪಿಸಿದರು. ಆತನ ವಿರುದ್ಧ ಇದೇ ಮಾದರಿಯಲ್ಲಿ ವಂಚಿಸಿದ ಬಗ್ಗೆ 7 ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ