CONNECT WITH US  

ಶಿರಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತ ; ಸಂಚಾರ ಬಂದ್

ಕರಾವಳಿಗೆ ಬಸ್ ಸಂಚಾರ ರದ್ದುಗೊಳಿಸಿದ KSRTC ; ಚಾರ್ಮಾಡಿ ಘಾಟಿ ರಸ್ತೆ ಮೂಲಕ ಸಂಚರಿಸುವ ಬಸ್ ಗಳಿಗೆ ಮಾತ್ರವೇ ಅವಕಾಶ

ನೆಲ್ಯಾಡಿ : ಭಾರೀ ಮಳೆಯ ಕಾರಣದಿಂದ ಶಿರಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತ ಸಂಭವಿಸಿದ್ದು ಸದ್ಯಕ್ಕೆ ಈ ಭಾಗದಲ್ಲಿ ವಾಹನ ಸಂಚಾರವನ್ನು ತಡೆಹಿಡಿಯಲಾಗಿದೆ ಎಂಬ ಮಾಹಿತಿ ಇದೀಗ ಲಭ್ಯವಾಗುತ್ತಿದೆ. ಇಲ್ಲಿನ ಗುಂಡ್ಯ ಗಡಿ ದೇವಳದ ಮೇಲ್ಭಾಗದಲ್ಲಿ ಗುಡ್ಡ ಕುಸಿತವಾಗುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಹಾಸನ ಜಿಲ್ಲಾಧಿಕಾರಿಯವರೊಂದಿಗೆ ದೂರವಾಣಿ ಮೂಲಕ ಶಿರಾಡಿ ಘಾಟಿ ರಸ್ತೆಯ ಸ್ಥಿತಿಗತಿಯ ಮಾಹಿತಿಯನ್ನು ಪಡೆದುಕೊಂಡ ದ.ಕ. ಜಿಲ್ಲಾಧಿಕಾರಿ ಸೆಂಥಿಲ್ ಅವರು ಶಿರಾಡಿ ಘಾಟಿ ರಸ್ತೆಯನ್ನು ಬಳಸದಿರುವಂತೆ ಈ ಭಾಗದ ಮೂಲಕ ಸಂಚರಿಸುವವರಿಗೆ ಮನವಿ ಮಾಡಿಕೊಂಡಿದ್ದಾರೆ. ಮುಖ್ಯವಾಗಿ ಮಂಗಳವಾರ ರಾತ್ರಿ ಸಮಯದಲ್ಲಿ ಶಿರಾಡಿ ಘಾಟಿ ಮೂಲಕ ವಾಹನಗಳ ಸಂಚಾರ ನಡೆಸದಂತೆ ಅವರು ಪ್ರಯಾಣಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕರಾವಳಿ ಪ್ರದೇಶದಲ್ಲಿ ಭಾರಿ ಮಳೆ ಮತ್ತು​​​​​​​ ಶಿರಾಡಿ ಘಾಟ್ ರಸ್ತೆ ಸಂಚಾರ ಸ್ಥಗಿತ ಹಿನ್ನೆಲೆ ಬಸ್ ಸೇವೆ ಸ್ಥಗಿತಗೊಳಿಸಿದ ಕೆಎಸ್.ಆರ್.ಟಿಸಿ. ಬೆಂಗಳೂರಿನಿಂದ ತೆರಳುವ ಬಸ್ ಸೇವೆ ಸ್ಥಗಿತಕ್ಕೆ ಕೆಎಸ್.ಆರ್.ಟಿಸಿ ನಿರ್ಧಾರ. ಮಂಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕುಂದಾಪುರ ಬಸ್ ಸಂಚಾರ ಸ್ಥಗಿತ. ಚಾರ್ಮಾಡಿ ಮಾರ್ಗವಾಗಿ ಎಕ್ಸ್‌ಪ್ರೆಸ್ ಬಸ್ ಹೊರತುಪಡಿಸಿ ಉಳಿದೆಲ್ಲಾ ಬಸ್ ಸಂಚಾರಕ್ಕೆ ಬ್ರೇಕ್. ಚಾರ್ಮಾಡಿ ಮಾರ್ಗವಾಗಿ ಸಂಚರಿಸಲಿರುವ ಕೆಎಸ್.ಆರ್.ಟಿ.ಸಿ.ಯ ಎಕ್ಸ್‌ಪ್ರೆಸ್ ಬಸ್ ಗಳು

ಪ್ರಪಾತಕ್ಕೆ ಜಾರಿದ ಬಸ್ : ತಪ್ಪಿದ ಅನಾಹುತ

ರಾಜನಕಟ್ಟೆ ಎಂಬಲ್ಲಿ ಶಿರಾಡಿ ಘಾಟ್ ರಸ್ತೆಯ ತಿರುವೊಂದರಲ್ಲಿ ಗುಡ್ಡಜರಿತದ ಕಾರಣದಿಂದ ಸರಕಾರಿ ಬಸ್ಸೊಂದು ರಸ್ತೆ ಬಿಟ್ಟು ಪ್ರಪಾತಕ್ಕೆ ಜಾರಿತು. ಆದರೆ ಈ ಸಂದರ್ಭದಲ್ಲಿ ಮರವೊಂದು ತಡೆಯಾದ ಕಾರಣ ಸಂಭಾವ್ಯ ಅನಾಹುತವೊಂದು ತಪ್ಪಿದಂತಾಗಿದೆ. ಭಾರೀ ಮಳೆ ಮತ್ತು ರಸ್ತೆಗಳಿಗೆ ಮಣ್ಣು ಕುಸಿಯುತ್ತಿರುವುದರಿಂದ ರಸ್ತೆ ಜಾರುತ್ತಿದ್ದು ವಾಹನ ಚಾಲನೆ ದುಸ್ತರವೆಣಿಸಿದೆ.


Trending videos

Back to Top