ತಿಂಗಳು ಕಳೆದರೂ ಡ್ರೈನೇಜ್‌ ದುರಸ್ತಿಯಿಲ್ಲ: ಆಕ್ರೋಶ


Team Udayavani, May 21, 2018, 3:27 PM IST

21-may-17.jpg

ಕಡಬ: ಕಡಬ ಪೇಟೆಯಲ್ಲಿ ಹೊಟೇಲ್‌ಗ‌ಳ ದ್ರವ ತಾಜ್ಯ ಹರಿಯುವ ಪೈಪ್‌ ಒಡೆದು ಹೊಲಸು ನೀರು ರಸ್ತೆಯ ಬದಿಯಲ್ಲಿ ಉಕ್ಕಿ ಹರಿಯುತ್ತಿರುವ ಪರಿಣಾಮ ವಿಪರೀತ ದುರ್ವಾಸನೆ ಬೀರುತ್ತಿದ್ದು, ಸಮಸ್ಯೆ ಉದ್ಭವವಾಗಿ ತಿಂಗಳು ಕಳೆದರೂ ಸರಿಪಡಿಸಲು ವಿಫಲವಾಗಿರುವ ಪಂಚಾಯತ್‌ ವಿರುದ್ಧ ಸ್ಥಳೀಯ ವರ್ತಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಡಬ ಪೇಟೆಯ ಹೊಟೇಲ್‌ ಗಳು ಹಾಗೂ ರೆಸ್ಟೋರೆಂಟ್‌ಗಳ ದ್ರವತ್ಯಾಜ್ಯವನ್ನು ದ್ರವತ್ಯಾಜ್ಯ ವಿಲೇವಾರಿ ಘಟಕಕ್ಕೆ ಹರಿಸಲು ಅಳವಡಿಸಲಾಗಿರುವ ಪೈಪ್‌ ಒಡೆದ ಪರಿಣಾಮ ಒಂದೂವರೆ ತಿಂಗಳಿನಿಂದ ದುರ್ಗಂಧಪೂರಿತ ಹೊಲಸು ನೀರು ರಸ್ತೆಯ ಪಕ್ಕದಲ್ಲಿಯೇ ಹರಿಯುತ್ತಿದೆ. ವಾಸನೆಯಿಂದಾಗಿ ಅಂಗಡಿಗಳಲ್ಲಿ ಕುಳಿತು ವ್ಯಾಪಾರ ನಡೆಸಲು ಸಾಧ್ಯವಾಗುತ್ತಿಲ್ಲ. ಗ್ರಾಹಕರು ಹಾಗೂ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಪಂಚಾಯತ್‌ನವರು ಪೈಪ್‌ ಒಳಗಿನ ತಡೆಯನ್ನು ತೆಗೆಯಲು ವಿಫ‌ಲರಾಗಿ ಕೈಚೆಲ್ಲಿ ಕುಳಿತಿದ್ದಾರೆ.

ಡ್ರೈನೇಜ್‌ ಬ್ಲಾಕ್‌ ಆಗಿದೆ, ಅದಕ್ಕೆ ತ್ಯಾಜ್ಯ ನೀರು ಬಿಡಬೇಡಿ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಭೆ ಕರೆಯಲಾಗಿದೆ ಬನ್ನಿ ಎಂಬುದಾಗಿ ಒಂದು ಸಲ ಮೌಖೀಕ ಹಾಗೂ ಇನ್ನೊಮ್ಮೆ ಲಿಖೀತ ನೋಟಿಸ್‌ ನೀಡಿ ಹೊಟೇಲ್‌ ಹಾಗೂ ತ್ಯಾಜ್ಯ ಬಿಡುವ ಅಂಗಡಿ ಮಾಲಕರ ಸಭೆ ಕರೆಯಲು ಪ್ರಯತ್ನಿಸಿದ್ದರು. ಅದಕ್ಕೆ ಪೂರಕ ಸ್ಪಂದನೆ ಸಿಗದೆ ಅದೂ ವಿಫಲವಾಗಿದೆ. ದ್ರವ ತ್ಯಾಜ್ಯ ವಿಲೇವಾರಿಗೆ ಎಂದು ಪಂಚಾಯತ್‌ ಹೊಟೇಲ್‌ನವರಿಂದ ಯಾವುದೇ ಹೆಚ್ಚುವರಿ ಶುಲ್ಕ ಸಂಗ್ರಹಿಸುತ್ತಿಲ್ಲ, ನಮಗೆ ದ್ರವ ತ್ಯಾಜ್ಯ ಡ್ರೈನೇಜ್‌ ಒಡೆದು ರಸ್ತೆಯಲ್ಲಿ ಹರಿಯುತ್ತಿರುವ ಹೊಟೇಲ್‌ ದ್ರವತ್ಯಾಜ್ಯ. ರೂ. ಖರ್ಚಾಗುತ್ತಿದೆ ಎನ್ನುತ್ತಾರೆ ಗ್ರಾ.ಪಂ. ಅಧಿಕಾರಿಗಳು.

ಸಮಸ್ಯೆಯ ಕುರಿತು ಹೊಟೇಲ್‌ ಮಾಲಕರನ್ನು ಮಾತನಾಡಿಸಿದರೆ ಸರಿಯಾದ ಯೋಜನೆ ರೂಪಿಸದೆ ಅವೈಜ್ಞಾನಿಕವಾಗಿ ಡ್ರೈನೇಜ್‌ ನಿರ್ಮಿಸುತ್ತಿರುವುದರಿಂದ ಸಮಸ್ಯೆ ಎದುರಾಗಿದೆ ಎನ್ನುತ್ತಾರೆ.

 ಹೋಟೆಲ್‌ನವರು ಸಹಕರಿಸಲಿ
ದುರ್ವಾಸನೆಯಿಂದಾಗಿ ನಮಗೆ ಮೂಗು ಬಿಡಲು ಸಾಧ್ಯವಾಗುತ್ತಿಲ್ಲ. ನಮ್ಮ ಗ್ರಾಹಕರೂ ಸಮಸ್ಯೆ ಎದುರಿಸುತ್ತಿದ್ದಾರೆ. ಪಂಚಾಯತ್‌ ನವರು ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ದ್ರವತ್ಯಾಜ್ಯ ಬಿಡುವ ಅಂಗಡಿ ಹಾಗೂ ಹೊಟೇಲ್‌ ನವರು ಅದಕ್ಕೆ ಸಹಕರಿಸಬೇಕು. 
 - ಮಹ್ಮದ್‌ ಅಶ್ರಫ್‌,
    ಫ್ಯಾನ್ಸಿ ಅಂಗಡಿ ಮಾಲಕ

 ರಸ್ತೆ ಅಗೆಯಲು ಪತ್ರ
ನಾವು ಹೊಟೇಲ್‌ ಹಾಗೂ ಅಂಗಡಿಯವರಿಗೆ ತ್ಯಾಜ್ಯ ಬಿಡದಂತೆ ನೋಟಿಸ್‌ ನೀಡಿದ್ದೇವೆ. ಆದರೂ ದ್ರವತ್ಯಾಜ್ಯ ಬಿಡುತ್ತಲೇ ಇದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗಿದೆ. ಚುನಾವಣ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಕಾಮಗಾರಿಗೆ ಕ್ರಿಯಾ ಯೋಜನೆ ಮಾಡಲು
ಸಾಧ್ಯವಿಲ್ಲ. ನಮ್ಮ ವ್ಯಾಪ್ತಿಯಲ್ಲಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದೇವೆ. ಆದರೆ ಸಾಧ್ಯವಾಗಿಲ್ಲ. ಈ ದ್ರವ ತ್ಯಾಜ್ಯ ಪೈಪ್‌ ಮುಖ್ಯ ರಸ್ತೆಯಲ್ಲಿ ಹಾದು ಹೋಗಿದ್ದು, ಅಲ್ಲಿ ಬ್ಲಾಕ್‌ ಆಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮುಖ್ಯ ರಸ್ತೆಯನ್ನು ಅಗೆಯಲು ಲೋಕೋಪಯೋಗಿ ಇಲಾಖೆಗೆ ಬರೆದುಕೊಳ್ಳಲಾಗಿದೆ.
– ಚೆನ್ನಪ್ಪ ಗೌಡ ಕಜೆಮೂಲೆ, ಕಡಬ ಪಿಡಿಒ

 ನಾಗರಾಜ್‌ ಎನ್‌.ಕೆ.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.