CONNECT WITH US  
echo "sudina logo";

ಲಾರಿ ಹರಿದು ಕಾರು ಪುಡಿಯಾದರೂ ವ್ಯಕ್ತಿಗೆ ಏನೂ ಆಗಲಿಲ್ಲ!

ಆಯಸ್ಸು ಗಟ್ಟಿ ಇದ್ದರೆ ತಲೆ ಮೇಲೆ ಬಂಡೆಕಲ್ಲು ಎತ್ತಿಹಾಕಿದರೂ ಏನು ಆಗುವುದಿಲ್ಲ ಎಂಬ ಗಾದೆ ನಮ್ಮಲ್ಲಿದೆ. ಚೀನಾದ ವ್ಯಕ್ತಿಯೊಬ್ಬರ ವಿಷಯದಲ್ಲಿ ಈ ಗಾದೆ ಅಕ್ಷರಶಃ ನಿಜವಾಗಿದೆ.

ಮನೆಯಿಂದ ಆಚೆ ನಿಂತಿದ್ದ ಕಾರಿನಲ್ಲಿ ವ್ಯಕ್ತಿ ಹೋಗಿ ಕುಳಿತುಕೊಳ್ಳುತ್ತಾರೆ. ಕೆಲವೇ ಸೆಕೆಂಡುಗಳಲ್ಲಿ ಲಾರಿಯೊಂದು ಹಾದುಹೋಗುತ್ತದೆ. ಅದರ ಹಿಂದೆಯೇ ದೈತ್ಯ ಆಕಾರದ ಎರಡು ಟೈರ್‌ಗಳು ಕಾರಿಗೆ ಅಪ್ಪಳಿಸುತ್ತವೆ.

ಮೊದಲನೇ ಟೈರ್‌ ನೇರ ಮುಂದಿನ ಬಾನೆಟ್‌ಗೆ ಅಪ್ಪಳಿಸಿದರೆ, ಎರಡನೇ ಟೈರ್‌ ಮೇಲಿಂದ ಹಾರಿಬಂದು
ಕಾರಿನ ಮುಂದಿನ ಗಾಜಿನ ಮೇಲೆ ಅಪ್ಪಳಿಸಿ ಗಾಜನ್ನು ಪುಡಿಗಟ್ಟುತ್ತದೆ. ಇಷ್ಟೆಲ್ಲಾ ಆದರೂ ಕಾರಿನ ಒಳಗೆ ಕುಳಿತಿದ್ದ
ವ್ಯಕ್ತಿ ಸ್ವಲ್ಪವೂ ಗಾಯಗೊಳ್ಳದೇ ಕಾರಿನಿಂದ ಹೊರಬರುತ್ತಾನೆ. 

Trending videos

Back to Top