ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ಕಾಂಗ್ರೆಸ್‌ ಮಂತ್ರ


Team Udayavani, Jul 24, 2017, 1:15 PM IST

24-ANKAN-2.jpg

ರಾಜ್ಯ ಬಿಜೆಪಿಯ ಪ್ರತಿಯೊಂದು ಕಾರ್ಯತಂತ್ರಕ್ಕೂ ಕಾಂಗ್ರೆಸ್‌ ತನ್ನದೇ ಆದ ರೀತಿಯಲ್ಲಿ ಪ್ರತಿತಂತ್ರ ರೂಪಿಸುತ್ತ ಎದಿರೇಟು ನೀಡುತ್ತ ಬರುತ್ತಿದೆ. ಅಲ್ಲದೇ ಬಿಜೆಪಿ ರಾಜ್ಯ ನಾಯಕರ ಕಚ್ಚಾಟಕ್ಕಿಂತ ಚುನಾವಣೆ ಸಂದರ್ಭದಲ್ಲಿ ಅವರು ಅಂತಿಮವಾಗಿ ಬಳಸುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಚುನಾವಣಾ ರಣತಂತ್ರದ ಚಾಣಕ್ಯ ಅಮಿತ್‌ ಷಾ ಕಾರ್ಯತಂತ್ರಕ್ಕಿಳಿದರೆ, ಅವರಿಗೆ ಪ್ರತಿರೋಧ ಒಡ್ಡುವ ಪರ್ಯಾಯ ಅಸ್ತ್ರ ಕಾಂಗ್ರೆಸ್‌ ಬಳಿ ಇದ್ದಂತೆ ಕಾಣುತ್ತಿಲ್ಲ. 

ರಾಜ್ಯ ರಾಜಕಾರಣದಲ್ಲಿ ಚುನಾವಣೆ ವರ್ಷ ಇನ್ನೂ ಹತ್ತು ತಿಂಗಳು ಮುಂದಿರುವಾಗಲೇ ರಾಜಕೀಯ ಪಕ್ಷಗಳ ಚುನಾವಣೆ ಸಿದ್ಧತೆ ಭರದಿಂದ ಸಾಗಿದೆ. ತಂತ್ರಗಾರಿಕೆ ವಿಷಯದಲ್ಲಿ ಬಿಜೆಪಿ ತನ್ನದೇ ಆದ ಯೋಜನೆಗಳನ್ನು ರೂಪಿಸುತ್ತಿದ್ದು ಚುನಾವಣಾ ಯುದ್ದದ ಕಾರ್ಯತಂತ್ರ ಸಿದ್ದಪಡಿಸಿಕೊಳ್ಳುತ್ತಿದೆ. 

ಬಿಜೆಪಿಯ ಚುನಾವಣಾ ಅಸ್ತ್ರಗಳು ದಿನದಿಂದ ದಿನಕ್ಕೆ ಬದಲಾಗುತ್ತವೆ. ಅಲ್ಲದೇ ಹೊಸ ಹೊಸ ಅವಿಷ್ಕಾರಗಳನ್ನೂ ಮಾಡುತ್ತ ರಾಜ್ಯ ವಿಧಾನಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಅನೇಕ ಅಸ್ತ್ರಗಳನ್ನು ಬಳಸಲು ಮುಂದಾಗಿದೆ. ಅದಕ್ಕೆ ಪ್ರತಿಯಾಗಿ ರಾಜ್ಯ ಕಾಂಗ್ರೆಸ್‌ ಕೂಡ ತನ್ನದೇ ಆದ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದು, ಬಿಜೆಪಿಯ ಕಾರ್ಯತಂತ್ರಗಳಿಗೆ ಪ್ರತಿ ತಂತ್ರ ರೂಪಿಸುವ ಚಟುವಟಿಕೆಯಲ್ಲಿ ನಿರತವಾದಂತೆ ಕಾಣುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿಗೆ ಹೆಚ್ಚು ಹೊಸ ಅಸ್ತ್ರಗಳ ಬಳಕೆಗೆ ಅವಕಾಶ ಇದ್ದಂಗಿದೆ. ಪ್ರತಿಪಕ್ಷವಾಗಿ ಬಿಜೆಪಿ ಸರ್ಕಾರದ ಯಾವ ನೀತಿಯನ್ನಾದರೂ ಪ್ರಮುಖ ವಿರೋಧಿ ಅಸ್ತ್ರವನ್ನಾಗಿ ಬಳಸಿ ಆಡಳಿತ ಪಕ್ಷದ ಶಕ್ತಿಯನ್ನ ಕುಂದಿಸುವ ಕೆಲಸ ಮಾಡಬಹುದು. ಅದರ ಮೊದಲ ಪ್ರಯೋಗವೇ ಕರಾವಳಿ ಭಾಗದಲ್ಲಿನ ಕೋಮು ಗಲಭೆಯ ಅಸ್ತ್ರ. 

ಧರ್ಮವನ್ನು ರಾಜಕಾರಣದ ಜೊತೆಗೆ ಬೆರೆಸಿ ಅದರಿಂದ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ತಂತ್ರ ಎಂಬುದು ಪ್ರತಿಪಕ್ಷಗಳ ಆರೋಪ. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ತನ್ನದೇ ಆದ ರೀತಿಯಲ್ಲಿ ಉತ್ತರ ಕೊಡುವ ಪ್ರಯತ್ನ ನಡೆಸುತ್ತಿದೆಯಾದರೂ, ಕರಾವಳಿಯ ಎರಡು ಜಿಲ್ಲೆಗಳ ಸಮಸ್ಯೆಯನ್ನು ಇಡೀ ರಾಜ್ಯದ ಸಮಸ್ಯೆಯಾಗಿಸಲು ಹೊರಟಿರುವ ಬಿಜೆಪಿಗೆ ತಕ್ಕ ಉತ್ತರ ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪ್ರಯತ್ನ ನಡೆಸಿತಾದರೂ, ಕರಾವಳಿಯ ಗಲಭೆಯನ್ನು ರಾಷ್ಟ್ರೀಯ ಸಮಸ್ಯೆಯನ್ನಾಗಿ ಬಿಂಬಿಸಲು ಮುಂದಾಗಿರುವ ಬಿಜೆಪಿ ಕಾರ್ಯತಂತ್ರ  ಇನ್ನೂ ನಿಂತಂತೆ ಕಾಣುತಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್‌ ಪ್ರತಿ ತಂತ್ರ ರೂಪಿಸದೇ ಮೈ ಮರೆತರೆ ದೊಡ್ಡ ಆಘಾತ ನೀಡುವ ಸಾಧ್ಯತೆ ಇದೆ. 

ಇತ್ತೀಚಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ ಪಕ್ಷದ ಸಂಘಟನೆ ವಿಷಯದಲ್ಲಿ ಸ್ಪಲ್ವ ವೇಗ ಪಡೆದಂತೆ ಕಾಣುತ್ತಿದೆ. ವೇಣುಗೋಪಾಲ್‌ ಅವರು ರಾಜ್ಯ ಉಸ್ತುವಾರಿಯಾಗಿ ಬಂದ ನಂತರ ಕೈ ಪಾಳಯದ ಕಾರ್ಯತಂತ್ರ ಸಂಪೂರ್ಣ ಬದಲಾಗಿರುವುದು ಗೋಚರಿಸುತ್ತಿದೆ. ಬೇರು ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ವಿಷಯದಲ್ಲಿ ಬಿಜೆಪಿಯ ಕೇಡರ್‌ ಮುಂದೆ ಕಾಂಗ್ರೆಸ್‌ ಕಾರ್ಯಕರ್ತರ ಪಡೆ ಕಟ್ಟುವ ಕೆಲಸ ಇದುವರೆಗೂ ಮಾಡಿರಲಿಲ್ಲ. ಈಗ ಬಿಜೆಪಿಯ ವಿಸ್ತಾರಕರಿಗೆ ಪೈಪೋಟಿ ಎನ್ನುವಂತೆ ಭೂತ್‌ ಮಟ್ಟದ ಕಾರ್ಯಕರ್ತರ ಪಡೆ ಸಿದ್ದಪಡಿಸುತ್ತಿರುವುದು ಬಿಜೆಪಿಯ ಕಾರ್ಯತಂತ್ರಕ್ಕೆ ಪ್ರತಿತಂತ್ರದ ಒಂದು ಭಾಗವಾಗಿಯೇ ನಡೆಯುತ್ತಿದೆ. 

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಅಧಿಕಾರಕ್ಕೆ ಬಂದ ಮೂರುವರೆ ವರ್ಷಗಳ ವರೆಗೂ ಪಕ್ಷದ ಕಾರ್ಯಕರ್ತರಲ್ಲಿ ನಿರಂತರ ಅಸಮಾಧಾನದ ಹೊಗೆ ಮೂಡುವಂತೆ ಮಾಡಿತ್ತು. ಅಷ್ಟೇ ಅಲ್ಲದೇ ಮುಂದಿನ ಬಾರಿ ತಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರೇ ಮಾನಸಿಕವಾಗಿ ಸಿದ್ಧªರಾದಂತೆ ಕಂಡು ಬರುತ್ತಿತ್ತು. ಆದರೆ, ವೇಣುಗೋಪಾಲ ಆಗಮನದ ನಂತರ ಪಕ್ಷ ಹಾಗೂ ಕಾರ್ಯಕರ್ತರ ಮನಸ್ಥಿತಿ ಬದಲಾಗಿದ್ದು, ನಾಯಕರಿಗಷ್ಟೇ ಅಲ್ಲ ಕಾರ್ಯಕರ್ತರಿಗೂ ಮತ್ತೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಉತ್ಸಾಹ ಬಂದಂತೆ ಕಾಣುತ್ತಿದೆ. 

ಕಾರ್ಯಕರ್ತರ ಉತ್ಸಾಹಕ್ಕೆ ಪೂರಕ ಎನ್ನುವಂತೆ ನಾಯಕರೂ ಆಂತರಿಕ ಭಿನ್ನಾಭಿಪ್ರಾಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡದೆ, ಬಹಿರಂಗವಾಗಿ ಒಗ್ಗಟ್ಟು ತೋರುವ ಪ್ರಯತ್ನ ನಡೆಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹೆಚ್ಚು ಆತ್ಮವಿಶ್ವಾಸ ಬೆಳೆಸಿಕೊಂಡಿದ್ದಾರೆ. ಹೀಗಾಗಿಯೇ ಹೋದಲೆಲ್ಲ ಮತ್ತೆ ತಮ್ಮದೇ ಸರ್ಕಾರ ಎಂದು ಒತ್ತಿ ಒತ್ತಿ ಹೇಳುತ್ತಿದ್ದಾರೆ. 

ಅಲ್ಲದೇ ಬಿಜೆಪಿಯ ರಾಷ್ಟ್ರೀಯ ವಾದ ಮತ್ತು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದ ಅಸ್ಮಿತೆಯ ಪ್ರತ್ಯೇಕ ಧ್ವಜದ ಅಸ್ತ್ರ ಪ್ರಯೋಗಿಸುವ ಮೂಲಕ ಸೂಕ್ತ ಬಾಣವನ್ನೇ ಪ್ರಯೋಗಿಸಿದರು. ಈ ವಿಷಯದಲ್ಲಿ ಕಾಂಗ್ರೆಸ್‌ಗೆ ರಾಜ್ಯದ ಸಾಮಾನ್ಯ ಜನತೆಯ ಬೆಂಬಲವೂ ಬಹುವಾಗಿ ಸಿಕ್ಕಂತೆ ಕಂಡಿತು. ಆದರೆ, ಅಷ್ಟೆ ಪ್ರಮಾಣದಲ್ಲಿ ಅದರ ಲಾಭ ಪಡೆಯುವಲ್ಲಿ ಕಾಂಗ್ರೆಸ್‌ ಸರಿಯಾಗಿ ಬಳಸಿಕೊಳ್ಳಲಿಲ್ಲ ಎನಿಸುತ್ತದೆ.

ಶತಮಾನದ ಇತಿಹಾಸ ಹೊಂದಿರುವ ಪಕ್ಷ ನಮ್ಮದೆಂದು ಕಾಂಗ್ರೆಸ್‌ ಇತಿಹಾಸದ ಜೊತೆ ಜೊತೆಗೆ ಆಧುನಿಕತೆಯ ವಾಸ್ತವ ಜಗತ್ತಿನೊಂದಿಗೆ ಓಡುವ ಗುಣವನ್ನು ಬೆಳೆಸಿಕೊಳ್ಳಬೇಕಿದೆ. ಇಂದಿರಾ ಗಾಂಧಿ ಕಾಲದ ಇತಿಹಾಸದ ಕಥೆ ಹೇಳುತ್ತ ಕೂತರೆ, ಮೋದಿ ಕಾಲದ ಸಾಮಾಜಿಕ ಜಾಲತಾಣದಲ್ಲಿ ಯಾರೂ ಕಾಂಗ್ರೆಸ್‌ ಕಥೆ ಕೇಳುವ ಮನಸ್ಥಿತಿಯಲ್ಲಿಲ್ಲ. ಸಾಮಾಜಿಕ ಜಾಲ ತಾಣ ಎನ್ನುವುದು ಈಗಿನ ಕಾಲದ ಮಿಸೈಲ್‌ ಇದ್ದ ಹಾಗೆ. ಅದರ ಪ್ರಯೋಗ ಯಾರು ಎಲ್ಲಿಂದ ಮಾಡುತ್ತಾರೋ ಗೊತ್ತಿಲ್ಲ. ಆದರೆ, ವೈರಿಯಾರೆಂಬುದು ಅದಕ್ಕೆ ಸ್ಪಷ್ಟವಾಗಿ ಗೊತ್ತಿರುತ್ತದೆ. ಹೀಗಾಗಿ ವೈರಿಯನ್ನು ಗುರಿಯಿಟ್ಟು ಎಲ್ಲಿಂದ ಪ್ರಯೋಗಿಸಿದರೂ ಯಶಸ್ವಿಯಾಗುವ ಗುಣ ಹೊಂದಿದೆ. ಕಾಂಗ್ರೆಸ್‌ ಇನ್ನೂ ಸಾಮಾಜಿಕ ಜಾಲ ತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮನಸ್ಥಿತಿಗೆ ತಲುಪಿದಂತೆ ಕಾಣುತ್ತಿಲ್ಲ. ಇಲ್ಲದಿದ್ದರೆ, ಪ್ರತ್ಯೇಕ ಧ್ವಜದ ವಿಷಯದಲ್ಲಿಯೇ ಬಿಜೆಪಿಯ ರಾಷ್ಟ್ರೀಯತೆಯ ತಂತ್ರಕ್ಕೆ ರಾಜ್ಯದ ಅಸ್ಮಿತೆಯ ವಿಷಯದಲ್ಲಿ ದೊಡ್ಡ ಏಟು ಕೊಡಬಹುದಿತ್ತು. 

ಸದ್ಯದ ರಾಜ್ಯದ ರಾಜಕೀಯ ಪರಿಸ್ಥಿತಿ ಅವಲೋಕಿಸಿದಾಗ ಸಂಘಟನೆಯ ವಿಷಯದಲ್ಲಿ ಬಿಜೆಪಿ ಶಕ್ತವಾಗಿ ಕಂಡರೂ ಕಾಂಗ್ರೆಸ್‌ ಉತ್ಸಾಹದಲ್ಲಿದ್ದಂತೆ ಕಾಣುತ್ತದೆ. ಅಲ್ಲದೇ ನಾಯಕರ ಒಗ್ಗಟ್ಟು ಕೂಡ ಸ್ವಲ್ಪ ಮಟ್ಟಿನ ಸಹಕಾರ ನೀಡಿದಂತಿದೆ. ಬಿಜೆಪಿಯ ಕಾರ್ಯಕರ್ತರ ಶ್ರಮಕ್ಕೆ ನಾಯಕರಲ್ಲಿನ ಒಗ್ಗಟ್ಟಿನ ಕೊರತೆಯೇ ತಣ್ಣಿರೆರಚಿದಂತೆ ಕಾಣುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಕಾರ್ಯ ಚಟುವಟಿಕೆಗಳಿಗೂ ಎರಡೂ ಮನೆಯ ವಿರೋಧ ಪಕ್ಷದ ನಾಯಕರ ಸಾಥ್‌ ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿರುವುದರಿಂದ ಸಂಘಟನೆ ವಿಷಯದಲ್ಲಿ ಕಾಂಗ್ರೆಸ್‌ ಒಂದು ಹೆಜ್ಜೆ ಮುಂದೆ ಇದ್ದಂತೆ ಕಾಣುತ್ತದೆ. 

ರಾಜ್ಯ ಬಿಜೆಪಿಯ ಪ್ರತಿಯೊಂದು ಕಾರ್ಯತಂತ್ರಕ್ಕೂ ಕಾಂಗ್ರೆಸ್‌ ತನ್ನದೇ ಆದ ರೀತಿಯಲ್ಲಿ ಪ್ರತಿತಂತ್ರ ರೂಪಿಸುತ್ತ ಎದಿರೇಟು ನೀಡುತ್ತ ಬರುತ್ತಿದೆ. ಅಲ್ಲದೇ ಬಿಜೆಪಿ ರಾಜ್ಯ ನಾಯಕರ ಕಚ್ಚಾಟಕ್ಕಿಂತ ಚುನಾವಣೆ ಸಂದರ್ಭದಲ್ಲಿ ಅವರು ಅಂತಿಮವಾಗಿ ಬಳಸುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಚುನಾವಣಾ ರಣತಂತ್ರದ ಚಾಣಕ್ಯ ಅಮಿತ್‌ ಶಾ ಕಾರ್ಯತಂತ್ರಕ್ಕಿಳಿದರೆ, ಅವರಿಗೆ ಪ್ರತಿರೋಧ ಒಡ್ಡುವ ಪರ್ಯಾಯ ಅಸ್ತ್ರ ಕಾಂಗ್ರೆಸ್‌ ಬಳಿ ಇದ್ದಂತೆ ಕಾಣುತ್ತಿಲ್ಲ. ರಾಹುಲ್‌ ಗಾಂಧಿ ಸದ್ಯಕ್ಕೆ ಅದಕ್ಕೆ ಪರ್ಯಾಯದಂತೆ ಕಾಣುತ್ತಿಲ್ಲ. ಈ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್‌ ಕೇಂದ್ರದ ಅಸ್ತ್ರಗಳ ಮೇಲೆ ಹೆಚ್ಚು ನಂಬಿಕೊಳ್ಳದೇ ತನ್ನ ಶಕ್ತಿಯನ್ನೇ ಬಳಸಿಕೊಂಡು ಯುದ್ದ ಭೂಮಿಗಿಳಿದರೆ ಹೆಚ್ಚಿನ ಅನುಕೂಲವಾಗುವ ಸಾಧ್ಯತೆಯಿದೆ. 

ಆದರೆ,ಈಗಿನ ಕಾಂಗ್ರೆಸ್‌ ಲೆಕ್ಕಾಚಾರ ನೋಡಿದರೆ, ಮೋದಿಗೆ ಪರ್ಯಾಯವಾಗಿ ಇಂದಿರಾ ಗಾಂಧಿ ಹೆಸರು ಬಳಸಿಕೊಳ್ಳಲು ಕಾಂಗ್ರೆಸ್‌ ಆಲೋಚಿಸಿದಂತೆ ಕಾಣುತ್ತಿದೆ. ಅದಕ್ಕಾಗಿಯೇ ಇಂದಿರಾ ಗಾಂಧಿಯ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರುವ ಯೋಚನೆ ಹಾಕಿದಂತಿದೆ. ಆದರೆ, ಕಾಂಗ್ರೆಸ್‌ನ ಈ ಪ್ರಯೋಗ ಬಹಳ ಸೂಕ್ಷ್ಮವಾಗಿದ್ದು, ಇದು ಅತ್ಯಂತ ದುಬಾರಿಯಾಗಿ ಪರಿಣಮಿಸಿದರೂ ಆಶ್ಚರ್ಯ ಪಡುವಂತಿಲ್ಲ. ಏಕೆಂದರೆ, ಇಂದಿರಾ ಗಾಂಧಿಯ ಭಾವಚಿತ್ರ ನೋಡಿ ಮತ ಹಾಕುವ ಜನಸಂಖ್ಯೆ ಎಷ್ಟಿದೆೆ. ಅಲ್ಲದೇ ಕಾಂಗ್ರೆಸ್‌ ಅತ್ಯಂತ ಬಲವಾಗಿ ನಂಬಿರುವ ಅಹಿಂದ ವರ್ಗದ ಯುವ ಪೀಳಿಗೆಯನ್ನು ಆ ಭಾವಚಿತ್ರ ಸೆಳೆಯುವ ಆಕರ್ಷಣೆ ಹೊಂದಿದೆಯಾ ಎನ್ನುವುದನ್ನೂ ಗಂಭೀರವಾಗಿಯೇ ಆಲೋಚಿಸಬೇಕಿದೆ. 

ಕಾಂಗ್ರೆಸ್‌ ಪ್ರಧಾನಿ ಮೋದಿಯನ್ನು ಎದುರಿಸಲು ಇಂದಿರಾ ಗಾಂಧಿಯ ಹೆಸರು ಬಳಸುವ ಬದಲು ತಮ್ಮ ಸರ್ಕಾರದ‌ ಸಾಧನೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದರೆ, ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಇದೆ. ವಿಧಾನ ಸಭೆಯ ಚುನಾವಣೆಗೆ ರಾಜ್ಯ ಕಾಂಗ್ರೆಸ್‌ ಮೋದಿಯನ್ನು ಸ್ಪರ್ಧಿಯಾಗಿ ನೋಡದೇ,ರಾಜ್ಯ ಬಿಜೆಪಿ ನಾಯಕರ ವೈಫ‌ಲ್ಯಗಳು ಹಾಗೂ ಅವರ ನಡುನ ಭಿನ್ನಾಭಿಪ್ರಾಯಗಳೇ ಪ್ರಮುಖ ಅಸ್ತ್ರವಾಗಬೇಕು. 

ಪ್ರಧಾನಿ ಮೋದಿಯನ್ನು ವಿರೋಧಿಸುವ ಗೋಜಿಗೆ ಹೋಗದೇ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಆಗುವ ಅನಾಹುತಗಳ ಬಗ್ಗೆ ಅವರ ಹಿಂದಿನ ದುರಾಡಳಿತದ ಬಗ್ಗೆಯೇ ಜನರಿಗೆ ಹೆಚ್ಚು ತಲುಪಿಸುವ ಪ್ರಯತ್ನ ನಡೆಸಿದರೆ, ನಷ್ಟಕ್ಕಿಂತ ಲಾಭ ಹೆಚ್ಚಾಗುವ ಸಾಧ್ಯತೆಯಿದೆ. ಒಂದು ವೇಳೆ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿಯನ್ನು ವಿರೋಧಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ, ಕಾಂಗ್ರೆಸ್‌ಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುವ ಸಾಧ್ಯತೆ ಇದೆ.

ರಾಜ್ಯ ಬಿಜೆಪಿಯ ಕಾರ್ಯತಂತ್ರಕ್ಕೆ ಕಾಂಗ್ರೆಸ್‌ ಇತ್ತೀಚೆಗೆ ಬಸವಣ್ಣನನ್ನೂ ಅಸ್ತ್ರವಾಗಿ ಬಳಸಲು ಆರಂಭಿಸಿದಂತೆ ಕಾಣುತ್ತದೆ. ಬಿಜೆಪಿ ಪ್ರಬಲವಾಗಿ ನಂಬಿರುವ ಲಿಂಗಾಯತ ಸಮುದಾಯವನ್ನು ತನ್ನತ್ತ ಸೆಳೆದುಕೊಳ್ಳಲಾಗದಿದ್ದರೂ, ಅವರಲ್ಲಿ ಗೊಂದಲ ಸೃಷ್ಟಿಸುವ ಕೆಲಸವನ್ನಾದರೂ ಮಾಡುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡುತ್ತಿರುವಂತೆ ಕಾಣುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಹಾಕುವ ಮೂಲಕ ಲಿಂಗಾಯತರಿಗೆ ಸರ್ಕಾರದ ಬಗ್ಗೆ ವಿರೋಧ ಭಾವವನ್ನು ಕಡಿಮೆ ಆಗುವಂತೆ ಸಿದ್ದರಾಮಯ್ಯ ಮಾಡಿದ್ದಾರೆ. 

ಅದಕ್ಕೆ ಪೂರಕ ಎನ್ನುವಂತೆ ಈಗ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗಿಗೂ ಪರೋಕ್ಷ ಪ್ರೇರಣೆ  ನೀಡುತ್ತಿರುವಂತೆ ಕಾಣುತ್ತಿದೆ. ಇದು ಕೂಡ ಬಿಜೆಪಿಯನ್ನು ಎದುರಿಸಲು ಬಳಸುವ ದೊಡ್ಡ ಅಸ್ತ್ರವಾಗಿ ಪರಿಣಮಿಸಲಿದೆ. ಲಿಂಗಾಯತ ಸಮುದಾಯದ ಅಗ್ರಗಣ್ಯ ನಾಯಕರೆಂದು ಪರಿಗಣಿಸಿರುವ ಯಡಿಯೂರಪ್ಪ ಅವರೇ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು. ಲಿಂಗಾಯತ ಸಮುದಾಯವನ್ನು ಗೊಂದಲಕ್ಕೆ ತಳ್ಳುವುದಷ್ಟೇ ಅಲ್ಲದೇ ಸ್ಪಷ್ಟವಾಗಿ ಸಮುದಾಯ ಇಬ್ಭಾºಗವಾಗುವ ಲಕ್ಷಣಗಳು ಎದ್ದು ಕಾಣುತ್ತಿವೆ. ಇದು ಕೂಡ ಚುನಾವಣೆಯ ಮೇಲೆ ಪರಿಣಾಮ ಬೀರುವ ಪ್ರಮುಖ ವಿಷಯವಾಗುವ ಸಾಧ್ಯತೆ ಇದೆ. 

 ಸದ್ಯದ ರಾಜಕೀಯ ಪರಿಸ್ಥಿತಿ ನೋಡಿದರೆ, ಯಾರೂ ಸುಲಭವಾಗಿ ಬಹುಮತ ಸಾಬೀತು ಪಡಿಸುವ ಸಂಖ್ಯೆ ಮುಟ್ಟುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್‌ನೊಂದಿಗೆ ಮರ್ಜಿ ಕಾಯುವ ರಾಜಕಾರಣ ಮುಂದುವರೆಸಿಕೊಂಡು ಹೋಗುತ್ತಿವೆ. ಕಾಂಗ್ರೆಸ್‌ನ ಅನೇಕ ನಾಯಕರಲ್ಲಿ ಆ ಭಾವನೆ ಬಲವಾಗಿ ಬೇರೂರಿದೆ. ಅದರಿಂದ ಹೊರ ಬರುವ ಪ್ರಯತ್ನ ಮಾಡುವುದರ ಜೊತೆಗೆ ಪಕ್ಷದಲ್ಲಿ ಮುಂದೆ ಉದ್ಭವಿಸಬಹುದಾದ ಗೊಂದಲಗಳು ಪಕ್ಷದ ವೇದಿಕೆ ಬಿಟ್ಟು ಹೊರ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೆಚ್ಚಿದೆ. ಕಾಂಗ್ರೆಸ್‌ಗೆ ಹೋಲಿಸಿದರೆ, ಬಿಜೆಪಿಯಲ್ಲಿ ಕೆಜೆಪಿ-ಬಿಜೆಪಿ ಎಂಬ ಆಂತರಿಕ ವೈರಿಗಳ ಪಡೆ ಹೆಚ್ಚಿದ್ದಂತೆ ಕಾಣುತ್ತಿದೆ. ವೈರಿಗಳ ದೌರ್ಬಲ್ಯ ಅರಿತು ದಾಳಿ ಮಾಡುವುದು ಕೂಡ ಯುದ್ಧದ ಒಂದು ಕಾರ್ಯತಂತ್ರ. ಕಾಂಗ್ರೆಸ್‌ ಆ ಅಸ್ತ್ರವನ್ನೂ ಬಲವಾಗಿ ಪ್ರದರ್ಶಿಸಿದರೂ, ಅನುಕೂಲವಾಗುವ ಸಾಧ್ಯತೆಯಿದೆ.

ಶಂಕರ ಪಾಗೋಜಿ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.