CONNECT WITH US  

ಅಕ್ಕಿ ವಡಾ ಮತ್ತು ಕಾಯಿ ಚಟಿ

ಬೇಕಾಗುವ ಸಾಮಗ್ರಿ:
ಅಕ್ಕಿ- 3 ಲೋಟ, ಜೀರಿಗೆ- 2 ಟೀ ಚಮಚ, ಬೆಲ್ಲ - 3 ಟೀ ಚಮಚ, ಉಪ್ಪು$ ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.
ಚಟ್ನಿ ಮಾಡಲು: ತೆಂಗಿನಕಾಯಿ - 1 ಬಟ್ಟಲು, ಒಣಮೆಣಸು 3- 5, ಈರುಳ್ಳಿ 1, ಉಪ್ಪು ರುಚಿಗೆ ತಕ್ಕಷ್ಟು, ಸಕ್ಕರೆ 2 ಚಮಚ.

ತಯಾರಿಸುವ ವಿಧಾನ:
ಅಕ್ಕಿಯನ್ನು 3 ಗಂಟೆಗಳ ಕಾಲ ನೆನೆಸಿ, ತೊಳೆದು, ಉಪ್ಪು ಹಾಕಿ ತರಿತರಿಯಾಗಿ ರುಬ್ಬಿಕೊಂಡು, ಒಂದು ಬಾಣಲೆಗೆ ಹಾಕಿ ಕಾಯಿಸಿ. ಕಾಯಿಸುವಾಗ ಉಂಡೆ ಆಗದ ಹಾಗೆ ಸೌಟಿನಿಂದ ತಿರುವುತ್ತಿರಿ. ತಳ ಬಿಟ್ಟ ಮೇಲೆ ಇಳಿಸಿ. ತಣ್ಣಗಾದ ಮೇಲೆ ಬೆಲ್ಲವನ್ನು ಹಾಕಿ ಚೆನ್ನಾಗಿ ಮೃದುವಾಗುವವರೆಗೆ ನಾದಬೇಕು. ನಂತರ ಚಿಕ್ಕ- ಚಿಕ್ಕ ಉಂಡೆಯನ್ನು ಮಾಡಿ ಪೂರಿ ತರಹ ತಟ್ಟಿ ಎಣ್ಣೆಯಲ್ಲಿ ಉಬ್ಬಿಬರುವವರೆಗೆ ಕರಿಯಬೇಕು. ಇದು ಕಾಯಿ ಚಟ್ನಿಯೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.

ಕಾಯಿ ಚಟ್ನಿ ಮಾಡುವ ವಿಧಾನ: ಒಂದು ಬಟ್ಟಲು ತೆಂಗಿನಕಾಯಿಯನ್ನು ತುರಿದು, ಅದಕ್ಕೆ ಈರುಳ್ಳಿ, ಒಣಮೆಣಸು, ಸಕ್ಕರೆ ಮತ್ತು ಉಪ್ಪನ್ನು ಹಾಕಿ ಹದವಾಗಿ ರುಬ್ಬಿಕೊಳ್ಳಿ. ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಹಾಕಿದರೆ ಚಟ್ನಿ ರೆಡಿ. ಇದು ಅಕ್ಕಿ ರೊಟ್ಟಿ, ಅಕ್ಕಿ ವಡಾ, ಚಪಾತಿ ಮತ್ತು ಪೂರಿಯೊಂದಿಗೆ ತಿನ್ನಲು ಬಲು ರುಚಿ. 

Trending videos

Back to Top