ಭಾರೀ ಬಿರುಗಾಳಿಗೆ ಜನ ತತ್ತರ

Team Udayavani, May 4, 2018, 5:30 PM IST

ray-1.jpg

ರಾಯಚೂರು: ಜಿಲ್ಲಾದ್ಯಂತ ಗುರುವಾರ ಸಂಜೆ ಸತತ ಎರಡೂವರೆ ಗಂಟೆಗಳ ಬೀಸಿದ ಬಿರುಗಾಳಿ ನಾನಾ ಅವಾಂತರಗಳನ್ನು ಸೃಷ್ಟಿಸಿತು. ಗಿಡ, ಮರಗಳು ನೆಲಕ್ಕುರುಳಿದರೆ, ವಿದ್ಯುತ್‌ ಕಂಬಗಳು ಬಿದ್ದು ವಿದ್ಯುತ್‌ ವ್ಯತ್ಯಯವಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಕೆಲವೆಡೆ ಶೆಡ್‌, ಮನೆಗಳ ಟಿನ್‌ಗಳು ಹಾರಿಹೋಗಿ ಜನ ಪರದಾಡುವಂತಾಯಿತು.

ಬಿರುಗಾಳಿಗೆ ಸಂಜೆ ರಸ್ತೆಯಲ್ಲಿ ಧೂಳೆದ್ದು ಪ್ರಯಾಣಿಕರು, ಪಾದಚಾರಿಗಳು ಪರದಾಡುವಂತಾಯಿತು. ಸಂಜೆ ಐದು ಗಂಟೆಯಿಂದ ಶುರುವಾದ ಬಿರುಗಾಳಿಗೆ ಜನ ತತ್ತರಿಸಿ ಹೋದರು. ಬೈಕ್‌ ಸವಾರರು ವಾಹನ ಚಾಲನೆ ಮಾಡಲಾರದಷ್ಟು ಗಾಳಿ ಬೀಸಿತು. ಇದರಿಂದ ಎರಡೂವರೆ ಗಂಟೆಗೂ ಹೆಚ್ಚು ಕಾಲ ಜಿಲ್ಲೆಯ ಜನರನ್ನು ಬಿರುಗಾಳಿ ಬಾಧಿ ಸಿತು.

ನಗರದ ವಿದ್ಯಾಭಾರತಿ ಶಾಲೆ ಪಕ್ಕ ಮರ ನೆಲಕ್ಕುರುಳಿದೆ. ನಗರದಲ್ಲಿ ಬಹುತೇಕ ಸಂಚಾರ ಸ್ಥಬ್ಧಗೊಂಡಿತ್ತು. ಚುನಾವಣೆ ಕಾರ್ಯಗಳಿಗೆ ನಿಯೋಜನೆಗೊಂಡ ಸಿಬ್ಬಂದಿ ಬಿರುಗಾಳಿಯನ್ನು ಲೆಕ್ಕಿಸದೆ ಕೆಲಸ ಮಾಡಿದರೆ, ಕೆಲವೆಡೆ ಆಶ್ರಯಕ್ಕಾಗಿ ಪರದಾಡಿದರು. ಮದುವೆ ದಿನಗಳಾದ್ದರಿಂದ ಶಾಮೀಯಾನಗಳು ಗಾಳಿಗೆ ಹಾರಿದರೆ, ವಿದ್ಯುದಾಲಂಕಾರಕ್ಕಾಗಿ ಅಳವಡಿಸಿದ ಎಲ್‌ಇಡಿ ಬಲ್ಬ್ ಮತ್ತು
ಸ್ಕ್ರೀನ್‌ಗಳು ಒಡೆದು ಸಾವಿರಾರು ರೂ. ಮೌಲ್ಯದ ವಸ್ತುಗಳು ಹಾಳಾದವು. ಹಳ್ಳಿಗಳಲ್ಲಿ ಗುಡಿಸಲುಗಳ ಮೇಲ್ಛಾವಣಿ ತಗಡುಗಳು ಹಾರಿ ಹೋಗಿವೆ.

ಹಂದರ ಕಾಪಾಡಲು ಹರಸಾಹಸ: ಮದುವೆಗಾಗಿ ಹಳ್ಳಿಗಳಲ್ಲಿ ಹಂದರ ಹಾಕಲಾಗುತ್ತದೆ. ಅಲ್ಲಿ ನಿರಂತರ ದೀಪ ಉರಿಯುವಂತೆ ನೋಡಿಕೊಳ್ಳಲಾಗುತ್ತದೆ. ಆದರೆ, ವಿಪರೀತ ಗಾಳಿಗೆ ಹಂದ್ರಗಳು ಮೇಲೆದ್ದು ಹೋಗುವುದನ್ನು ತಡೆಯಲು ಮದುವೆ ಮನೆಯವರು ಸಾಕಷ್ಟು ಹರಸಾಹಸ ಪಟ್ಟರು. ಹಾಗೆ ಹೋಗುವುದು ಅಪಶಕುನ ಎನ್ನುವ ಕಾರಣಕ್ಕೆ ಹಂದರ ಕಾಪಾಡುವುದೇ ದೊಡ್ಡ ಕೆಲಸವಾಗಿತ್ತು.

ಸಂಜೆ ವ್ಯಾಪಾರಕ್ಕೆ ಕುತ್ತು: ಸಂಜೆಯಾದರೆ ಸಾಕು ಸಾವಿರಾರು ರೂ. ವಹಿವಾಟು ಮಾಡುತ್ತಿದ್ದ ರಸ್ತೆ ಬದಿ ವ್ಯಾಪಾರಿಗಳು ಭಾರೀ ಗಾಳಿ ಹೊಡೆತಕ್ಕೆ ನಷ್ಟ  ದುರಿಸುವಂತಾಯಿತು. ಸಂಜೆ ಐದು ಗಂಟೆಯಿಂದಲೇ ಬಿರುಗಾಳಿ ಶುರುವಾದ್ದರಿಂದ ಜನ ಮನೆಗಳತ್ತ ಮುಖ ಮಾಡಿದರು. ಇದರಿಂದ ರಸ್ತೆ ಬದಿ ಮಿರ್ಚಿ ಭಜ್ಜಿ, ಪಾನಿಪುರಿ, ಪಾಪಡ್‌ ಸೇರಿ ವಿವಿಧ ತಿಂಡಿ, ತಿನಿಸು ಮಾರುವ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಯಿತು. ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಕಾಲ ಬೀಸಿದ ಗಾಳಿಯಿಂದ ಸಂಪೂರ್ಣ ವಹಿವಾಟು ಸ್ಥಗಿತಗೊಂಡಿತ್ತು.

ತಗಡು ಬಡಿದು ಗಾಯ: ಲಿಂಗಸುಗೂರು ತಾಲೂಕಿನ ಹಟ್ಟಿಯಲ್ಲಿ ಭಾರಿ ಗಾಳಿಗೆ ಹಲವು ಮನೆ, ಶೆಡ್‌ಗಳ ತಗಡುಗಳು ಹಾರಿ ಹೋಗಿವೆ. ಗಿಡಮರಗಳು ನೆಲಕ್ಕುರುಳಿವೆ. ಭಾರಿ ಗಾಳಿಗೆ ಹಾರಿ ಬಂದ ಟಿನ್‌ಶಿàಟ್‌ ಬೈಕ್‌ ಮೇಲೆ ಹೋಗುತ್ತಿದ್ದ ಸವಾರನಿಗೆ ಬಡಿದು ಗಾಯಗೊಂಡಿದ್ದಾನೆ. ಹಟ್ಟಿಯ ಜತ್ತಿ ಲೈನ್‌, ಗುಂಡೂರಾವ್‌ ಕಾಲೋನಿಗಳಲ್ಲಿ ಹಲವು ಮರಗಳು ನೆಲಕ್ಕುರುಳಿವೆ. ಬಸವ ಸೇವಾ ಸಮಿತಿ ಬಳಿಯ ಶೆಡ್‌ವೊಂದು ಬಿದ್ದಿದೆ. 

500 ಮೀ. ಹಾರಿದ ತಗಡು: ಹಟ್ಟಿಯ ಪಾಮನ ಕಲ್ಲೂರು ಕ್ರಾಸ್‌ ಬಳಿಯ ಮನೆಯೊಂದರ ಬಳಿ ಮದುವೆಗೆ ಹಾಕಿದ್ದ ಹಂದರದ ಮೇಲಿನ ಟಿನ್‌ ಶೀಟ್‌ವೊಂದು ಭಾರಿ ಗಾಳಿಗೆ ಸುಮಾರು 500 ಮೀಟರ್‌ವರೆಗೆ ಹಾರಿಹೋಗಿ ಹೊಲವೊಂದರಲ್ಲಿ ಬಿದ್ದಿದೆ. ಭಾರಿ ಗಾಳಿ ಪರಿಣಾಮ ಪಟ್ಟಣದಲ್ಲಿ ವಿದ್ಯುತ್‌ ವ್ಯತ್ಯಯಗೊಂಡು ಜನ ಕತ್ತಲಲ್ಲಿ ಕಾಲ ಕಳೆಯುವಂತಾಗಿತ್ತು. 

ದೇವದುರ್ಗ ತಾಲೂಕಿನಲ್ಲೂ ಬಿರುಗಾಳಿ ತನ್ನ ಪ್ರಭಾವ ತೋರಿದೆ. ದೇವದುರ್ಗ ಪಟ್ಟಣದ ಗೌತಮ ಓಣಿ,  ಗತ್‌ಸಿಂಗ್‌ ಓಣಿಯಲ್ಲಿ ವಿದ್ಯುತ್‌ ಕಂಬಗಳು, ಮರಗಳು ಧರೆಗುರುಳಿವೆ. ಹೊಸ ಬಸ್‌ ನಿಲ್ದಾಣದಲ್ಲಿ ತಗಡುಗಳು ಹಾರಿ ಹೋಗಿವೆ. ಕಂಬಗಳು ನೆಲಕ್ಕುರುಳಿದಾಗ ವಿದ್ಯುತ್‌ ಸ್ಥಗಿತಗೊಂಡಿದ್ದರಿಂದ ಹೆಚ್ಚಿನ ಅನಾಹುತವಾಗಿಲ್ಲ

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.